ತುಮಕೂರು:
ತುಮಕೂರು ತಾಲ್ಲೂಕು ವೀರಶೈವ ಲಿಂಗಾಯಿತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಸಿ. ಜಯಕುಮಾರ್ (ಪಂಚನಹಳ್ಳಿ) ಅವರು ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ.
ರಂಗಕ್ಷೇತ್ರದಲ್ಲಿ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ನಾಟಕಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿರುವ ಇವರು ಹಲವಾರು ನಾಟಕಗಳಿಗೆ ನಿರ್ದೇಶನ ನೀಡಿರುತ್ತಾರೆ. ಇವರ ಸಾಧನೆಯನ್ನು ಗುರುತಿಸಿ ಇವರಿಗೆ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.
ಇವರಿಗೆ ಕಲಾ ಸೇವಾ ಪ್ರಶಸ್ತಿ, ಕಲಾಭೂಷಣ ಪ್ರಶಸ್ತಿ, ರಂಗಮಿತ್ರ ಪ್ರಸಸ್ತಿ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ, ಕರ್ನಾಟಕ ರತ್ನ ಸಿಂಧೂರ ತಿಲಕ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಆಲೂರು ವೆಂಕಟರಾಮಯ್ಯ ಪ್ರಶಸ್ತಿ, ಕರುನಾಡ ಚಿರಂಜೀವಿ ಪ್ರಶಸ್ತಿ ಹಾಗೂ ಕನ್ನಡ ಸೇವಾ ರತ್ನ ಪ್ರಶಸ್ತಿಗಳು ಲಭಿಸಿವೆ.
ಇವರ ಈ ಸಾಧನೆಯನ್ನು ಗುರುತಿಸಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ ಇವರು ಮಹಾತ್ಮ ಜ್ಯೋತಿಬಾ ಪುಲೆ ಫೆಲೋಶಿಪ್ ನ್ಯಾಷನಲ್ ಅವಾರ್ಡ್-2018 ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ