ಬ್ಯಾಡಗಿ:
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ಕಾರಣ ಸ್ಥಳೀಯ ತಾಲೂಕಾಡಳಿತ ಪುರಸಭೆ ಸಿಬ್ಬಂದಿ ನೆರವಿನೊಂದಿಗೆ ಫ್ಲೆಕ್ಸ್, ಬ್ಯಾನರ್ ಹಾಗೂ ಕಟೌಟ್ಸ್‍ಗಳನ್ನು ತೆರವುಗೊಳಿಸಲು ಮುಂದಾಯಿತು.
ಬರುವ ಏ.23 ರಂದು ನಡೆಯುವ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ, ಫ್ಲೆಕ್ಸ್ ತೆರವು ಕಾರ್ಯಾಚರಣೆಗೆ ಮುಂದಾದ ತಾಲೂಕಾಡಳಿತ ಸರ್ಕಾರದ ವಿವಿಧ ಯೋಜನೆಗಳು, ರಾಜಕೀಯ ವ್ಯಕ್ತಿಗಳ ಭಾವಚಿತ್ರವಿರುವ ಫ್ಲೆಕ್ಸ್ ಸೇರಿದಂತೆ ಕಟೌಟ್ಸ್‍ಗಳನ್ನು ತೆರವುಗೊಳಿಸಿದರು.
ಎಲ್ಲೆಲ್ಲಿ ತೆರವು: ಎಪಿಎಂಸಿ ತಹಶೀಲ್ದಾರ ಕಛೇರಿ ಸೇರಿದಂತೆ ಬಹುತೇಕ ಎಲ್ಲ ಸರ್ಕಾರಿ ಕಛೇರಿಗಳು ಮುಂಭಾಗದಲ್ಲಿಯೂ ಸರ್ಕಾರದ ವಿವಿಧ ಯೋಜನೆ ಹಾಗೂ ಕಾರ್ಯಕ್ರಮಗಳ ಎಲ್ಲ ಬ್ಯಾನರ್‍ಗಳನ್ನು ಪುರಸಭೆ ಸಿಬ್ಬಂದಿಗಳು ತೆರವುಗೊಳಿಸಿದರು. ಪಟ್ಟಣದ ಹಾಗೂ ಸುಭಾಸ ಸರ್ಕಲ್, ಹಳೇಪುರಸಭೆ ಇನ್ನಿತರ ಕಡೆಗಳಲ್ಲಿ ಅನುಮತಿ ಮೇರೆಗೆ ಹಾಕಲಾಗಿದ್ದ ಬೋರ್ಡಗಳನ್ನು ತೆರವುಗೊಳಿಸಲಾಯಿತು.
ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನಾದ್ಯಂತ ಪಕ್ಷದ ಮುಖಂಡರು ಪಕ್ಷ ಸಂಘಟನೆಯ ಉದ್ದೇಶದಿಂದ ಹಾಕಲಾಗಿದ್ದ ಫ್ಲೆಕ್ಸ್ ಬ್ಯಾನರ್‍ಗಳನ್ನೂ ಸಹ ತೆರವುಗೊಳಿ ಸಲಾಯಿತು, ತಾಲ್ಲೂಕ ಪಂಚಾಯತ್ ಬಳಿಯಿದ್ದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಇವರ ಜನಸಂಪರ್ಕ ಕಾರ್ಯಾಲಯದ ನಾಮಫಲಕವನ್ನೂ ಸಹ ಮುಚ್ಚಲಾಯಿತು.