ತುಮಕೂರು:
ತುಮಕೂರು ಮೈಸೂರು ರಾ.ಹೆ 33ರಲ್ಲಿ ಕಲ್ಲುಗಣಿಗಾರಿಕೆಯಲ್ಲಿ ಬಳಕೆ ಮಾಡುವ ಸ್ಫೊಟಕ ರಸ್ತೆಯ ಪಕ್ಕದಲ್ಲೆ ಸಿಕ್ಕು ಗ್ರಾಮಸ್ಥರನ್ನು ಆತಂಕಕ್ಕೀಡುಮಾಡಿದ ಘಟನೆ ಕುಣಿಗಲ್ ತಾ. ಗೊಲ್ಲರಹಟ್ಟಿ ಗ್ರಾಮದ ಬಳಿ ಇಂದು ಮದ್ಯಾಹ್ನ ನಡೆದಿದೆ.
ಬೈಕ್ ನಲ್ಲಿ ಬಂದ ಮೂರು ಪ್ಲಾಸ್ಟಿಕ್ ಚೀಲಗಳಲ್ಲಿ ಸ್ಪೋಟಕ ಸಾಗಿಸುತ್ತಿದ್ದರು ಆ ಸಮಯದಲ್ಲಿ ಒಂದು ಚೀಲದಿಂದ ಸ್ಪೋಟಕ ಹೆದ್ದಾರಿಯಲ್ಲಿ ಬಿದಿದ್ದು ಕಂಡ ದಾರಿ ಹೋಕರು ಅವರನ್ನು ಕೂಗಿದರೂ ಆ ವ್ಯಕ್ತಿ ತಿರುಗಿ ನೋಡದೆ ಪರಾರಿಯಾಗಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೂಲಂಕುಶವಾಗಿ ಪರಿಶೀಲಿಸಿದಾಗ ಸ್ಫೋಟದಲ್ಲಿ ಬಳಸುವ ಡಿಟೋನೇಟರ್ ಎಂದು ತಿಳಿದು ಬಂದಿದೆ . ಪೊಲೀಸರಿಗೆ ಮಾಹಿತಿ ನೀಡಿರುವ ಗ್ರಾಮಸ್ಥರು ಸ್ಪೋಟಕ ವನ್ನು ರಸ್ತೆ ಬದಿಗೆ ಸರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
