ನೀವು ನಿರ್ಭಯವಾಗಿ ಸಂಪುಟ ವಿಸ್ತರಿಸಿ :ಸಿಎಂಗೆ ಜೆಡಿಎಸ್ ಶಾಸಕನ ಅಭಯ

ಬೆಂಗಳೂರು :

   ಕೇಂದ್ರ ಗೃಹ ಸಚಿವ ಹಾಗು ಬಿಜೆಪಿ ಮಾಜಿ ರಾಷ್ಟ್ರಾಧ್ಯಕ್ಷ  ಅಮಿತ್ ಶಾ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ನೀಡಿದ್ದು. ಆದರೆ, ಕೆಲವರನ್ನು ಸಮಾಧಾನ ಪಡಿಸುವುದೇ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.ಎಂ ಟಿ ಬಿ ನಾಗರಾಜ್ ಮತ್ತು ವಿಶ್ವನಾಥ್ ಬಹಿರಂಗ ಹೇಳಿಕೆಗಳು ಬಿಎಸ್ವೈ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.ಈ ಎಲ್ಲಾ ಜಂಜಾಟದ ನಡುವೆ, ಜೆಡಿಎಸ್ ಶಾಸಕರೊಬ್ಬರು, ಮುಖ್ಯಮಂತ್ರಿಗಳಿಗೆ ಅಭಯ ನೀಡಿದ್ದು, “ನೀವು ಏನೂ ಭಯ ಪಡದೇ ಸಂಪುಟ ವಿಸ್ತರಣೆ ಮಾಡಿ” ಎಂದು ಹೇಳಿರುವುದು, ಸಂಚಲನ ಮೂಡಿಸಿದೆ.

    ಈ ಹಿಂದೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ, ಯಡಿಯೂರಪ್ಪ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು. ಸುರೇಶ್ ಗೌಡ, ಜೆಡಿಎಸ್ ಪಕ್ಷ ಬಿಟ್ಟು ಬಿಜೆಪಿ ಸೇರಲಿದ್ದಾರೆಯೇ ಎನ್ನುವ ಗುಸುಗುಸು ಸುದ್ದಿ ಹರಿದಾಡುತ್ತಿತ್ತು. “ಸಿಎಂ ಯಡಿಯೂರಪ್ಪನವರು ಹಿರಿಯರು, ಹೀಗಾಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದೇನೆ. ಅವರ ಜಾಗದಲ್ಲಿ ಸಿದ್ದರಾಮಯ್ಯ ಇದ್ದಿದ್ದರೂ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದೆ” ಎಂದು ಅವರು ಸ್ಪಷ್ಟನೆಯನ್ನು ನೀಡಿದ್ದರು

   ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಸುರೇಶ್ ಗೌಡ, “ಯಾವುದೇ ಕಾರಣಕ್ಕೂ ನಾವು ಯಡಿಯೂರಪ್ಪನವರ ಸರ್ಕಾರವನ್ನು ಬೀಳುವುದಕ್ಕೆ ಬಿಡುವುದಿಲ್ಲ. ಅವರು ಯಾವುದೇ ತೊಂದರೆಯಿಲ್ಲದೇ ಇನ್ನುಳಿದ ಅವಧಿಗೆ ಸರಕಾರ ಮುನ್ನಡೆಸಬಹುದು” ಎಂದು ಹೇಳಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap