ಹಗರಣ ಚರ್ಚೆಗೆ ಕಾಂಗ್ರೆಸ್‍ಗೆ ಜಾಧವ್ ಪಂಥ್ವಾನ

ದಾವಣಗೆರೆ:

       ಕಾಂಗ್ರೆಸ್ ಮುಖಂಡರ ಹಗರಣಗಳನ್ನು ದಾಖಲೆ ಸಮೇತ ಚರ್ಚಿಸಲು ತಾವು ಸಿದ್ಧರಿದ್ದೇವೆ, ನನ್ನ ವಿರುದ್ಧ ವೃತಾ ಆರೋಪ ಮಾಡಿರುವ ಕಾಂಗ್ರೆಸ್‍ನವರು ಸಹ ದಾಖಲೆಗಳೊಂದಿಗೆ ಚರ್ಚೆಗೆ ಬರಲಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಪಂಥ್ವಾವನ

      ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ನನ್ನ ವಿರುದ್ಧ ಹಣ ಪಡೆದು ನಿವೇಶನ ಹಂಚಿಕೆ ಮಾಡಿರುವ ಬಗ್ಗೆ ಹಾಗೂ ಡೋರ್ ನಂಬರ್ ನೀಡಿರುವ ಕುರಿತು ಆರೋಪ ಮಾಡಿದ್ದಾರೆ. ಅವರಿಗೆ ತಾಕತ್ತಿದ್ದರೆ, ನಾನು ಮಾಡಿರುವ ಹಗರಣಗಳ ಬಗ್ಗೆ ದಾಖಲೆ ಸಮೇತ ಚರ್ಚೆಗೆ ಬರಲಿ, ನಾನು ಸಹ ಕಾಂಗ್ರೆಸ್ ಮುಖಂಡರು ಮಾಡಿರುವ ಅವ್ಯವಹಾರ, ಹಗರಣಗಳ ಬಗ್ಗೆ ದಾಖಲೆ ಸಮೇತ ಚರ್ಚೆಗೆ ಸಿದ್ಧನಿದ್ದೇನೆ. ಅವರು ಒಪ್ಪಿದರೆ, ಶಾಮನೂರು ಶಿವಶಂಕರಪ್ಪನವರ ಮನೆಗೂ ನಾನು ಚರ್ಚೆಗೆ ಹೋಗಲು ಸಿದ್ಧ. ಇದಕ್ಕೆ ಕಾಂಗ್ರೆಸ್‍ನವರು ತಯಾರಿದ್ದಾರಾ ಎಂದು ಮರು ಸವಾಲು ಹಾಕಿದರು.

     ನನ್ನ ವಿರುದ್ಧ ಕಾಂಗ್ರೆಸ್‍ನವರು ಮಾಡಿರುವ ಆರೋಪಗಳು ಸಾಬೀತು ಪಡೆಸಿದರೆ, ನಾನು ರಾಜಕೀಯ ನಿವೃತ್ತಿ ಪಡೆಯಲು ಸಿದ್ಧನಿದ್ದೇನೆ. ಆದರೆ, ನಾನು ಕಾಂಗ್ರೆಸ್ ನಾಯಕರು, ಮುಖಂಡರ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತು ಪಡೆಸುತ್ತೇನೆ. ಅವರು ರಾಜಕೀಯ ನಿವೃತ್ತಿ ಪಡೆಯಲಿದ್ದಾರೆಯೇ ಎಂದು ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ್ ಹೆಸರು ಪ್ರಸ್ಥಾಪಿಸದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ರಿಜೆಕ್ಟೆಡ್ ಗೂಡ್ಸ್ ಹೇಳಿಕೆಗೆ ಬದ್ಧ:      ಇತ್ತೀಚೆಗೆ ತಾವು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಶಾಮನೂರು ಶಿವಶಂಕರಪ್ಪನವರು ರಿಜೆಕ್ಟೆಡ್ ಗೂಡ್ಸ್ ಎಂಬುದಾಗಿ ಪ್ರತಿಕ್ರಯಿಸಿದ್ದೆ. ಈಗಲೂ ತಾವು ಆ ಹೇಳಿಕೆಗೆ ಬದ್ಧವಾಗಿದ್ದು, ಹಿರಿಯರಾದ ಶಾಮನೂರು ಶಿವಶಂಕರಪ್ಪನವರ ಬಗ್ಗೆ ನಮಗೆ ಗೌರವವಿದೆ. ಆದರೆ, ಅವರು ಆಡುವ ಭಾಷೆ, ಅವರ ರಾಜಕೀಯ ಹಿನ್ನೆಲೆಯಿಂದಾಗಿ ಹೀಗೆ ಮಾತನಾಡಬೇಕಾಗುತ್ತದೆ. ಸುಮಾರು 40 ವರ್ಷಗಳಿಂದ ಕೆಪಿಸಿಸಿ ಖಜಾಂಚಿಯಾಗಿ, ಮುಖಂಡರಾಗಿ ಕಾರ್ಯನಿರ್ವಹಿಸಿರುವ ಶಾಮನೂರು ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ 2 ವರ್ಷ ಮಾತ್ರ ಮಂತ್ರಿಯಾಗಿದ್ದಾರೆ. ನವ್ಯಾರೂ ಸಹ ಸಚಿವ ಸ್ಥಾನಕ್ಕೆ ಅವರು ಅಸಮರ್ಥರು, ಭ್ರಷ್ಟರು ಅವರನ್ನು ಕೈಬಿಡಿ ಎಂಬುದಾಗಿ ಹೋರಾಟ ಮಾಡಿರಲಿಲ್ಲ. ಆದರೆ, 2 ವರ್ಷದಲ್ಲೇ ಅವರನ್ನು ಮಂತ್ರಿಗಿರಿಯಿಂದ ತಗೆದುಹಾಕಿದರು. ಇದರ ಅರ್ಥವೇನು ಎಂದು ಪ್ರಶ್ನಿಸಿದರು.

      ಇತ್ತೀಚೆಗೆ ಕಾಂಗ್ರೆಸ್‍ಗೆ ಬಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವುದಲ್ಲದೇ, ಪ್ರಸ್ತುತ ಸರ್ಕಾರದಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಶಾಮನೂರು ಶಿವಶಂಕರಪ್ಪನವರ ಮಕ್ಕಳ ವಯಸ್ಸಿನವರಾಗಿರುವ ದಿನೇಶ್‍ಗುಂಡೂರಾವ್, ಈಶ್ವರ್ ಖಂಡ್ರೆ ಪಕ್ಷದಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಿದ್ದಾರೆ. ಹಾಗಾದರೆ, ಕಾಂಗ್ರೆಸ್‍ನಲ್ಲಿ ಶಿವಶಂಕರಪ್ಪನವರ ಪೋಜಿಷನ್ ಏನು? ಈ ಎಲ್ಲಾ ಕಾರಣಗಳಿಂದ ಅವರನ್ನು ನಾನು ರಿಜೆಕ್ಟೆಡ್ ಗೂಡ್ಸ್ ಎಂಬುದಾಗಿ ಜರೆದಿದ್ದೆ. ಈ ಹೇಳಿಕೆಗೆ ಈಗಲೂ ತಾವು ಬದ್ಧರಿದ್ದೇವೆ ಎಂದರು.

ಎಸ್ಸೆಸ್ಸೆಂ ಸಹ ರಿಜೆಕ್ಟೆಡ್ ಗೂಡ್ಸಾ:       ನಾನು ನಾಲ್ಕು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಕಾರಣಕ್ಕೆ ದಿನೇಶ್ ಕೆ. ಶೆಟ್ಟಿ, ನನ್ನನ್ನು ಜನರಿಂದ ತಿರಸ್ಕಾರಕ್ಕೆ ಒಳಗಾಗಿರುವ ರಿಜೆಕ್ಟೆಡ್ ಗೂಡ್ಸ್ ಎಂಬುದಾಗಿ ಕರೆದಿದ್ದಾರೆ. ಹಾಗಾದರೆ, ಲೋಕಸಭಾ ಚುನಾವಣೆಯಲ್ಲಿ ಮೂರು ಹಾಗೂ ವಿಧಾನಸಭೆಯಲ್ಲಿ ಒಂದು ಬಾರಿ ಎಸ್.ಎಸ್.ಮಲ್ಲಿಕಾರ್ಜುನ್ ಸೋತಿದ್ದಾರೆ. ಹಾಗಾದರೆ, ಮಲ್ಲಿಕಾರ್ಜುನ್ ಸಹ ಜನರಿಂದ್ ರಿಜೆಕ್ಟ್ ಆಗಿರುವ ಗೂಡ್ಸಾ ಎಂಬುದನ್ನು ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.

ಮೊದಲು ಆಸ್ತಿ ಎಷ್ಟಿತ್ತು?:      ಶಾಮನೂರು ಶಿವಶಂಕರಪ್ಪನವರು 1971ರಿಂದ 73ರ ವರೆಗೆ ದಾವಣಗೆರೆ ನಗರಸಭಾ ಅಧ್ಯಕ್ಷರಾಗಿದ್ದರು. ಅದಕ್ಕೂ ಮೊದಲು ಅವರು ಎಷ್ಟು ವಿದ್ಯಾಸಂಸ್ಥೆ ಕಟ್ಟಿಸಿದ್ದರು? ಎಷ್ಟು ಕಾರ್ಖಾನೆ ಸ್ಥಾಪಿಸಿದಿದ್ದರು? ಬಾಪೂಜಿ ವಿದ್ಯಾಸಂಸ್ಥೆ ಕಟ್ಟಿದವರ್ಯಾರು? ಎಂಬ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಒತ್ತಾಯಿಸಿದ ಅವರು, ಶಾಮನೂರು ಶಿವಶಂಕರಪ್ಪನವರ ಕೈಗೆ ಬಾಪೂಜಿ ವಿದ್ಯಾಸಂಸ್ಥೆ ಬರುವ ಮುನ್ನ ಎಷ್ಟು ಆಸ್ತಿ ಇತ್ತು. ಈಗ ಎಷ್ಟು ಆಸ್ತಿ ಇದೆ ಎಂಬುದನ್ನು ದಿನೇಶ್ ಶೆಟ್ಟಿ ಉತ್ತರಿಸಬೇಕೆಂದು ಆಗ್ರಹಿಸಿದರು.

ಶೆಟ್ಟಿಗೆ ಇತಿಹಾಸ ಗೊತ್ತಿಲ್ಲ:     ಯಾವುದೋ ಊರಿನಿಂದ ಹೊಟ್ಟೆಪಾಡಿಗಾಗಿ ದಾವಣಗೆರೆಗೆ ಬಂದಿರುವ ದಿನೇಶ್ ಶೆಟ್ಟಿಗೆ ನಮ್ಮ ಊರಿನ ಇತಿಹಾಸ ಸರಿಯಾಗಿ ಗೊತ್ತಿಲ್ಲ. ನಾನು ದುಡಿದು ನನ್ನ ಹೆಂಡ್ತಿನಾ ಸಾಕ್ತಿನಿ ಆದರೆ, ಇವರ ಹಾಗೆ ಪತ್ನಿನ ಕೆಲಸಕ್ಕೆ ಕಳುಹಿಸಿ ರಾಜಕಾರಣ ಮಾಡಲ್ಲ. ಇನ್ನೂ ಮುಂದೆ ನನ್ನ ಬಗ್ಗೆ ಮಾತನಾಡಬೇಕಾದರೆ, ಎಚ್ಚರಿಕೆಯಿಂದ ಮಾತನಾಡಬೇಕು. ಇಲ್ಲದಿದ್ದರೆ, ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಸಿದರು.

 ಕಾನೂನು ಹೋರಾಟ:        ಗಾಜಿನ ಮನೆಗೆ ಶಾಮನೂರು ಶಿವಶಂಕರಪ್ಪನವರ ಹೆಸರು ಇಡಲು ಹೊರಟಿದ್ದಾರೆ. ಯಾಕೆ ದಾವಣಗೆರೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ, ಹುತಾತ್ಮರಾದವರಿದ್ದಾರೆ. ಎಲಮರೆ ಕಾಯಿಯಂತೆ ದಾವರಣಗೆರೆಯ ಅಭಿವೃದ್ಧಿಗೆ ಶ್ರಮಿಸಿದ ಹಲವು ಮನೆತನಗಳಿವೆ. ಯಾಕೆ ಅವರ ಹೆಸರು ಇಡಬಾರದು? ಈಗಾಗಲೇ ಯಾವುದೇ ಸರ್ಕಾರಿ ಕಾಮಗಾರಿ, ಸಾರ್ವಜನಿಕ ಸ್ಥಳಗಳಿಗೆ ಬದುಕಿರುವ ವ್ಯಕ್ತಿಯ ಹೆಸರು ಇಡಬಾರದೆಂಬುದಾಗಿ ಹೈಕೋರ್ಟ್ ಆದೇಶ ನೀಡಿದೆ. ಈ ಆದೇಶದ ಮೂಲಕ ಗಾಜಿನ ಮನೆಗೆ ಶಾಮನೂರು ಹೆಸರಿಡಲು ಮುಂದಾಗಿರುವ ಪಾಲಿಕೆ ವಿರುದ್ಧ ನ್ಯಾಯಾಂಗ ಹೋರಾಟ ನಡೆಯುತ್ತೇವೆಂದು ಹೇಳಿದರು.

         ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎನ್.ಶಿವಕುಮಾರ್, ಎನ್.ರಾಜಶೇಖರ್, ಮುಖಂಡರುಗಳಾದ ರಾಜನಹಳ್ಳಿ ಶಿವಕುಮಾರ್, ಹೇಮಂತಕುಮಾರ್, ಆನಂದರಾವ್ ಶಿಂಧೆ, ಬಲ್ಲೂರು ಬಸವರಾಜ್, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap