ಪೊಲೀಸ್ ಅಧಿಕಾರಿಯಿಂದ ಕಿರುಕುಳ, ರಕ್ಷಣೆಗೆ ಮನವಿ

ದಾವಣಗೆರೆ:

     ಆಸ್ತಿ, ವ್ಯವಹಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪೆÇಲೀಸ್ ಇಲಾಖೆಯಲ್ಲಿ ಎಸಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಟಿ.ಮಂಜುನಾಥ ಎಂಬುವರು ತಮಗೆ ಸಾಕಷ್ಟು ತೊಂದರೆ ನೀಡಿ, ಮಾನಸಿಕ ಕಿರುಕುಳ ಉಂಟು ಮಾಡುತ್ತಿದ್ದು, ತಮಗೆ ಮತ್ತು ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಹರಪನಹಳ್ಳಿ ತಾಲೂಕಿನ ನೀಲಗುಂದ ಗ್ರಾಮದ ಈಡಿಗರ ಕರಿಬಸಪ್ಪ ಆಗ್ರಹಿಸಿದ್ದಾರೆ.

      ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದ ಗ್ರಾಮದವರೇ ಆದ ಟಿ.ಮಂಜುನಾಥ್ ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ನಮ್ಮ ಆಸ್ತಿ ಮಾರಾಟ ಮಾಡಲಿಲ್ಲ ಎಂಬ ಕಾರಣಕ್ಕೆ ವೈಕ್ತಿಕ ದ್ವೇಷ ಸಾಧಿಸಿ ಅನಗತ್ಯ ಕಿರುಕುಳ ನೀಡುತ್ತಿದ್ದಾರೆಂದು ದೂರಿದರು.

      ಮಂಜುನಾಥ ಹಾಗೂ ತಾವು ಅಕ್ಕಪಕ್ಕದಲ್ಲೇ ಹೊಲ, ಕಣ, ಮನೆಗಗಳನ್ನು ಹೊಂದಿರುತ್ತೇವೆ. ಅನೇಕ ವರ್ಷಗಳಿಂದಲೂ ಇದೇ ವಿಚಾರವಾಗಿ ಮಂಜುನಾಥ ತಮ್ಮ ಮೇಲೆ, ತಮ್ಮ ಕುಟುಂಬದ ಮೇಲೆ ದ್ವೇಷ ಕಾರುತ್ತಾ ಬಂದಿದ್ದಾರೆ. ತಾನು ಹೇಳಿದಂತೆ ಕೇಳಬೇಕೆಂಬುದಾಗಿ ನಮ್ಮೆಲ್ಲರ ಮೇಲೆ ದೈಹಿಕ ಮಾನಸಿಕವಾಗಿ ಒತ್ತಡ ಹೇರುತ್ತಿದ್ದಾರೆ ಎಂದು ಆಪಾದಿಸಿದರು.

      ಕಳೆದ ಏಪ್ರಿಲ್ 18ರಂದು ಮಂಜುನಾಥ್‍ನ ಸಹೋದರರಾದ ರಾಜು, ವೆಂಕಟೇಶ ಎಂಬುವರು ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಊರಿನಲ್ಲಿ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ಸೇರಿಸಿ, ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಿ ಎಂಬುದಾಗಿ ಪೊಲೀಸರು ಸಾಗ ಹಾಕುತ್ತಿದ್ದಾರೆ. ಊರ ಹಿರಿಯರ ಮೂಲಕ ಮಂಜುನಾಥ್‍ನನ್ನು ಕರೆಸಲು ಪ್ರಯತ್ನಿಸಿದರೂ ಸಹ ನೀನು ಕರೆದ ಜಾಗಕ್ಕೆ ನಾನು ಬರುವುದಿಲ್ಲ ವೆಂಬುದಾಗಿ ಹೇಳಿ, ನಮ್ಮ ಮೇಲೆಯೇ ಇಲ್ಲಸಲ್ಲದ ಕೇಸ್ ದಾಖಲಿಸುವುದಾಗಿ ಬೆದರಿಸಿದ್ದಾರೆ ಎಂದು ಅಳಲು ತೋಡಿಕೊಂಡರು.

     ನಾನು ಮತ್ತು ತಮ್ಮ ಕುಟುಂಬವು ಹೊಲದ ಮನೆಯಲ್ಲೇ ವಾಸ ಮಾಡುತ್ತಿದ್ದೇವೆ. ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ತಮ್ಮ ಪತ್ನಿ 6 ತಿಂಗಳಿನಿಂದ ಹೊಸಪೇಟೆಯಲ್ಲಿ ವಾಸಿಸುತ್ತಿದ್ದಾರೆ. ಮಂಜುನಾಥ ಹಿಂಬಾಲಕರಿಂದ ಮಾನಸಿಕ, ದೈಹಿಕ ಹಿಂಸೆ ಅನುಭವಿಸುತ್ತಿದ್ದೇವೆ. ಇದರಿಂದ ತಾವೂ ಸೇರಿದಂತೆ ತಮ್ಮ ಇಡೀ ಕುಟುಂಬ ನೊಂದಿದೆ. ತಮಗೆ ತಮ್ಮ ಕುಟುಂಬಕ್ಕೆ ಸೇರಿದ ಆಸ್ತಿ, ವ್ಯವಹಾರಕ್ಕೆ ತೊಂದರೆ ನೀಡುತ್ತಿರುವವರಿಂದ ಸೂಕ್ತ ರಕ್ಷಣೆ, ಭದ್ರತೆ ನೀಡಬೇಕೆಂದು ಅವರು ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಈಡಿಗರ ಕರಿಬಸಪ್ಪರ ಪತ್ನಿ ಸ್ವಪ್ನಾ ಮತ್ತು ಮಕ್ಕಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap