ಮಂಗಳೂರು:
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವ ಧನಂಜಯ ಕುಮಾರ್ ಸೋಮವಾರ ಮಧ್ಯಾಹ್ನ 1.30 ಕ್ಕೆ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ನಿಧನರಾದರು. ಮಂಗಳವಾರ ಬೆಳಗ್ಗೆ 7ರಿಂದ 10ರವರೆಗೆ ನಗರದ ಕದ್ರಿ ಕಂಬಳದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಬಳಿಕ ವೇಣೂರಿಗೆ ಮೃತದೇಹ ಕೊಂಡೊಯ್ದು ಅಂತಿಮ ಸಂಸ್ಕಾರ ನಡೆಸಲಾಗುವುದು.
ದಕ್ಷಿಣ ಭಾರತದ ಪ್ರಥಮ ಬಿಜೆಪಿ ಕೇಂದ್ರ ಸಚಿವ, ಮಂಗಳೂರು ಲೋಕಸಭಾ ಕ್ಷೇತ್ರದ ಪ್ರಥಮ ಬಿಜೆಪಿ ಸಂಸದ ಎನ್ನುವ ಹೆಗ್ಗಳಿಕೆ ವಿ.ಧನಂಜಯ ಕುಮಾರ್ ಅವರದ್ದು, ದ.ಕ ಜಿಲ್ಲೆಯಲ್ಲಿ ದೈತ್ಯ ರಾಜಕೀಯ ಶಕ್ತಿಯಾಗಿ ಬೆಳೆದಿದ್ದ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಅವರನ್ನು ಸತತ 3 ಬಾರಿ ಸೋಲಿಸಿ ಸಂಸದರಾದ ಧನಂಜಯ ಕುಮಾರ್ ಒಂದೊಮ್ಮೆ ವಾಜಪೇಯಿ, ಆಡ್ವಾಣಿಯಂತಹ ನಾಯಕರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸವಾಲೊಡ್ಡಿದರೂ ವಿಜಯ ಪತಾಕೆ ಹಾರಿಸಿದ್ದರು.
ಬಳಿಕ ರಾಜಕೀಯದ ಹಾವು ಏಣಿಯಾಟದಲ್ಲಿ ಬಿಜೆಪಿ ತೊರೆದು ಕೆಜೆಪಿ ಹಾಗೂ ಜೆಡಿಎಸ್ ಸೇರಿದರು. ಅಂತಿಮವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
