ಬೆಂಗಳೂರು :
ನಗರದಲ್ಲಿ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿದೆ.
ಸ್ಯಾಂಡಲ್ವುಡ್ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣ ಸದ್ದು ಮಾಡ್ತಿರುವ ಬೆನ್ನಲ್ಲೇ ನಗರ ಪೊಲೀಸರು ಕೂಡ ಕಾರ್ಯಾಚರಣೆ ಚುರುಕುಗೊಳಿಸಿರುವ ಪಶ್ಚಿಮ ವಿಭಾಗ ಪೊಲೀಸರು ಇಂದು ಸಿಟಿ ಮಾರ್ಕೆಟ್ ಮತ್ತು ಮೆಟ್ರೋ ಸ್ಟೇಷನ್ ಬಳಿಯ ಪಾರ್ಕಿಂಗ್ ಜಾಗದಲ್ಲಿ ಇಬ್ಬರು ಆಸಾಮಿಗಳು ನಿಷೇಧಿತ ಗಾಂಜಾ ಮತ್ತು ಅಫೀಮನ್ನು ಸಾರ್ವಜನಿಕರಿಗೆ ರಾಜಾರೋಷವಾಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿ ರಾಜುರಾಮ್, ಸುನೀಲ್‌ಕುಮಾರನ್ನ ಪೊಲೀಸರು ಬಂಧಿಸಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಬಂಧಿತ ಆರೋಪಿಗಳ ಮನೆಯಿಂದ 3 ಕೋಟಿ 30 ಲಕ್ಷ ಮೌಲ್ಯದ 1 ಕೆ.ಜಿ 280 ಗ್ರಾಂ ಬ್ರೌನ್ ಶುಗರ್, 475 ಗ್ರಾಂ ಅಫಿಮು, 25 ಮತ್ತು 32 ಗ್ರಾಂ ತೂಕದ ಮಾದಕ ಮಾತ್ರೆಗಳು, 3 ಮೊಬೈಲ್ ಫೋನ್, 2 ಬೈಕ್ಅನ್ನು ವಶಕ್ಕೆ ಪಡೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ