ಮೋಬೈಲ್ ಕಸಿಯಲು ಕಳ್ಳರ ವಿಫಲ ಯತ್ನ

ಬೆಂಗಳೂರು

       ಒಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿದ್ದ ಮೂವರು ದುಷ್ಕರ್ಮಿಗಳು ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ನಗದು ಮೊಬೈಲ್ ಕಸಿಯಲು ವಿಫಲಯತ್ನ ನಡೆಸಿ ಪರಾರಿಯಾಗಿರುವ ಘಟನೆ ಕೆ.ಆರ್ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

     ಕಳೆದ ಭಾನುವಾರ ರಾತ್ರಿ 9.30ರ ವೇಳೆ ಪ್ರಮೋದ್ (17)ಎಂಬಾತ ಬಳೇಪೇಟೆಯ ಎಂಎಸ್‍ಆರ್ ಲೇನ್‍ನಲ್ಲಿ ನಡೆದುಕೊಂಡು ಹೋಗುವಾಗ ಏಕಾಎಕಿ ಬಂದ ದುಷ್ಕರ್ಮಿಗಳು ಮೊಬೈಲ್ ನಗದು ದೋಚಲು ಮುಂದಾಗಿದ್ದಾರೆ ಪ್ರತಿರೋಧ ತೋರಿದ ಯುವಕನ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.ಕೂಗಾಟದ ಶಬ್ದ ಕೇಳೆ ಸ್ಥಳೀಯರು ಯುವಕನ ಸಹಾಯಕ್ಕೆ ಧಾವಿಸಿ ರಕ್ಷಣೆ ಮಾಡಿದ್ದಾರೆ.

      ಸ್ಥಳೀಯರು ಯುವಕನ ನೆರವಿಗೆ ಧಾವಿಸಿದ್ದನ್ನು ಕಂಡ ದರೋಡೆಕೋರರ ಗುಂಪು ಅವರನ್ನು ಕ್ಷಣ ಕಾಲ ಗುರಾಯಿಸಿದ್ದು, ಬಳಿಕ ಕೃತ್ಯವನ್ನು ಮೊಬೈಲ್‍ನಲ್ಲಿ ಫೋಟೋ ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆ ಅವರ ಮೇಲೂ ಕಲ್ಲು ತೂರಿ ಪರಾರಿಯಾಗಿದ್ದಾರೆ. ಈ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

     ಈ ಸಂಬಂಧ ಕೆ.ಆರ್ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಸಿಸಿಟಿವಿ ದೃಶ್ಯವಾಳಿಯನ್ನು ಆಧರಿಸಿ ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link