ಕೇಂದ್ರದಲ್ಲಿನ ಅಗತ್ಯ ಕೆಲಸಗಳನ್ನು ಕ್ಷೀಪ್ರಗತಿಯಲ್ಲಿ ಮುಗಿಸಿ: ಅಪರ ಜಿಲ್ಲಾಧಿಕಾರಿ ಸೋಮಶೇಖರ

ಬಳ್ಳಾರಿ

       ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ನಗರದ ರಾವ್ ಬಹಾದ್ದೂರ್ ವೈ ಮಹಾಬಲೇಶ್ವರಪ್ಪ(ಆರ್‍ವೈಎಂಸಿ) ಎಂಜನಿಯರಿಂಗ್ ಕಾಲೇಜಿನಲ್ಲಿ ನ.6ರಂದು ಮತಏಣಿಕೆ ನಡೆಯಲಿದ್ದು, ಈ ಮತ ಏಣಿಕೆ ಕೇಂದ್ರದಲ್ಲಿ ಅಗತ್ಯ ಸೌಕರ್ಯಗಳನ್ನು ಮತ್ತು ಕೆಲಸಗಳ ಪರಿಶೀಲನೆಯನ್ನು ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಎಸ್.ಜೆ.ಸೋಮಶೇಖರ ಅವರು ಮಂಗಳವಾರ ಪರಿಶೀಲನೆ ನಡೆಸಿದರು.

          ಮತಏಣಿಕೆ ಕೇಂದ್ರದಲ್ಲಿ ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ, ಸಂಡೂರು,ಕೂಡ್ಲಿಗಿ, ಹಡಗಲಿ,ಹಗರಿಬೊಮ್ನನಳ್ಳಿ,ಹೊಸಪೇಟೆ ಮತ್ತು ಕಂಪ್ಲಿ ವಿಧಾನಸಭಾ ಕ್ಷೇತ್ರಗಳವಾರು ಸ್ಟ್ರಾಂಗ್‍ರೂಂ ಮತ್ತು ಮತ ಏಣಿಕೆ ಕೋಣೆಗಳನ್ನು ಸ್ಥಾಪಿಸಲಾಗಿದ್ದು,ಅವುಗಳಲ್ಲಿ ಮತ ಏಣಿಕೆಗೆ ಕಲ್ಪಿಸಲಾಗುತ್ತಿರುವ ಸೌಕರ್ಯಗಳನ್ನು,

        ಸಿಆರ್‍ಫಿಎಫ್ ಸಿಬ್ಬಂದಿಗೆ ಕೋಣೆ, ಟ್ರಂಕ್‍ಗಳ ಕೊಣೆ,ಐಟಿ ಹಬ್ ಹಾಗೂ ಮಾಧ್ಯಮ ಕೇಂದ್ರದಲ್ಲಿ ಕಲ್ಪಿಸಲಾಗುತ್ತಿರುವ ಸೌಕರ್ಯಗಳನ್ನು ಅಪರ ಜಿಲ್ಲಾ ಚುನಾವಣಾಧಿಕಾರಿ ಸೋಮಶೇಖರ ಅವರು ಪರಿಶೀಲಿಸಿ ಅಗತ್ಯ ಕೆಲಸಗಳನ್ನು ಅತ್ಯಂತ ಅಚ್ಟುಕಟ್ಟಾಗಿ ಕ್ಷೀಪ್ರಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

        ಚುನಾವಣಾ ವೀಕ್ಷಕರ ಕೋಣೆಗಳನ್ನು ಪರಿಶೀಲಿಸಿದರು ಮತ್ತು ಮತ ಏಣಿಕೆ ಕೇಂದ್ರದ ಸುತ್ತಮುತ್ತ ಒದಗಿಸಲಾಗುತ್ತಿರುವ ಭದ್ರತೆ ಹಾಗೂ ಇನ್ನೀತರ ಸೌಕರ್ಯಗಳನ್ನು ಪರಿಶೀಲಿಸಿ, ಕೆಲಸಗಳನ್ನು ಪೂರ್ಣಗೊಳಿಸಿ ಮತ್ತು ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದರು.

         ಈ ಸಂದರ್ಭದಲ್ಲಿ ಬಳ್ಳಾರಿ ಉಪವಿಭಾಗದ ಸಹಾಯಕ ಆಯುಕ್ತರಾದ ರಮೇಶ ಕೊನರೆಡ್ಡಿ, ಪ್ರೊಬೆಷನರಿ ಸಹಾಯಕ ಆಯುಕ್ತ ಗುರುನಂದನ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಚುನಾವಣೆಗೆ ನಿಯೋಜಿತರಾದ ಇತರ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap