ಕೋಲ್ಕತ್ತಾ
ಪಶ್ಚಿಮ ಬಂಗಾಲದಿಂದ ಸ್ಪರ್ಧಿಸುತ್ತಿರುವ ಬೆಳ್ಳಿ ಪರದೆಯ ತಾರೆಯರು ತಮ್ಮ ಸ್ಟಾರ್ ಪವರ್ ಮೂಲಕ ರಾಜಕೀಯ ಕಣ ಅಕ್ರಮಿಸಿಕೊಂಡು ಸಂಸತ್ತಿನಲ್ಲೂ ಮೆರೆಯಲು ಸಜ್ಜಾಗಿದ್ದಾರೆ. ಟಿಎಂಸಿ ಈ ಬಾರಿ ಹೆಚ್ಚು ನಟ ನಟಿಯರಿಗೆ ಮಣೆ ಹಾಕಿದ್ದು, 2009ಕ್ಕಿಂತಲೂ ದುಷ್ಪಟ್ಟು ಸ್ಥಾನ ಗೆಲ್ಲುವ ವಿಶ್ವಾಸದ ಅಲೆಯ ಮೇಲೆ ತೇಲಾಡುತ್ತಿದೆ.
ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಬಂಗಾಳಿ ಚಲನಚಿತ್ರೋದ್ಯಮ, ರಂಗಭೂಮಿಯ ಕಲಾವಿದರಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಮೂಲಕ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಗ್ಲಾಮರ್ ಅಂಶವನ್ನೂ ರಾಜಕೀಯ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ.
ಲೋಕಸಭೆಯಲ್ಲಿ ಮೂರನೇ ಅತಿ ದೊಡ್ಡ ಪಕ್ಷವಾಗಬೇಕು ಎಂಬ ಗುರಿಯೊಂದಿಗೆ ಮಮತಾ ಹೋರಾಟ ಮಾಡುತ್ತಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಟಿಎಂಸಿ ದೇಶದಲ್ಲಿ ಮೂರನೆಯ ಅತಿ ದೊಡ್ಡ ರಾಜಕಿಯ ಪಕ್ಷವಾಗಿ ಹೊರಹೊಮ್ಮಲಿದೆ.
ಎಂದು ಹೇಳಿಕೊಂಡಿದ್ದಾರೆ .
ಮತ್ತೊಂದೆಡೆ,ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಹೂಗ್ಲಿ ಕ್ಷೇತ್ರದಿಂದ ರಾಜಕಾರಣಿಯಾಗಿ ಪರಿವರ್ತನೆಯಾದ ನಟಿ ಲಾಕೆಟ್ ಚಟರ್ಜಿ ಅವರನ್ನು ಕಣಕ್ಕೆ ಇಳಿಸಿದೆ. ಇತ್ತೀಚೆಗೆ ಇಬ್ಬರು ಬಂಗಾಳಿ ಚಲನಚಿತ್ರ ನಟರಾದ ಬಿಸ್ವಾಜಿತ್ ಚಟರ್ಜಿ ಮತ್ತು ಮೌಸುಮಿ ಚಟರ್ಜಿ ಅವರು ಬಿಜೆಪಿ ಮುಖಂಡ ಮುಕುಲ್ ರಾಯ್ ಮತ್ತು ಬಂಗಾಳದ ವೀಕ್ಷಕ ಕೈಲಾಶ್ ವಿಜಯವರ್ಜಿಯ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.
ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಅವರು ಪ್ರಸಿದ್ಧ, ತಾರೆಯರಿಗೆ ಟಿಕಟ್ ಕೊಟ್ಟರೆ ಮಾತ್ರ ಗೆಲ್ಲುತ್ತಾರೆ. ಇಲ್ಲದಿದ್ದರೆ ಇಲ್ಲ ಎಂಬ ಭಾವನೆ ಸರಿಯಲ್ಲ. ಉತ್ತಮ ರಾಜಕೀಯ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಬೇಕು, ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಬೇಕು ಎಂಬುದರಲ್ಲಿ ತಾವು ಹೆಚ್ಚು ಆಸಕ್ತಿ, ಒಲವು ಹೊಂದಿರುವುದಾಗಿ ಹೇಳಿದ್ದಾರೆ. ಆದರೆ ಬಿಜೆಪಿ ಮೂಲಗಳ ಪ್ರಕಾರ ರಾಯ್ ಮತ್ತು ವಿಜಯವರ್ಜಿಯವರು ಜನಪ್ರಿಯ ವ್ಯಕ್ತಿಗಳ ಮೇಲೆ ಹೆಚ್ಚು ಮೇಲೆ ಆಸಕ್ತಿ ಹೊಂದಿದ್ದಾರೆ.
ಬಂಗಾಲದಲ್ಲಿ 23 ಸ್ಥಾನಗಳನ್ನು ಗೆಲ್ಲಬೇಕು ಎಂಬ ಅಮಿತ್ ಶಾ ನೀಡಿರುವ ಗುರಿ ಮುಟ್ಟಲು ಸೆಲೆಬ್ರಿಟಿ ಅಭ್ಯರ್ಥಿಗಳ ಅಗತ್ಯವಾಗಿದೆ. ಹೊಸ ಮುಖ ಇಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲುವುದು ಕಷ್ಟಕರ ಎಂದು ಹೇಳಿಕೊಂಡಿದ್ದಾರೆ
ಹಿರಿಯ ನಟಿ ಮೂನ್ ಮೂನ್ ಸೇನ್, ಶತಾಬಿ ರಾಯ್, ಸಂಧ್ಯಾ ರಾಯ್, ತಪಸ್ ಪಾಲ್ ಮತ್ತು ಬಂಗಾಳಿ ಚಲನಚಿತ್ರ ಸೂಪರ್ ಸ್ಟಾರ್ ದೇವ್ (ದೀಪಕ್ ಆಧಿಕಾರಿ) ಅವರು 16 ನೇ ಲೋಕಸಭೆಯಲ್ಲಿ ತೃಣಮೂಲ ಸದಸ್ಯರಾಗಿದ್ದರು .
ಇಬ್ಬರು ಹೊಸ ನಟರು ಪಕ್ಷಕ್ಕೆ ಸೇರಿದ್ದು ಮಿಮಿ ಚಕ್ರವರ್ತಿ ಮತ್ತು ನುಸ್ರತ್ ಜಹಾನ್. ಟಿಕೆಟ್ ಕೂಡ ಪಡೆದುಕೊಂಡಿದ್ದಾರೆ . ನುಸ್ರತ್ ಜಹಾನ್ ಬಸಿರ್ಹಾಟ್ ಮತ್ತು ಮಿಮಿ ಚಕ್ರವರ್ತಿ ಜಾದವ್ ಪುರ್ ನಿಂದ ಸ್ಪರ್ಧಿಸಲಿದ್ದಾರೆ. ಹಾಗೆಯೇ ಶತಾಬ್ದಿ ರಾಯ್, ದೇವ್ (ದೀಪಕ್ ಆಧಿಕಾರಿ) ಮತ್ತು ಮೂನ್ ಮೂನ್ ಸೇನ್ ಕ್ರಮವಾಗಿ ಬಿರ್ಭುಮ್, ಘಟಾಲ್ ಮತ್ತು ಅಸನ್ ಸೋಲ್ ನಿಂದ ಸ್ಪರ್ಧಿಸಲಿದ್ದಾರೆ.
ಹಿರಿಯ ನಟಿ ಮೂನ್ ಮೂನ್ ಸೇನ್ ಕೇಂದ್ರ ಸಚಿವ ಹಾಲಿ ಸಂಸದ ಸಂಸದ ಬಾಬುಲ್ ಸುಪ್ರಿಯೊ ಮತ್ತು ಸಿಪಿಐ (ಎಂ) ಅಭ್ಯರ್ಥಿ ಗೌರಂಗಾ ಚಟರ್ಜಿ ವಿರುದ್ಧ ಕಣಕ್ಕೆ ಇಳಿದಿದ್ದಾರೆ. ಬಂಗಾಳಿ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಮೂನ್ ಮೂನ್ ಸೇನ್ ಅವರು 2014 ರಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ್ದರು.
ಪ್ರಸಿದ್ಧ ಬಂಗಾಳಿ ನಟಿ ಸುಚಿತ್ರ ಸೇನ್ ಮತ್ತು ತ್ರಿಪಾರಾ ದಿವಾನ್ ನ ಮಹಾನ್ ಮೊಮ್ಮಗನಾದ ದಿಬಾನಾಥ್ ಸೇನ್ ಅವರ ಮಗಳು ಸೇನ್ ಆಕ್ಸಫರ್ಡ್ ವಿಶ್ವವಿದ್ಯಾಲಯದಿಂದ ಪದವಿ, ಜಾದವ್ ಪುರ್ ವಿವಿಯಿಂದ ಸ್ನಾತಕೊತ್ತರ ಪದವಿ ಪಡೆದಿದ್ದಾರೆ. 1984 ರಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, 2014 ರಲ್ಲಿ ಅವರು ಬಂಕುರಾದಿಂದ 9 ಭಾರಿ ಸಂಸತ್ತಿಗೆ ಆಯ್ಕೆಯಾಗಿದ್ದ ಸಿಪಿಐ (ಎಂ) ಬಸುದಬ್ ಆಚರಿಯಾ ಅವರನ್ನು ಸೋಲಿಸಿ ದಾಖಲೆ ನಿರ್ಮಿಸಿದ್ದರು.