ಶೇಂಗಾ ಬೆಲೆ ಇಳಿಕೆ: ರೈತರಿಂದ ಎಪಿಎಂಸಿ ಕಚೇರಿ ಮುತ್ತಿಗೆ

ಕೊಟ್ಟೂರು

   ಶೇಂಗಾ ಬೆಲೆ ಕಡಿಮೆ ಆಗಿರುವುದನ್ನು ವಿರೋಧಿಸಿ ಇಲ್ಲಿನ ಎಪಿಎಂಸಿ ಕಚೇರಿ ಎದುರು ರೈತರು ದಿಢೀರ್ ಪ್ರತಿಭಟನೆ ನಡೆಸಿದರು.ಶೇಂಗಾ ಟೆಂಡರ್ ಪ್ರಕಟಣೆಯಾಗುತ್ತಿದ್ದಂತೆಯೇ ಬೆಲೆ ಕಡಿಮೆಯಾಗಿದ್ದರಿಂದ ಅಕ್ರೋಶಗೊಂಡ ನೂರಾರು ರೈತರು ಇದ್ದಕ್ಕಿದ್ದಂತೆ ಎಪಿಎಂಸಿ ಕಚೇರಿ ನುಗ್ಗಿ, ಶುದ್ದ ಕುಡಿಯುವ ನೀರಿನ ಘಟಕಕ್ಕೆ ಹಾನಿ, ಕುರ್ಚಿ, ಟೇಬಲ್ ಮುರಿದ್ದಾರೆ. ಗಾಡ್ರೇಜ್‍ನಲ್ಲಿ ಪೈಲ್‍ಗಳನ್ನು ಕಿತ್ತು ಬೀಸಾಡಿದ್ದಾರೆ.

   ದಾಲಾಲರು ಮತ್ತು ಖರೀದಿದಾರರ ವಿರುದ್ದ ಕೂಗುತ್ತಿದ್ದ ರೈತರು ಅಂಗಡಿಗಳಿಗೆ ನುಗ್ಗಿ ಶೇಂಗಾ ತೂಕವಾಗುತ್ತಿದ್ದಕ್ಕೆ ಅಡ್ಡಿ ಪಡಿಸಿ, ಅಂಗಡಿ ಬಾಗಿಲು ಮುಚ್ಚಲು ಪ್ರಯತ್ನಿಸಿದರು.ನೂರಾರರು ರೈತರಿದ್ದ ಗುಂಪು ಎರಡು ಭಾಗವಾಗಿ ಎಪಿಎಂಸಿಯಲ್ಲಿ ತೂಕವಾಗುತ್ತಿದ್ದ ಎಲ್ಲಾ ಅಂಗಡಿಗಳನ್ನು ಮುಚ್ಚಿ ಇಡೀ ಮಾರುಕಟ್ಟೆಯನ್ನು ಬಂದ್ ಮಾಡಲು ಯತ್ನಿಸಿದರು.

    ಕೂಲಿ ದುಬಾರಿಯಾಗಿದೆ. ಇದ್ದಕ್ಕಿದಂತೆ ಹೀಗೆ ಶೇಂಗಾ ಬೆಲೆ ಕಮ್ಮಿಯಾದರೆ ಬಿತ್ತಿದ ಖರ್ಚು ಮೈ ಮೇಲೆ ಬರುತ್ತಿದೆ. ಖರೀದಿದಾರ ರಿಗೆ ರೈತರ ಕಷ್ಟ ಅರ್ಥವಾಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ವಿಷಯ ತಿಳಿಯುತ್ತಿದ್ದಂತೆ ಎಪಿಎಂಸಿಗೆ ಆಗಮಿಸಿ ಪೊಲೀಸರು. ರೈತರ ಗುಂಪನ್ನು ಉಪಾಯವಾಗಿ ಚದರಿಸಿ, ಟೆಂಡರ್ ಆದ ಬೆಲೆ ಶೇಂಗಾ ಮಾರಾಟ ಮಾಡಿ ಇಲ್ಲವೆ. ಸುಮ್ಮನಿರಿ ಎಂದು ಉದ್ವಿಗ್ನವಾಗಿದ್ದ ಪರಿಸ್ಥಿತಿಯನ್ನು ನಿಧಾನವಾಗಿ ಹತೋಟಿಗೆ ತಂದರು.ನಂತರ ಎಪಿಎಂಸಿಯಲ್ಲಿ ಶೇಂಗಾ ತೂಕ ಯಾವುದೇ ಸಮಸ್ಯೆ ಇಲ್ಲದೆ ಮುಂದುವರಿಯಿತು.

    ಶೇಂಗಾ ಟೆಂಡರ್ ಇಂದು ಕ್ವಿಂಟಾಲ್‍ಗೆ 3169ರಿಂದ 5419 ರು. ಆಗಿತ್ತು. ಮಾರುಕಟ್ಟೆ 3446 ಚೀಲ ಮಾರಾಟಕ್ಕೆ ರೈತರು ತಂದಿದ್ದರು.ಪೊಲೀಸ್‍ರ ಸಮಯ ಪ್ರಜ್ಞೆ ಹಾಗೂ ಜಾಣ್ಮೆಯಿಂದ ಆಕ್ರೋಶಗೊಂಡ ರೈತರನ್ನು ಹತೋಟಿಗೆ ತಂದಿದ್ದು ನಿಜಕ್ಕೂ ಶ್ಲಾಘನೀಯ. ಸಬ್ ಇನ್ಸಫೆಕ್ಟರ್ ಎ. ಕಾಳಿಂಗ, ಎ.ಎಸ್.ಐಗಳಾದ ನಾಗರತ್ನ, ವಸಂತರಾವ್ ಪೊಲೀಸರು ಆಗಮಸಿ ಬಂದೋಬಸ್ತ ಮಾಡಿದರು.

 

Recent Articles

spot_img

Related Stories

Share via
Copy link