ನಿತ್ಯಕಾಯಕದಲ್ಲೇ ಜಗಜ್ಯೋತಿ ಬಸವೇಶ್ವರರ ಆದರ್ಶಗಳನ್ನು ಅಳವಡಿಸಿಕೊಳ್ಳಿ

ಚಳ್ಳಕೆರೆ

       ನಾವು ಮಾಡುವ ಕಾಯಕದಿಂದ ಮಾತ್ರ ನಾವು ಪುಣ್ಯವಂತರಾಗುತ್ತೇವೆಂಬ ಜಗಜ್ಯೋತಿ ಬಸವೇಶ್ವರರ ನುಡಿವಾಕ್ಯ ಇಂದಿಗೂ ಪ್ರಸ್ತುತವಾಗಿದೆ. ಯಾವುದೇ ವ್ಯಕ್ತಿ ಯಾವುದೇ ಕಾರ್ಯದಲ್ಲಿರಲಿ ತನ್ನ ಪಾಲಿನ ಕಾರ್ಯವನ್ನು ಸತ್ಯ ಮತ್ತು ಪ್ರಾಮಾಣಿಕತೆಯಿಂದ ಮಾಡುವ ಮೂಲಕ ಧನ್ಯತೆಯನ್ನು ಪಡೆಯಬೇಕೆಂಬುವುದು ಬಸವೇಶ್ವರರ ಉದ್ದೇಶವಾಗಿದ್ದು, ಅದನ್ನು ತಪ್ಪದೆ ಇಲ್ಲಿ ಪಾಲಿಸಲಾಗುತ್ತಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಬಸವರಾಜು ತಿಳಿಸಿದರು.

       ಅವರು, ಮಂಗಳವಾರ ಇಲ್ಲಿನ ಆಸ್ಪತ್ರೆ ಆವರಣದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿದ ಅವರು, ನಾವೆಲ್ಲರೂ ನಮ್ಮ ಕಾರ್ಯದಲ್ಲಿ ಪಾರದರ್ಶಕತೆಯನ್ನು ಅಳವಡಿಸಿಕೊಂಡು ಮುನ್ನಡೆಯುವ ಮೂಲಕ ಜಗಜ್ಯೋತಿ ಬಸವೇಶ್ವರರ ಆದರ್ಶಗಳನ್ನು ಪಾಲಿಸೋಣವೆಂದರು.

         ಈ ಸಂದರ್ಭದಲ್ಲಿ ಮಕ್ಕಳ ತಜ್ಞ ಡಾ.ಜಿ.ತಿಪ್ಪೇಸ್ವಾಮಿ, ಕಾಂತರಾಜು, ಪ್ರಕಾಶ್, ಪತ್ರಕರ್ತ ಸೊಂಡೆಕೆರೆ ಶಿವಣ್ಣ, ಗೋಪನಹಳ್ಳಿ ಪ್ರಸನ್ನ, ಶುಶ್ರೂಷಕಿಯರಾದ ಪಾರ್ವತಮ್ಮ, ನಾಗರತ್ನಮ್ಮ, ಪುಟ್ಟರಂಗಮ್ಮ, ಗಾಯಿತ್ರಿ, ಸಾವಿತ್ರಮ್ಮ ಮುಂತಾದವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link