ಜನ ಸಾಮಾನ್ಯರಿಗೆ ಸಂಚಾರಿ ನಿಯಮಗಳ ತಿಳುವಳಿಕೆ ಅಗತ್ಯ : ಅಜಯ್ ಕುಮಾರ್ ಸಿಂಗ್

ಬೆಂಗಳೂರು

   ಸಂಚಾರ ನಿಯಮಗಳ ಕುರಿತು ನಾಗರೀಕರಲ್ಲಿ ತಿಳುವಳಿಕೆ ಇಲ್ಲದಿದ್ದರೆ ಸಂಚಾರ ಸಂಚಾರ ನಿಯಮಗಳ ಪಾಲನೆಯಲ್ಲಿ ಯಶಸ್ಸು ಸಾಧಿಸುವುದು ಸಾಧ್ಯವಿಲ್ಲ ಎಂದು ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆಯುಕ್ತ ಡಾ. ಅಜಯ್‌ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ.

    ನಗರದ ಬೆಂಗಳೂರು ಸಂಚಾರ ನಿರ್ವಹಣಾ ಕೇಂದ್ರದ ಸಭಾಂಗಣದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಆಡಳಿತ) ಡಾ. ಎಂ.ಎ. ಸಲೀಂ ಅವರು ರಚಿಸಿರುವ ಮಹಾನಗರಗಳಲ್ಲಿ ಸಂಚಾರ ನಿರ್ವಹಣೆ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಎಷ್ಟೇ ತಂತ್ರಜ್ಞಾನ ಇದ್ದರೂ ನಾಗರೀಕರಲ್ಲಿ ತಿಳುವಳಿಕೆ ಇಲ್ಲದಿದ್ದರೆ ಸಂಚಾರ ನಿಯಮಗಳ ಪಾಲನೆ ಅಸಾಧ್ಯ ಎಂದು ಅವರು ಹೇಳಿದರು.

    ನಗರದಲ್ಲಿ ಉತ್ತಮ ಸಂಚಾರ ನಿರ್ವಹಣೆಗಾಗಿ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಬಿಡಿಎ, ಬಿಬಿಎಂಪಿ, ಸುಗಮ ಸಾರಿಗೆ ಇಲಾಖೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಸಮಿತಿಯ ವರದಿಯನ್ನಾಧರಿಸಿ ಸಂಚಾರ ವ್ಯವಸ್ಥೆಯನ್ನು ಸುಗುಮಗೊಳಿಸಬೇಕು ಎಂದರು.

    ನಗರದಲ್ಲಿ ಸಂಚಾರ ನಿರ್ವಹಣೆ ಸಂಬಂಧ ಸಂಚಾರಿ ಪೊಲೀಸರಿಗೆ ಹೆಚ್ಚು ಜ್ಞಾನ ಇರುತ್ತದೆ. ಹಾಗಾಗಿ ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು. ನಾನು ಪೊಲೀಸ್ ಅಧಿಕಾರಿಯಾಗಿದ್ದಾಗ ಸಂಚಾರಿ ಪೊಲೀಸ್ ಒಬ್ಬರು ಟ್ರಾಫಿಕ್ ನಿರ್ವಹಣೆ ಬಗ್ಗೆ ಅತ್ಯುತ್ತಮ ಪರಿಹಾರವನ್ನು ನೀಡಿದ್ದನ್ನು ಅವರು ನೆನಪಿಸಿಕೊಂಡರು.

     ಡಾ. ಎಂ.ಎ. ಸಲೀಂ ಅವರು ಸಂಚಾರ ದಟ್ಟಣೆ ನಿರ್ವಹಣೆ ಬಗ್ಗೆ ಅತ್ಯುತ್ತಮ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕವು ಸೇರಿದಂತೆ ಸಂಚಾರ ನಿರ್ವಹಣೆ ಬಗ್ಗೆ ಹೊರಬಂದಿರುವ ಪುಸ್ತಕಗಳು, ಗ್ರಂಥಾಲಯ ಕಪಾಟುಗಳಲ್ಲಿ ಸೇರಬಾರದು. ಅವುಗಳಲ್ಲಿರುವ ಅತ್ಯುತ್ತಮ ಅಂಶಗಳನ್ನು ಜಾರಿಗೊಳಿಸುವುದು ಅತ್ಯವಶ್ಯ ಎಂದು ಹೇಳಿದರು.

     ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ನೀಲಮಣಿ ಎನ್. ರಾಜು ಅವರು ಮಾತನಾಡಿ, ನಗರದಲ್ಲಿ ಬೇರೆಲ್ಲಾ ಸಮಸ್ಯೆಗಳಗಿಂತ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದೆ. ಈ ಕುರಿತು ಸಲೀಂ ಅವರು ಹೊರ ತಂದಿರುವ ಪುಸ್ತಕ ಸಂಚಾರಿ ಪೊಲೀಸರು ಮತ್ತು ನಾಗರೀಕರು ಮಾರ್ಗ ಸೂಚಿಯಾಗಲಿದೆ ಎಂದು ಹೇಳಿದರು.ಜಂಟಿ ಪೊಲೀಸ್ ಆಯುಕ್ತ(ಸಂಚಾರ) ರವಿಕಾಂತೇ ಗೌಡ್ತವರು ಸ್ವಾಗತಿಸಿದರು.ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link