ಶಿಗ್ಗಾವಿ :
ತಾಲೂಕಿನ ದುಂಡಶಿ ಗ್ರಾಮದಲ್ಲಿ ಬರುವ ತಿಂಗಳು ಶಿಗ್ಗಾವಿ ತಾಲೂಕಾ 5 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡಲು ತೀರ್ಮಾನಿಸಿದ್ದು, ಪೂರ್ವಭಾವಿ ಸಭೆಯಲ್ಲಿ ಕಳೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚದ ವಿಷಯಕ್ಕೆ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಯಿತು.
ರವಿವಾರ ತಾಲೂಕಿನ ದುಂಡಶಿ ಗ್ರಾಮದ ಗ್ರಾಪಂ ಆವರಣದಲ್ಲಿ ಜರುಗಿದ ಕ.ಸಾ.ಪ ಹೋಬಳಿ ಘಟಕದ ವತಿಯಿಂದ ಕರೆದ ಪೂರ್ವಭಾವಿ ಸಭೆಯಲ್ಲಿ ಈ ಗೊಂದಲ ಕಂಡು ಬಂದಿದ್ದು ಕಳೆದ ಜಿಲ್ಲಾ ಸಮ್ಮೇಳನದ ಸಂಪೂರ್ಣ ಖರ್ಚು ವೆಚ್ಚದ ಯಾಧಿಯನ್ನು ನೀಡಲು ಕರವೇ ತಾಲೂಕಾ ಬಳಗದ ಹೋರಾಟಗಾರ ನಿಂಗಪ್ಪ ಬೆಂಚಳ್ಳಿ ಅಗ್ರಹಿಸಿದಾಗ ತಾಲೂಕಾ ಕ.ಸಾ.ಪ ಅದ್ಯಕ್ಷ ನಾಗರಾಜ ದ್ಯಾಮನಕೊಪ್ಪ ಖರ್ಚು ವೆಚ್ಚದ ಯಾದಿಯನ್ನು ಕನ್ನಡಪರ ಹೋರಾಟಗಾರರಿಗೆ ನೀಡಲು ಯಾವುದೇ ಅಭ್ಯಂತರವಿಲ್ಲ ಇಗಾಗಲೇ ಯಾದಿಯನ್ನು ಆಡಿಟ್ ಮಾಡಿಸಿದ್ದು ಅವರ ಒಂದು ಪ್ರತಿಯನ್ನು ಕೊಡುವದಾಗಿ ತಿಳಿಸಿದರು ಆಗ ಇದನ್ನು ಮೊದಲೇ ಹಲವಾರು ಬಾರಿ ಕೇಳಿದಾಗ ನೀಡಿದ್ದರೆ ಈ ಸಮಸ್ಯ ಬರುತ್ತಿರಲಿಲ್ಲ ಎಂದು ಹೇಳಿದಾಗ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಆದರೆ ಅದೇ ಕನ್ನಡಪರ ಹೋರಾಟಗಾರರ ಮದ್ಯಸ್ಥಿಕೆಯಿಂದ ವಾತಾವರಣ ತಿಳಿಯಾದ ನಂತರ ದುಂಡಶಿ ಗ್ರಾಮದ ಕೆಲ ಮುಖಂಡರು ಮದ್ಯ ಪ್ರವೇಶಿಸಿ ಮಾತನಾಡಿ ಜಿಲ್ಲಾ ಸಮ್ಮೇಳನ ಆಗಿರುವುದು ಪಟ್ಟಣದಲ್ಲಿ ಅದನ್ನು ತಾಲೂಕಿನಲ್ಲಿ ಕುಳಿತು ಚರ್ಚಿಸಿ ಇತ್ಯರ್ಥ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದ ನಂತರ ಪರಿಸ್ಥಿತಿ ಶಾಂತವಾಗಿ ಸಭೆಯನ್ನು ಮರಳಿ ಬರುವ ರವಿವಾರ ಸಂಜೆ 4 ಘಂಟೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೂಡಿಸಿ ಚರ್ಚಿಸೋಣವೆಂದು ಸಭೆಯನ್ನು ಅಂತ್ಯಗೊಳಿಸಲಾಯಿತು.
ಸಭೆಯಲ್ಲಿ ಕಸಾಪ ತಾಲೂಕಾದ್ಯಕ್ಷ ನಾಗರಾಜ ದ್ಯಾಮನಕೊಪ್ಪ, ತಾಲೂಕಾ ಹೋಬಳಿ ಘಟಕದ ಅದ್ಯಕ್ಷ ಎಸ್ ಎನ್ ಮುಗಳಿ, ಕಾರ್ಯದರ್ಶಿ ನಾಗಪ್ಪ ಬೆಂತೂರ, ದುಂಡಶಿ ಕಸಾಪ ಹೋಬಳಿ ಘಟಕದ ಅದ್ಯಕ್ಷ ಎನ್ ಎಸ್ ಬರದೂರ, ಗ್ರಾಪಂ ಉಪಾದ್ಯಕ್ಷ ಸಂತೋಷ ಹುಣಶ್ಯಾಳ, ಮುಖಂಡರಾದ ಭೂಪಾಲ ಪಾಯಣ್ಣವರ, ಪ್ರೋ. ಎಸ್ ವಿ ಕುಲಕರ್ಣಿ, ಗ್ರಾಮದ ಹಿರಿಯರಾದ ಶಿವನಗೌಡ ಪಾಟೀಲ, ಎಮ್ ಜಿ ಕೋಳೂರ, ಕನ್ನಡಪರ ಹೋರಾಟಗಾರರಾದ ಬಸಲಿಂಗಪ್ಪ ನರಗುಂದ, ಬಸವರಾಜ ಮಲ್ಲೂರ, ಸಲೀಂ ದುಖಾಂದಾರ, ರಮೇಶ ಧರ್ಮಣ್ಣವರ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಇತರ ಕನ್ನಡಾಭಿಮಾನಿಗಳು ಇದ್ದರು.