ಹೊಸಪೇಟೆ :
ತಾಲೂಕಿನ ವಿವಿದೆಡೆ ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಬಳ್ಳಾರಿ ಲೋಕಸಭಾ ಉಪ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರ ಶನಿವಾರ ಭರ್ಜರಿ ಪ್ರಚಾರ ನಡೆಸಿದರು.
ತಾಲೂಕಿನ ಕಡೆಯ ಗ್ರಾಮವಾದ ಭುವನಹಳ್ಳಿಯಿಂದ ಪ್ರಚಾರ ಆರಂಭಿಸಿದ ಆನಂದಸಿಂಗ್ ಬಳಿಕ ಗಾದಿಗನೂರಿನಲ್ಲಿ ಮಾತನಾಡಿ, ‘ಶ್ರೀರಾಮುಲು, ಜೆ.ಶಾಂತ ಅವರು ಲೋಕಸಭಾ ಸದಸ್ಯರಾಗಿದ್ದಾಗ ಸಂಸತ್ತಿನಲ್ಲಿ ಈ ಭಾಗದ ಸಮಸ್ಯೆಗಳ ಕುರಿತು ಒಂದು ಬಾರಿಯೂ ಮಾತನಾಡಲಿಲ್ಲ. ಜಿಲ್ಲೆಗೆ ಅವರ ಕೊಡುಗೆ ಏನು ಇಲ್ಲ. ಆದರೆ ಉಗ್ರಪ್ಪನವರು ಈ ಭಾಗದ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಅವರು ಸಂಸತ್ತಿನಲ್ಲಿ ನಮ್ಮ ಭಾಗದ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಸೂಚಿಸಲಿದ್ದಾರೆ. ಹೀಗಾಗಿ ಮತದಾರರು ಉಗ್ರಪ್ಪನವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬಳಿಕ ಕೊಟಗಿನಹಾಳ್, ಧರ್ಮಸಾಗರ, ಬೈಲುವದ್ದಿಗೇರಿ, ಕಾಕುಬಾಳು, ಗುಂಡ್ಲುವದ್ದಿಗೇರಿ, ಪಾಪಿನಾಯಕನಹಳ್ಳಿ, ವಡ್ಡರಹಳ್ಳಿ, ಜಿ.ಜಿ.ಕ್ಯಾಂಪ್, ಹಾಗು ಇಂಗಿಳಿಗಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
ಈ ಸಂಧರ್ಭದಲ್ಲಿ ಮಾಜಿ ಶಾಸಕ ರತನಸಿಂಗ್, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮಾಜಿ ಹೇಮಣ್ಣ, ಮುಖಂಡರಾದ ಧರ್ಮೇಂದ್ರಸಿಂಗ್, ಆರ್.ಕೊಟ್ರೇಶ್, ಎಲ್.ಸಿದ್ದನಗೌಡ, ಕೆ.ಎಂ.ಹಾಲಪ್ಪ, ತಮ್ಮನಳ್ಳೆಪ್ಪ, ಎರ್ರಿಸ್ವಾಮಿ, ಮಹಾಂತರೆಡ್ಡಿ, ಎನ್.ಶಂಕ್ರಪ್ಪ, ಎನ್.ದೇವೇಂದ್ರಪ್ಪ, ಎಂ.ಸಿ.ವೀರಸ್ವಾಮಿ, ಶಿವರಾಮಪ್ಪ, ಕಿಚಿಡಿ ಶ್ರೀನಿವಾಸ, ಕೊಟಗಿನಹಾಳ್ ಹುಲುಗಪ್ಪ, ತಾಯಣ್ಣ ದೊಡ್ಡಮನಿ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ