ಹಾವೇರಿ :
ಜಿಲ್ಲೆಯ ರೈತರ ಪರಸ್ಥಿತಿ ಕೈಯಿಗೆ ಬಂದ ತುತ್ತು,ಬಾಯಿಗೆ ಬರಲಿಲ್ಲ ಎನ್ನುವ ಹಾಗೆ ಕಾಣುತ್ತಿದೆ.ಜಿಲ್ಲೆಯಲ್ಲಿ ಸರಾಸರಿ ಮಳೆಯ ಪ್ರಮಾಣ ಕಡಿಮೆಯಾಗಿ ರೈತರು ತಮ್ಮ ಫಸಲು ಬರುವ ಸಂದರ್ಭದಲ್ಲಿಯೇ ಸರಿಯಾಗಿ ಕೈಗೆ ಸೇರದಿರುವುದೇ ರೈತರ ಬಾಳು ಕಂಗಾಲು ಆಗುತ್ತಿದೆ. ತಾಲೂಕಿನ ವೆಂಕಟಾಪೂರ ಗ್ರಾಮದ ಮಂಜು ಕೂಡಲ ಎಂಬ ರೈತ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದ,40 ದಿನ ಸರಿಯಾಗಿ ಫಸಲು ಇದೆ ಎಂಬ ಸಂತೋಷವಾಗಿದ್ದ.
ಆದರೆ ಏನು ಮಾಡುವುದು ವಿಪರ್ಯಾಸ ಎಬಂತೆ ಅದನ್ನು ಕೈಯಾರೆ ಭಿತ್ತಿ ಬೆಳೆಯಲಾರಂಭಿಸಿದ ಫಲಸನ್ನು ತನ್ನ ಕೈಯಿಂದಲೇ ನಾಶ ಪಡಿಸಬೇಕಾದರೆ ರೈತನ ಕಣ್ಣಿರು ಬಾರದೇ ಇರದೇ ? ರೈತ ಮಂಜು ತಮ್ಮ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳಕ್ಕೆ ಮಹಾಮಾರಿ ಲದ್ದಿಹುಳು ಆವರಿಸಿ ಬೆಳೆ ಬಾರದೇ ಇದ್ದಾಗ 1 ಎಕರೆ ಮೆಕ್ಕೆಜೋಳವನ್ನು ಬೇಸಾಯಿ ಉಪಕರಣದಿಂದ ನಾಶ ಮಾಡಿರುವ ಘಟನೆ ರೈತ ಸಮುದಾಯದ ಬದುಕಿನ ದುರಂತಕ್ಕೆ ಕನ್ನಡಿ ಹಿಡಿದಂತಾಗಿದೆ. ಕೃಷಿ ಅಧಿಕಾರಿಗಳು ಜಿಲ್ಲೆಯಲ್ಲಿ ಇದ್ದು ಇಲ್ಲದಾಂತಾಗಿದ್ದಾರೆ ಎಂತಲೇ ಹೇಳಬಹುದು.
ಸರ್ಕಾರ ರೈತರ ಧ್ವನಿಯಾಗಿ ರೈತ ಬದುಕು ಹಸನಾಗಲಿ ಎಂದು ಹತ್ತು ಹಲವಾರು ಯೋಜನೆಗಳನ್ನು ತಂದರೂ ಯೋಜನೆಗಳ ಮಾಹಿತಿ ಹಾಗೂ ಅರಿವುವನ್ನು ರೈತ ಸಮುದಾಯಗಳಲ್ಲಿ ಮೂಡಿಸಲು ಅಧಿಕಾರಿಗಳು ವಿಫಲವಾಗಿದ್ದಾರೇ ? ಎಂಬ ಪ್ರಶ್ನೆ ಕಾಡ ತೊಡಗಿದೆ. ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು, ಜನರ ಜೀವನ ಕೃಷಿಯನ್ನೆ ಅವಲಂಬಿಸಿದೆ. ರೈತರ ಪರವಾಗಿ ಸರ್ಕಾರ, ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳು ಕೆಲಸ ಮಾಡಿದರೆ ಕೃಷಿಕರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಇವರುಗಳ ಕಾರ್ಯನಿರ್ವಹಣೆಯಲ್ಲಿ ವಿಫಲತೆ ಕಂಡರೆ ಅಭಿವೃದ್ಧಿ ಹೇಗೆ ಸಾಧ್ಯ ಇನ್ನಾದರೂ ರೈತರ ನೆರವಿಗೆ ಬರುತ್ತಾರಾ ಕಾದು ನೋಡುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ