ವಾಲ್ಮೀಕಿ ತತ್ವ ಪಾಲನೆಯಿಂದ ಸುಂಸ್ಕೃತರಾಗಬೇಕು : ಶ್ರೀರಾಮುಲು

ಚಿತ್ರದುರ್ಗ:
    ಮಹರ್ಷಿ ವಾಲ್ಮೀಕಿಯವರ ತತ್ವ, ಆದರ್ಶಗಳನ್ನು ಯುವ ಸಮೂಹ ಜೀವನದಲ್ಲಿ ಅಳವಡಿಸಿಕೊಂಡು ಸುಸಂಸ್ಕøತರಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಹೇಳಿದರು. 
   ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಇಂದಿನ ಯುವ ಪೀಳಿಗೆ ಮಹಾ ನಾಯಕರ ಕಾರ್ಯ, ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕು. ಹಾಗೂ ಅವರು ರೂಡಿಸಿಕೊಂಡಿದ್ದ ತತ್ವ ಆದರ್ಶಗಳನ್ನು ಸ್ಮರಿಸುತ್ತಾ ಸಂಸ್ಕಾರಯುತ ಜೀವನ ಸಾಗಿಸಲು ಮುಂದಾಗಬೇಕು.
 
    ಮಹರ್ಷಿ ವಾಲ್ಮೀಕಿ ದೇಶಕ್ಕಷ್ಟೇ ಅಲ್ಲದೇ ವಿಶ್ವಕ್ಕೆ ಅನುಕೂಲಕರವಾದ ಮಾಹಿತಿ ನೀಡುವಂತಹ ಮಹಾಕಾವ್ಯ ರಾಮಾಯಣ ರಚಿಸಿದ್ದಾರೆ. ಅದರಲ್ಲಿ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ರೀತಿ, ನೀತಿಗಳನ್ನು ತಿಳಿಸಿದ್ದಾರೆ. ವಾಲ್ಮೀಕಿ ಸಮುದಾಯದ ಜನಾಂಗ ಹಿಂದುಳಿದ ವರ್ಗವಾಗಿದ್ದು, ಆರ್ಥಿಕವಾಗಿ ತೀರಾ ಹಿಂದುಳಿದವರಾಗಿದ್ದಾರೆ.  ಅಷ್ಟೇ ಅಲ್ಲದೆ ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿಯೂ ಸಹ ಹಿಂದುಳಿದಿದೆ. 
 
     ಕೆಲವರು ವಾಲ್ಮೀಕಿ ಜನಾಂಗವನ್ನು ಊರು ನಾಯಕರು ಹಾಗೂ ಮ್ಯಾಸ ನಾಯಕರು ಎಂದೇಳುತ್ತ ಇಬ್ಬಾಗ ಮಾಡುವ ಸಂಚು ನಡೆಸುತ್ತಿದ್ದಾರೆ. ಅವರು ಎಷ್ಟೇ ಇಬ್ಬಾಗ ಮಾಡಲು ಪ್ರಯತ್ನಿಸಿದರು, ವಾಲ್ಮೀಕಿ ಜನಾಂಗ ಒಗ್ಗಟ್ಟಿನಲ್ಲಿರುತ್ತದೆ ಎಂದು ಹೇಳಿದರು
     ವಾಲ್ಮೀಕಿ ಜನಾಂಗ ಸಮಾಜದಲ್ಲಿ ಉತ್ತಮ ಸ್ಥಾನಮಾನದಲ್ಲಿರಬೇಕೆಂದರೆ  ಮೀಸಲಾತಿಯ ಪ್ರಮಾಣ ಶೇ. 7.5 ರಷ್ಟು ಅಗತ್ಯವಿದೆ.  ಕೇಂದ್ರದಲ್ಲಿ ಜಾರಿಯಲ್ಲಿದೆ ಹಾಗೇಯೇ ರಾಜ್ಯದಲ್ಲೂ ಮೀಸಲಾತಿ ಪ್ರಮಾಣ ಹೆಚ್ಚಿಸಲು ಮನವಿ ಮಾಡಲಾಗುವುದು. ಸರ್ಕಾರದ ಮೇಲೆ ಒತ್ತಡ ಹಾಕಿ ಮುಂದಿನ ಎರಡು ತಿಂಗಳೊಳಗೆ ಅನುಮೋದನೆಗೊಳ್ಳುವಂತೆ ಮಾಡಲಾಗುವುದು. ಸಮುದಾಯದ ಜನರು ರಾಜಕೀಯವಾಗಿ ಯಾವುದೇ ಪಕ್ಷದ ಪರವಾಗಿದ್ದರೂ ಜನಾಂಗದ ಏಳಿಗೆಗಾಗಿ ಒಗ್ಗಟ್ಟು ಪ್ರದರ್ಶಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
      ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿ ಮಾತನಾಡಿ ಮಹರ್ಷಿ ವಾಲ್ಮೀಕಿಯವರು ದೇಶದ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣ ರಚಿಸಿದ ಮಹಾನ್ ಮೇದಾವಿ. ಜಿಲ್ಲೆಯಲ್ಲಿ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು ಹಲವಾರು ಸಾಧನೆ ಮಾಡಿದ್ದಾರೆ. ಅಂತವರಲ್ಲಿ ಭೀಮಪ್ಪ ನಾಯಕ ಒಬ್ಬರಾಗಿದ್ದಾರೆ. ಅವರು ಮರ್ಚೆಂಟ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಉತ್ತಮ ಸೇವೆ ಸಲ್ಲಿಸಿ, ಸಾಧನೆ ಮಾಡಿದ್ದಾರೆ. ಅವರಂತೆಯೇ ಇನ್ನಿತರರು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು
 
    ಎಲ್.ಜಿ ಹಾವನೂರು ಅವರು ಡಿ. ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸಾಮಾಜಿಕ ಹಿಂದುಳಿದ ವರ್ಗಗಳ ಸಮಿತಿಯ ಅಧ್ಯಕ್ಷರಾಗಿ ರಾಜ್ಯವನ್ನೇ ಸುತ್ತಿ ಜನಸಂಖ್ಯೆ ಆಧಾರಿತ ಮೀಸಲಾತಿ ಹಂಚಿಕೆಗೆ ಮುಂದಾದವರು. ಇಂದಿನ ಯುವ ಮುಖಂಡರು ಸಹ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುವಂತಾಗಬೇಕಾಗಿದೆ. 
 
     ಚಿತ್ರದುರ್ಗವನ್ನಾಳಿದ ಮದಕರಿನಾಯಕರು ಇದೇ ಸಮುದಾಯಕ್ಕೆ ಸೇರಿರುವುದು ಹೆಮ್ಮೆಯ ವಿಷಯ. ವಾಲ್ಮೀಕಿ ರಚಿಸಿದ ಕೃತಿ ದಿನನಿತ್ಯದ ಜೀವನದಲ್ಲಿ ಅನುಸರಿಸಬಹುದಾದ ಅಂಶಗಳನ್ನು ಒಳಗೊಂಡಿದೆ ಎಂದು ತಿಪ್ಪಾರೆಡ್ಡಿ ಸ್ಮರಿಸಿದರು. 
     ಗೌರಿಬಿದನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅನ್ನಪೂರ್ಣ ಯೋಗೀಶ್ ವಿಶೇಷ ಉಪನ್ಯಾಸ ನೀಡಿದರು
ಕಾರ್ಯಕ್ರಮದಲ್ಲಿ ಸಂಸದರಾದ ಎ. ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿ.ಪಂ ಸಿಇಒ ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಕೆ.ಅರುಣ್, ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ತಾಲ್ಲೂಕು ಸಮಾಜದ ಅಧ್ಯಕ್ಷ ಕಾಂತರಾಜ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link