ಅಪಘಾತ: ತಂದೆ ಸಾವು ಮಗನಿಗೆ ಗಾಯ

ಬೆಂಗಳೂರು

      ಮುಂದೆ ಹೋಗುತ್ತಿದ್ದ ಸಿಮೆಂಟ್ ಮಿಕ್ಸರ್ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಆಪೆ ಲಗೇಜ್ ವಾಹನ ಡಿಕ್ಕಿ ಒಡೆದು ತಂದೆ ಮೃತಪಟ್ಟರೆ, ಮಗ ಗಾಯಗೊಂಡಿರುವ ದುರ್ಘಟನೆ ಜಯನಗರ ಸಂಚಾರ ಪೋಲೀಸ್ ಠಾಣಾ ವ್ಯಾಪ್ತಿಯ ಅರವಿಂದ ಜಂಕ್ಷನ್‍ನಲ್ಲಿ ನಡೆದಿದೆ.

      ಜೆಪಿ ನಗರದ ತಿಪ್ಪರಾಜು (75) ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಪುತ್ರ ಸುರೇಶ್ ಚಂದ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

      ಅಂಗಡಿಗಳಿಗೆ ದಿನಸಿ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ತಿಪ್ಪರಾಜು ಅವರು ತಮ್ಮ ಮಗ ಸುರೇಶ್ ಚಂದ್ರ ಓಡಿಸುತ್ತಿದ್ದ ಆಪೆ ಲಗೇಜ್ ವಾಹನದಲ್ಲಿ ದಿನಸಿ ವಸ್ತುಗಳನ್ನು ತುಂಬಿಕೊಂಡು ಬುಧವಾರ ಸಂಜೆ 5ರ ವೇಳೆ ಜಯನಗರದಲ್ಲಿ ಹೋಗುತ್ತಿದ್ದರು.
ಮಾರ್ಗಮಧ್ಯೆ ಅರವಿಂದ ಜಂಕ್ಷನ್‍ನಲ್ಲಿ ಮುಂದೆ ಸಿಗ್ನಲ್‍ನಲ್ಲಿ ನಿಂತಿದ್ದ ಸಿಮೆಂಟ್ ಮಿಕ್ಸರ್ ಲಾರಿಗೆ ಈ ಜಗೇಜ್ ವಾಹನ ಡಿಕ್ಕಿ ಒಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ತಿಪ್ಪರಾಜು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಜಯನಗರ ಸಂಚಾರ ಪೋಲೀಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸೌಮ್ಯರಾಣಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link