ಟಾಫೆ ಗೋಡನ್ ಗೆ ಬೆಂಕಿ : ಲಕ್ಷಾಂತರ ರೂ ನಷ್ಟ…!!

ಬೆಂಗಳೂರು

       ದೊಡ್ಡಬಳ್ಳಾಪುರದ ಟಫೆ ಟ್ರಾಕ್ಟರ್ ತಯಾರಿಕಾ ಕಾರ್ಖಾನೆಯ ಗೋಡೌನ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂ ಮೌಲ್ಯದ ಟೈಯರ್‍ಗಳು ವಾಹನಗಳ ಬಿಡಿಭಾಗಗಳು ಸುಟ್ಟು ಭಸ್ಮ ವಾಗಿರುವ ದುರ್ಘಟನೆ ಗುರುವಾರ ಮುಂಜಾನೆ ನಡೆದಿದೆ.

      ಟಫೆ ಟ್ರಾಕ್ಟರ್ ತಯಾರಿಕಾ ಕಾರ್ಖಾನೆಯ ಗೋಡೌನ್‍ಗೆ ಗುರುವಾರ ಮುಂಜಾನೆ 3.30ರ ವೇಳೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡು ಸ್ವಲ್ಪ ಹೊತ್ತಿನಲ್ಲಿ ಇಡೀ ಗೋಡಾನ್ ಆವರಿಸಿ ಟೈರ್ ಸುಡುವ ಕೆಟ್ಟವಾಸನೆ ಕಿ.ಮೀ.ನಷ್ಟು ಹರಡಿದೆ.ಅಲ್ಲದೇ ಗೋಡೌನ್‍ನಿಂದ ದಟ್ಟ ಬೆಂಕಿ ಹೊರಬರಲಾರಂಭಿಸಿದೆ.

        ಸ್ಥಳೀಯರು ಮಾಹಿತಿ ನೀಡಿದ ತಕ್ಷಣವೇ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು 8 ವಾಹನಗಳಲ್ಲಿ ಆಗಮಿಸಿ ಸುಮಾರು 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

       ಗೋಡೌನ್ ಪಕ್ಕದಲ್ಲಿ ಹೊಸದಾದ ಟ್ರ್ಯಾಕ್ಟರ್‍ಗಳನ್ನು ನಿಲ್ಲಿಸಲಾಗಿತ್ತು. ಅಗ್ನಿಶಾಮಕ ಸಿಬ್ಬಂದಿಗಳು ಹೊಸ ಟ್ರ್ಯಾಕ್ಟರ್‍ಗಳಿಗೆ ಬೆಂಕಿ ಹರಡದಂತೆ ಎಚ್ಚರಿಕೆ ವಹಿಸಿ ಕಾಪಾಡಿದ್ದಾರೆ.ಬೆಂಕಿ ಅನಾಹುತಕ್ಕೆ ಕಾರಣ ಏನು ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲವಾದರೂ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಎಂದು ಹೇಳಲಾಗಿದೆ.ಗೋಡೌನ್‍ನಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link