ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ; ರೈತರು, ಹಾಲು ಉತ್ಪಾದಕರ ಪ್ರತಿಭಟನೆ

ಚಿತ್ರದುರ್ಗ

    ಪ್ರಾದೇಶೀಕ ಸಮಗ್ರ ಅರ್ಥಿಕ ಸಹಬಾಗಿತ್ವ ಹಾಗೂ ಮುಕ್ತ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ನಗರದಲ್ಲಿಂದ ರೈತ ಸಂಘ ಮತ್ತು ಹಾಲು ಉತ್ಪಾದಕರು ಪ್ರತಿಭಟನೆಯನ್ನು ನಡೆಸಿ, ಒಪ್ಪಂದವನ್ನು ವಿರೋಧಿಸಲಾಯಿತು.ವಿಶ್ವ ವಾಣೀಜ್ಯ ಒಪ್ಪಂದಕ್ಕೆ ಭಾರತ ಸರ್ಕಾರ ಸಹಿ ಹಾಕಿದ ನಂತರ ಜಾರಿಗೆ ಬಂದ ಮುಕ್ತ ಆರ್ಥಿಕ ನೀತಿ ಮಾರುಕಟ್ಟೆ ನೀತಿಯಿಂದಾಗಿ ಇಂದು ರೈತ ಆತ್ಮಹತ್ಯೆ ದಾರಿಯನ್ನು ಹಿಡಿದಿದ್ದಾನೆ. ಈ ಒಪ್ಪಂದ ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮವನ್ನು ಬೀರಿ ರೈತ ಕುಟುಂಬವನ್ನು ಅತಂತ್ರÀ ಮಾಡಿ ಕೃಷಿಯನ್ನು ತ್ರಿಶಂಕು ಸ್ಥಿತಿಯಲ್ಲಿ ಇಡುವ ಕಾರ್ಯವನ್ನು ಮಾಡುತ್ತಿದೆ ಎಂದು ರೈತರು ದೂರಿದ್ದಾರೆ.

    ಈ ನೀತಿಯಿಂದಾಗಿ ಆಹಾರ ಸಾರ್ವಭೌÀತ್ವಕ್ಕೆ ಧಕ್ಕೆಯನ್ನುಂಟು ಮಾಡಲಾಗುತ್ತದೆ. ಸಾರ್ವಜನಿಕ ಉದ್ಯಮೆಗಳಿಗೆ ಧಕ್ಕೆಯಾಗುವುದ್ದಲ್ಲದೆ ಅವುಗಳು ಮುಚ್ಚಿ ಕಾರ್ಮೀಕರಿಗೆ ಉದ್ಯೋಗ ಇಲ್ಲದಂತೆ ಮಾಡುತ್ತದೆ ಇದರಿಂದ ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತದೆ. ಬ್ಯಾಂಕ್‍ಗಳು ದಿವಾಳಿಯಾಗುವುದರ ಮೂಲಕ ನಮ್ಮ ಸ್ವಾಮ್ಯದಲ್ಲಿರುವ ನೆಲ.ಜಲ ಮತ್ತು ಭಾಷೆ ಕಾರ್ಪೊರೇಟ್‍ರವರ ಕಂಪನಿಯವರ ಪಾಲಾಗಿ ಅವರ ಹಿಡಿತದಲ್ಲಿ ನಮ್ಮ ಬದಕನ್ನು ನಡೆಸಬೇಕಾಗುತ್ತದೆ, ಇಷ್ಟೆಲ್ಲಾ ಆಪಾಯ ಇದ್ದರು ಸಹಾ ದೇಶದ ಸರ್ಕಾರ ಇದಕ್ಕೆ ಸಹಿಯನ್ನು ಹಾಕಿದೆ, ಇದು ವಿಶ್ವ ವಾಣೀಜ್ಯ ಒಪ್ಪಂದಕ್ಕಿಂತಲೂ ಸಹಾ ತುಂಬಾ ಆಪಾಯಕಾರಿಯಾಗಿದೆ. ಪ್ರಾದೇಶಿಕ ಸಮಗ್ರ ಅರ್ಥಿಕ ಸಹಬಾಗಿತ್ವ, ಮುಕ್ತ ವ್ಯಾಪಾರ ನೀತಿಯನ್ನು ಮಾಡಿಕೊಳ್ಳಲು ದೇಶ ಉತ್ಸಾಹ ತೋರುತ್ತಿರುವುದು ದುರಂತ ಎಂದು ರೈತರು ತಿಳಿಸಿದ್ದಾರೆ.

   ಆರ್.ಸಿ.ಇ.ಪಿ. ಮುಕ್ತ ವ್ಯಾಪಾರ ನೀತಿ ಬಹುತೇಕ ಕೃಷಿ ವ್ಯಾಪಾರದ ಸರಕುಗಳ ಮೇಲಿನ ಆಮದು ಸುಂಕವನ್ನು ಶಾಶ್ವತವಾಗಿ ಶೂನ್ಯಕ್ಕೆ ತರುತ್ತದೆ, ಈ ಒಪ್ಪಂದಿಂದ ಪ್ರಪಂಚದ ಹಲವಾರು ದೇಶಗಳು ತಮ್ಮ ದೇಶದ ಉತ್ಪನ್ನಗಳನ್ನು ನಮ್ಮ ದೇಶದಲ್ಲಿ ಮಾರಾಟ ಮಾಡಲು ಮುಂದಾಗುತ್ತವೆ ಇದರಿಂದ ನಮ್ಮ ದೇಶದ ಕೃಷಿ ಮತ್ತು ಕೈಗಾರಿಕೆಗಳಿಗೆ ಧಕ್ಕೆ ಬಂದು ಅವುಗಳು ನಾಶದ ಹಂತವನ್ನು ತಲುಪುತ್ತವೆ, ಇದರಿಂದ ಬಹುತೇಕ ರೈತಾಪಿ ವರ್ಗದ ಮನೆಗಳ ಬೆನ್ನೆಲುಬಾದ ಹೈನುಗಾರಿಕೆಯೂ ಸಹಾ ಸಂಕಷ್ಟಕ್ಕೆ ಒಳಗಾಗುತ್ತದೆ ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

    ಈ ಒಪ್ಪಂದದಿಂದಾಗಿ ಬಿತ್ತನೆಯ ಬೀಜದ ಮೇಲೆ ರೈತರಿಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ ಬೆಳೆ ಬಾರದಿದ್ದರು ಸಹಾ ಸಂಬಂಧಪಟ್ಟ ಕಂಪನಿಯ ಮೇಲೆ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳಲು ಆದಿಕಾರ ಇರುವುದಿಲ್ಲ ಇಲ್ಲಿ ಕಂಪನಿಗಳೇ ಸುಪ್ರಿಂ ಬೇರೆ ಏನು, ಯಾರು ಸಹಾ ಇರುವುದಿಲ್ಲ ಇದರಿಂದ ರೈತ ಸಂಕಷ್ಟಕ್ಕೆ ಒಳಗಾಗುತ್ತಾನೆ ಎಂದು ತಿಳಿಸಿದ್ದಾರೆ.

   ಕೇಂದ್ರ ಸರ್ಕಾರ ವಿದೇಶದಿಂದ ಹಾಲು ಆಮದು ಮಾಡಿಕೊಂಡರೆ ಹೈನುಗಾರಿಕೆ ನಂಬಿರುವ ಕುಟುಂಬಗಳು ಬೀದಿಗೆ ಬೀಳುತ್ತವೆ ಗ್ರಾಮಾಂತರ  ಜಿಲ್ಲೆಯ ಬಹುತೇಕ ಮಂದಿ ಹೈನುಗಾರಿಕೆ ನಂಬಿ ಬದುಕುಕಟ್ಟಿಕೊಂಡಿದ್ದಾರೆ. ವಿದೇಶಿ ಹಾಲು ಆಮದು ಮಾಡಿಕೊಂಡರೆ ಇವರು ಬದುಕು ನರಕವಾಗುತ್ತದೆ. ಹೀಗಾಗಿ ಸಿಎಂ ಯಡಿಯೂರಪ್ಪ ಕೇಂದ್ರದ ಮೇಲೆ ಪ್ರಭಾವ ಬೀರಿ ವಿದೇಶದಿಂದ ಹಾಲು ಆಮದು ಮಾಡಿಕೊಳ್ಳುವ ನಿರ್ಧಾರವನ್ನು ತಡೆಯಬೇಕು ಎಂದು ಆಗ್ರಹಿಸಿದರು.

    ಈ ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ನುಲೆನೂರು ಶಂಕ್ರಪ್ಪ, ಧನಂಜಯ,ಭೂತಯ್ಯ.ಸುರೇಶ್ ಬಾಬು, ತಿಪ್ಪೇಸ್ವಾಮಿ,ತಿಮ್ಮಣ್ಣ ಪ್ರವೀಣ್ ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap