ವಿಧಾನಸೌಧ ಮುತ್ತಿಗೆಗೆ ಹಾಕಲು ತೆರಳಿದ ರೈತರನ್ನು ತಡೆದ ಖಾಕಿ ಪಡೆ

ಬೆಂಗಳೂರು

         ವಿಧಾನಸೌಧ ಮುತ್ತಿಗೆಗೆ ತೆರಳಿದ ಸಾವಿರಾರು ರೈತರನ್ನು ನಗರದ ಫ್ರೀಡಂ ಪಾರ್ಕ್ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರು.

        ತಡೆಯುತ್ತಿದ್ದರೆ, ಪಟ್ಟು ಬಿಡದ ರೈತರು ಸರ್ಕಾರಕ್ಕೆ ಒಂದು ಗಂಟೆ ಗಡುವು ನೀಡಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ.

         ಕೂರಲು ಬಂದಿಲ್ಲ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಂದಿದ್ದೇವೆ. ವಿಧಾನಸೌಧದ ಮೂರನೇ ಮಹಡಿಗೂ ಜನಸಾಮಾನ್ಯರು ಬರಬಹುದು ಎಂದು ಹೇಳಿರುವ ಸಿಎಂ, ಇದೀಗ ಪೊಲೀಸರ ಮೂಲಕ ನಮ್ಮನ್ನು ತಡೆದಿದ್ದಾರೆ. ಒಂದು ಗಂಟೆಯ ಒಳಗೆ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲೇಬೇಕು. ಕ್ಷಮೆ ಕೇಳಬೇಕೆಂದು ರೈತ ಮುಖಂಡರು ಆಗ್ರಹಿಸಿದ್ದಾರೆ. ನಾವು ವಿಧಾನಸೌಧಕ್ಕೆ ಬರುವುದು ಬೇಡ ಅಂದ್ರೆ ಸಿಎಂ, ಡಿಸಿಎಂ ಅವರೇ ಸ್ಥಳಕ್ಕೆ ಬರಲಿ ಎಂದು ಆಗ್ರಹಿಸಿದರು.

        ಫ್ರೀಡಂ ಪಾರ್ಕ್ ಬಳಿ ಇಡೀ ರೋಡ್ನಲ್ಲಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಪರಿಣಾಮ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಟ್ರಾಫಿಕ್ ಸಮಸ್ಯೆ ಬಗ್ಗೆ ಪೊಲೀಸರು ಪ್ರತಿಭಟನಾಕಾರರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

        ಕುಮಾರಸ್ವಾಮಿ ಹೇಳಿದ್ರು ವಿಧಾನಸೌದದ ಗೇಟ್ಗಳನ್ನು ಒಡೆದುಹಾಕಿ ಸಾರ್ವಜನಕರಿಗೆ ಮುಕ್ತ ಮಾಡುತ್ತೇವೆ ಅಂತ. ಇದೀಗ ನಮ್ಮನ್ನು ನಡುರಸ್ತೆಯಲ್ಲಿ ಬಿಸಿಲಿನಲ್ಲಿ ನಿಲ್ಲಿಸಿದ್ದಾರೆ. ಸರ್ಕಾರ ಕೊಟ್ಟ ಮಾತು, ಸಮಯ ಉಳಿಸಿಕೊಂಡಿಲ್ಲ. ಈ ಸರ್ಕಾರಕ್ಕೆ ಕಿವಿ ಇಲ್ಲ, ಮೂಗಿಲ್ಲ. ಕೋಮ ಸ್ಥಿತಿಗೆ ತಲುಪಿರೋ ಸರ್ಕಾರ ಇದು. ಈ ಸರ್ಕಾರಕ್ಕೆ ಆಪರೇಷನ್ ಮಾಡಬೇಕಿದೆ. ಸರ್ಕಾರಕ್ಕೆ ಒಂದು ಗಂಟೆ ಸಮಯ ಕೊಡ್ತೇವೆ. ನಿರ್ಧಾರ ತಿಳಿಸಲಿ ಎಂದು ರೈತರು ಗಡುವು ನೀಡಿ ಪ್ರತಿಭಟನೆ ಮುಂದುವರಿಸಿದ್ದಾರೆ.

         ವಸತಿ ಸಚಿವ ಬಂಡೆಪ್ಪ ಕಾಶೆಂಪೂರ್ ಅವರು ಸ್ಥಳಕ್ಕೆ ಬಂದು ಸರ್ಕಾರದ ಪರವಾಗಿ ರೈತರ ಅಹವಾಲುಗಳನ್ನು ಸ್ವೀಕರಿಸಿ,ಮಂಗಳವಾರ ಮಧ್ಯಾಹ್ನದ ಸಭೆಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗುವುದು ಎಂದು ಭರವಸೆ ನೀಡಿದರೂ ರೈತರು ಒಪ್ಪಲಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap