ಹಳೆ ತಹಸಿಲ್ದಾರ್ ಕಛೇರಿಗೆ ಬೆಂಕಿ : ಅಪಾರ ಪ್ರಮಾಣದ ದಾಖಲೆ ಭಸ್ಮ..!

ಹೊಸಪೇಟೆ:

      ನಗರದ ಹಳೇ ತಹಶೀಲ್ದಾರ್ ಕಚೇರಿಗೆ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ದಾಖಲೆ ಸುಟ್ಟು ಭಸ್ಮವಾಗಿರುವ ಘಟನೆ ಇಂದು ನಡೆದಿದೆ.ಬೆಳಗ್ಗೆ ಕಚೇರಿ ತೆರೆಯುತ್ತಲ್ಲೇ ಈ ಅವಘಡ ನಡೆದಿದ್ದು,ಎರಡು ಕಂಪ್ಯೂಟರ್ ಮತ್ತು ಸ್ಟೋರ್ ರೂಂನಲ್ಲಿಟ್ಟಿದ್ದ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ. ಹಠಾತ್ ಬೆಂಕಿಯಿಂದಾಗಿ ಇಡೀ ಕಚೇರಿ ತುಂಬಾ ಹೊಗೆ ಆವರಿಸಿಕೊಂಡಿತ್ತು. 

     ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು.ಶಾರ್ಟ್ ಸರ್ಕ್ಯೂಟ್ ನಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ. ಆದರೆ, ಯಾವುದೇ ಪ್ರಾಣಾಪಾಯವಾಗಿಲ್ಲ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap