ಜಿ ಎಸ್ ಬಿ ಪರ ಸೊಗಡು ಶಿವಣ್ಣ ಪ್ರಚಾರ

ಎಂ ಎನ್ ಕೋಟೆ :

       ದೇಶದ್ಯಾಂತ ಪ್ರಧಾನಿ ನರೇಂದ್ರ ಮೋಧಿಯವರ ಅಲೆ ವ್ಯಾಪಕವಾಗಿದ್ದು ಅವರ ನಾಯಕತ್ವದ ಸದೃಡ ಆಡಲಿತ ಹಾಗೂ ಜನಪರ ಯೋಜನೆಗಳೇ ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.

       ಗುಬ್ಬಿ ತಾಲ್ಲೂಕಿನ ಅರೇಹಳ್ಳಿ , ಹೊಸಕೆರೆ ಗ್ರಾಮದಲ್ಲಿ ಜಿ ಎಸ್ ಬಸವರಾಜು ಪರ ಪ್ರಚಾರದ ವೇಳೆ ಮಾತನಾಡಿದ ಅವರು ನರೇಂದ್ರ ಮೋಧಿಯವರು ನಮ್ಮ ದೆಶಕ್ಕೆ ನೀಡಿರುವ ಸಾಧನೆ ರೈತಪರ ಯೋಜನೆಗಳು ಮಹಿಳೆಯರಿಗೆ ಹತ್ತು ಹಲವು ಯೋಜನೆ ಜಾರಿಗೆ ತಂದಿದ್ದಾರೆ. ದೇಶಕ್ಕೆ ಸಮರ್ಥ ನಾಯಕನಾಗಿರುವ ನರೇಂದ್ರ ಮೋಧಿಯವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕಾದರೆ ನಾವೆಲ್ಲರೂ ಯಾವುದೇ ಜಾತಿ ಮತ ಭೇಧವಿಲ್ಲದೆ ಒಗ್ಗಾಟಾಗಿ ಬಿಜೆಪಿ ಪಕ್ಷಕ್ಕೆ ಮತ ಹಾಕುವಂತೆ ಮನವಿ ಮಾಡಬೇಕು ಎಂದರು.

       ನಮ್ಮ ಜಿಲ್ಲೆಯ ಮತದಾರರ ಮೇಲೆ ಮೋಧಿಯವರ ಅಲೆ ಇದ್ದು ದೇಶ ಕಟ್ಟುವಂತಹ ವ್ಯಕ್ತಿ ಮೋಧಿಯವರಿಂದ ಮಾತ್ರ ಸಾಧ್ಯ ಎಂದರು. ನಮ್ಮ ದೇಶ ಉಳಿಯಬೇಕಾದರೆ ನರೇಂದ್ರ ಮೋಧಿಯವರನ್ನ ಮತ್ತೆ ನಾವು ಪ್ರಧಾನಿ ಮಂತ್ರಿಯನ್ನಾಗಿ ಮಾಡಬೇಕು. ಎಂದರು. ಮೋಧಿಯವರು ಮಾಡಿರುವ ಜನಪರ ಯೋಜನೆಗಳೇ ನಮ್ಮ ಅಭ್ಯರ್ಥಿ ಬಸವರಾಜು ಗೆಲುವಿಗೆ ಶ್ರೀರಕ್ಷೆಯಾಗಲಿದ್ದು ತಾಲ್ಲೂಕಿನ ಮತದಾರರು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ಮೂಲಕ ತಾಲ್ಲೂಕಿನ ಅಭಿವೃದ್ದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

        ಇದೇ ಸಂಧರ್ಭದಲ್ಲಿ ನಾಯಕ ಜನಾಂಗದ ಯುವ ಮುಖಂಡರಾದ ಚಿದ್ದಾನಂದ್ , ಮಂಜುನಾಥ್ , ರಂಗಯ್ಯ ಜೆಡಿಎಸ್ ತೊರೆದು ಸೊಗಡು ಶಿವಣ್ಣ ನವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

        ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜ್ ಕುಮಾರ್ , ಜಿಲ್ಲಾ ಪಂಚಾಯಿತಿ ಸದಸ್ಯ ರಾಮಾಂಜಿನಯ್ಯ , ತಾಲ್ಲೂಕ್ ಪಂಚಾಯಿತಿ ಸದಸ್ಯೆ ಮಂಜುಳ , ಮುಖಂಡರದ ಸಾಗರನಹಳ್ಳಿ ನಟರಾಜು , ನಂದೀಶ್ , ವೀರಭದ್ರಸ್ವಾಮಿ , ಮಲ್ಲೇಶ್ , ಉದಯ್ , ರಾಜಶೇಖರಯ್ಯ ಹಾಗೂ ಕಾರ್ಯಕರ್ತರು ಭಾಗವಹಿಸದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link