ಕೌಟುಂಬಿಕ ರಾಜ್ಯೋತ್ಸವವಾಗಲಿ : ಕವಿತಾಕೃಷ್ಣ

ತುಮಕೂರು: 

     ಕುಟುಂಬಗಳು ಒಂದು ಪುಟ್ಟ ರಾಜ್ಯ, ನಮ್ಮ ಕನ್ನಡ ನಾಡಹಬ್ಬ ಕೌಟುಂಬಿಕ ರಾಜ್ಯೋತ್ಸವವಾಗಲು ಎಂದು ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಅಭಿಪ್ರಾಯಪಟ್ಟರು.

      ನಗರದ ಕ್ಯಾತಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಕವಿತಾಕೃಷ್ಣರ ಕುಟುಂಬದ ಬಂಧುಗಳು ಕೂಡಿ ಆಚರಿಸಿದ ಅರ್ಥಪೂರ್ಣ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅಭಿಪ್ರಾಯ ಪಟ್ಟರಲ್ಲದೆ ಹಳ್ಳಿಹಳ್ಳಿಗಳಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿವೆ, ಆಂಗ್ಲಮಾಧ್ಯಮ ಶಾಲೆಗಳು ತೆರೆಯುತ್ತಿವೆ. ಕನ್ನಡ ಮಕ್ಕಳು ಆಂಗ್ಲ ಮಕ್ಕಳಾಗುತ್ತಿದ್ದಾರೆ.

     ಇದು ವಿಷಾದಕರ ಸಂಗತಿ. ಮನೆ ಭಾಷೆ ಕನ್ನಡ, ಎಲ್ಲಾ ಮನೆಗಳಲ್ಲಿ ತಾಯಿ ತಂದೆಯವರು, ನೆರೆಹೊರೆಯವರು ಕನ್ನಡದಲ್ಲಿ ಮಾತಾಡಬೇಕು, ವ್ಯವಹರಿಸಬೇಕು. ಮಿಗಿಲಾಗಿ ಕನ್ನಡತನ ಉಳಿಸಬೇಕು. ವರ್ಷಕ್ಕೊಮ್ಮೆ ಕುಟುಂಬದ ಬಂಧುಬಾಂಧವರು ಕೂಡಿ ಕನ್ನಡಹಬ್ಬ ಮನೆಮನೆಗಳಲ್ಲಿ ಆಚರಿಸಬೇಕು. ಕನ್ನಡ ಪ್ರೇಮ ಮೂಡಿಸಬೇಕೆಂದರು.

         ದೂರದ ಊರುಗಳಿಂದ ಬಂಧುಗಳು ಬಂದು ಕೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದು ಒಂದ ವಿಶೇಷವಾಗಿತ್ತು. ಅನ್ಯ ಕುಟುಂಬದವರಿಗೆ ಪ್ರಭಾವ ಪ್ರೇರಣೆ ನೀಡುವಂತಿತ್ತು. ಹಾಡು-ನೃತ್ಯ-ಉಪನ್ಯಾಸ ಕಾರ್ಯಕ್ರಮ ಜರುಗಿತು.

ಸಾಹಿತ್ಯ ಮಂದಿರದಲ್ಲಿ ಜರುಗಿದ ಕುಟುಂಬ ರಾಜ್ಯೋತ್ಸವಕ್ಕೆ ಅತಿಥಿಗಳಾಗಿ ಡಾ. ಜಿ.ಎ.ಆನಂದಮೂರ್ತಿ, ಲೇಖಕಿ ಕಮಲಾ ಬಡ್ಡಿಹಳ್ಳಿ, ಸಿದ್ದಾಪುರ ನರಸಿಂಹಯ್ಯ, ಮಲ್ಲೇಶ್, ರಾಜೇಶ್, ಷರೀಫ್ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಎಲ್.ಎನ್.ಮುನಿರಾಜು ಮತ್ತು ಸರಳಕುಮಾರಿ ದಂಪತಿಗಳನ್ನು ಸನ್ಮಾನಿಸಲಾಯಿತು.

ಮನೆ ಮಕ್ಕಳು ಪ್ರಾರ್ಥಿಸಿದರು, ಅರವಿಂದ ಕೃಷ್ಣ ಸ್ವಾಗತಿಸಿದರು. ಬಾನುಪ್ರಕಾಶ್ ವಂದಿಸಿದರು, ಉಷಾ ಪದ್ವನಾಭ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link