ರೈತರ ಸಮಗ್ರಮಾಹಿತಿಯ ಗುರುತ್ತಿನ ಚೀಟಿ ವಿತರಣೆಗೆ ಚಿಂತನೆ

ಹಗರಿಬೊಮ್ಮನಹಳ್ಳಿ:

        ರಾಜ್ಯದಲ್ಲಿ ಕೃಷಿ ರೈತರಿಗಾಗಿಯೇ ಪ್ರತ್ಯೇಕ ಜೀವವಿಮೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ರಾಜ್ಯ ಕೃಷಿ ಸಚಿವ ಶಿವಶಂಕರರೆಡ್ಡಿ ಹೇಳಿದರು.

         ಹೊಸಪೇಟೆಗೆ ಹೊರಟಿದ್ದ ಮಾರ್ಗಮಧ್ಯದಲ್ಲಿ ಅವರು ಪಟ್ಟಣದ ಶಾಸಕರ ನಿವಾಸಕ್ಕೆ ಭೇಟಿ ನೀಡಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದರು, ಪಹಣಿಯನ್ನು ಹೊಂದಿರುವ ಕೃಷಿಕ ರೈತರು ಎಲ್ಲಿ, ಯಾವಾಗ ಅವರ ಜೀವಕ್ಕೆ ತೊಂದರೆ ಬರುತ್ತೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಅನೇಕ ಕಂಪನಿಗಳು, ಪ್ಯಾಕ್ಟರಿಗಳಲ್ಲಿ ಕಾರ್ಮಿಕರಿಗೆ ಯಾವರೀತಿ ಜೀವವಿಮೆ ಇರುತ್ತೋ ಅದೇ ರೀತಿ ಕೃಷಿಕ ರೈತರಿಗೆ ಜೀವವಿಮೆ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ವಿಮೆಯ ಮೊತ್ತವನ್ನು ಸರ್ಕಾರವೇ ಬರಿಸಲಿದ್ದು ಸಂಪೂರ್ಣ ಜೀವಾವಧಿಯವರೆಗಿನ ವಿಮೆ ಇದಾಗಿದ್ದು ಸಾಕಷ್ಟು ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

         ಪ್ರತಿಯೊಬ್ಬ ರೈತರಿಗೆ ಗುರುತ್ತಿನ ಚೀಟಿಯನ್ನು ನೀಡಿವ ಚಿಂತನೆಕೂಡ ಮಾಡಿದ್ದು, ಅದರಲ್ಲಿ ರೈತರ ಸಂಪೂರ್ಣಮಾಹಿತಿ ಇರುತ್ತದೆ ಮತ್ತು ಅನೇಕ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆ ಗುರುತ್ತಿನ ಚೀಟಿ ಸಹಕಾರಿಯಾಗಲಿದೆ ಎಂದು ತಿಳಿಸಿದರಲ್ಲದೆ ಗುರುತ್ತಿನ ಚೀಟಿಯ ಮಾದರಿಯನ್ನು ಪ್ರದರ್ಶಿಸಿದರು.

           ರೈತರಿಗೆ ರಾಜ್ಯ ಸರ್ಕಾರ ಕಳೆದ ಆಡಳಿತದಲ್ಲಿಯಾಗಲಿ ಮತ್ತು ಇಂದಿನ ಸರ್ಕಾರದಲ್ಲಾಗಲಿ ತಂದಂತಹ ಯೋಜನೆಗಳಲ್ಲಿ ಶೇ.70ಕ್ಕೂ ಹೆಚ್ಚು ರೈತರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ, ಕೇಂದ್ರಸರ್ಕಾರದ ಯೋಜನೆಗಳು ರೈತರನ್ನು ತಲುಪುವಲ್ಲಿ ವಿಫಲವಾಗಿವೆ ಎಂದು ದೂರಿಸಿದರು. ಇಲಾಖೆಯಲ್ಲಿ ಸಕಾಷ್ಟು ಹಣವಿದ್ದು ಅದರ ಸದ್ಬಳಕೆ ರಾಜ್ಯದ ರೈತರದಾಗಿದೆ. ಯಾವುದೇ ಯಾವುದಕ್ಕೂ ಕೊರತೆ ಇಲ್ಲದಷ್ಟು ಹಣ ಕೃಷಿ ಯೋಜನೆಗಳಿಂದ ರೈತರಿಗೆ ತಲುಪಲಿವೆ ಎಂದರು.

          ಎಸ್.ಸಿ.ಎಸ್.ಟಿ ಸೌಲಭ್ಯಗಳಂತೆ ಸಾಮಾನ್ಯ ರೈತರಿಗೂ ಸೌಲಭ್ಯಗಳ ಯೋಜನೆ ದೊರೆಯಲಿದ್ದು, ರಿಯಾಯಿತಿ ಸೌಲಭ್ಯಕ್ಕಾಗಿ ಹಣ ಬಿಡುಗಡೆಮಾಡಲಾಗುವುದು ಎಂದರು. ಸಾಲಮನ್ನಾ ಯೋಜನೆ ಜಾರಿಯಲ್ಲಿ ಸರ್ಕಾರ ಯಶಸ್ವಿಯಾಗುತ್ತಿದೆ. ಈಗಾಗಲೇ ಸ್ಥಳೀಯ ರೈತರ ಸೋಸೈಟಿಗಳಲ್ಲಿ ರೈತರ ಸಾಲಮನ್ನಾವಾಗುತ್ತಿವೆ. ಇದಕ್ಕೆ ರೈತರಿಂದಲೇ ಮೆಚ್ಚಿಗೆಕೂಡ ಕೇಳಿಬರುತ್ತಿದೆ ಎಂದರು.

           ರಾಷ್ಟ್ರಮಟ್ಟದಲ್ಲಿ ಬಿಜೆಪಿ ಆಡಳಿತದ ವೈಖರಿಯಲ್ಲಿ ವಿಶ್ವಾಸಕಳೆದುಕೊಂಡಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲಿದ್ದು, ಸಂಪೂರ್ಣ ಸರ್ಕಾರ ರಚನೆಯಾಗುವ ಸಾಧ್ಯತೆ ಕಡಿಮೆ ಇದೆ ಎಂದರಲ್ಲದೆ, ಬಹುತೇಕ ಕಾಂಗ್ರೆಸ್‍ನೊಂದಿಗೆ ಅನೇಕ ಜ್ಯಾತ್ಯಾತೀತ ಪಕ್ಷಗಳು ಸೇರಿ ಕೇಂದ್ರ ರಚನೆಯಾಗುವ ಸಾಧ್ಯತೆಕೂಡ ಇದೆ ಎಂದರು.

            ಈ ಕ್ಷೇತ್ರದ ಶಾಸಕ ಎಸ್.ಭೀಮಾನಾಯ್ಕರಿಗೆ ಸಚಿವ ಸ್ಥಾನ ದೊರೆಯಬೇಕಿತ್ತು, ನಿಗಮ ಮಂಡಳಿ ಅವಕಾಶವಿದೆ ಆದರೆ ಶಾಸಕರೇ ಬೇಡವೆನ್ನುತ್ತಿರುವುದು ಅವರಲ್ಲಿನ ಬೇಸರ ತೋರಿಸುತ್ತಿದೆ. ಅಲ್ಲದೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಇನ್ನಿಲ್ಲವಾಗುತ್ತಿದೆ ಎನ್ನುವಾಗ ಪಕ್ಷದ ಏಳಿಗೆಗಾಗಿ ಅವರು ಶ್ರಮ ಪಟ್ಟಿದ್ದು ನಾನು ಎಂ.ಪಿ.ಚುನಾವಣೆಯಲ್ಲಿ ಕಣ್ಣಾರೆ ನೋಡಿದ್ದೇನೆ ಎಂದರಲ್ಲಿದೆ ಮುಂದಿನ ದಿನಗಳಲ್ಲಿ ಶಾಸಕರಿಗೆ ಒಳ್ಳೆಯ ಅವಕಾಶ ಕೂಡಿಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

            ಉಪಸ್ಥಿತರಿದ್ದ ಶಾಸಕ ಎಸ್.ಭೀಮಾನಾಯ್ಕ ಇದಕ್ಕೆ ಧ್ವನಿಗೂಡಿಸಿ ನಮ್ಮ ಬಂಜಾರ ಸಮುದಾಯಕ್ಕೆ ಒಬ್ಬರಿಗೆ ಅವಕಾಶ ನೀಡಬೇಕಿತ್ತು ಆ ಸ್ಥಾನ ಪಕ್ಕದ ಹಡಗಲಿಯ ಶಾಸಕರಿಗೆ ಸಿಕ್ಕಿರುವುದು ಕೂಡ ಸಮುದಾಯದ ವಿಚಾರವಾಗಿ ಸಂತಸವೇ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಹೆಗ್ಡಾಳ್ ರಾಮಣ್ಣ, ಹುಡೇದ್ ಗುರುಬಸವರಾಜ್, ಚಿಂತ್ರಪಳ್ಳಿ ದೇವೇಂದ್ರ, ಕನ್ನಿಹಳ್ಳಿ ಚಂದ್ರಶೇಖರ್, ಹಂಚಿನಮನಿ ಹನುಮಂತಪ್ಪ, ಜಂದಿಸಾಬ್, ಕೇಶವರೆಡ್ಡಿ, ಭದ್ರವಾಡಿ ಚಂದ್ರಶೇಖರ್ ಸೇರಿದಂತೆ ಅನೇಕರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link