ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೇ ನಿತ್ಯ ನಿರಂತರವಾಗಿರಬೇಕು

ಹೊಸದುರ್ಗ:

     ಪರಿಸರ ದಿನಾಚರಣೆಒಂದು ದಿನಕ್ಕೆ ಸೀಮಿತವಾಗದೇ ನಿತ್ಯ ನಿರಂತರವಾಗಿರಬೇಕು. ಸಾಮಾಜಿಕ ವ್ಯವಸ್ತೆಯಲ್ಲಿಇರುವ ನಾವು ಪರಿಸರ ಸಂರಕ್ಷಣೆಗೆ ಮುಂದಾಗಬೇಕುಎಂದುತಾಲ್ಲೂಕು ಪಂಚಾಯಿತಿಕಾರ್ಯನಿರ್ವಹಣಾಧಿಕಾರಿ ಮಹಮದ್‍ಮುಬೀನ್‍ಕರೆ ನೀಡಿದರು.

       ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಂಗಳವಾರ ಬೆಳಿಗ್ಗೆ ಹೊಸದುರ್ಗ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಕ್ಕೂ ಮುನ್ನಾ ಪ್ರತಿಜ್ಞಾವಿಧಿ ಭೋಧಿಸಿ ಮಾತನಾಡಿದರು.ಅಧಿಕಾರಿಗಳು ಹಾಗೂ ನೌಕರರು ಮತ್ತು ಸಿಬ್ಬಂಧಿ ವರ್ಗದವರು ಕಛೇರಿಯ ಕೆಲಸಕ್ಕೆ ಬಂದಾಗ ಒಬ್ಬೋಬ್ಬರೂ ಸಹಾ ಎರಡೆರಡು ಸಸಿಗಳಿಗೆ ನಿತ್ಯವೂ ಸಹಾ ನೀರು ಹಾಕಿದರೆ ಅವು ತಾನಾಗಿಯೇ ಬೆಳದು ದೊಡ್ಡವಾಗುತ್ತವೆ.ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಅವುಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ತೆಗೆದುಕೊಳ್ಳಬೇಕು ಎಂದರು.

     ಪರಿಸರ ಸಂರಕ್ಷಣೆಯ ಪಕ್ರಿಯೆ ನಿರಂತರವಾಗಿರಬೇಕು. ಸಿಇಓ ಸತ್ಯಭಾಮಅವರ ನಿರ್ಧೇಶನದಂತೆ ನಮ್ಮತಾ.ಪಂ ಆವರಣದಲ್ಲಿ 100 ಸಸಿಗಳನ್ನು ನೆಟ್ಟಿದ್ದೇವೆ. ಜ್ಯೂನಿಯರ್‍ಕಾಲೇಜುಆವರಣದಲ್ಲಿಕೂಡ 500 ಗಿಡಗಳನ್ನು ನೆಡುವುದರ ಮೂಲಕ ಸಾಕ್ಷಿಯಾಗಿದ್ದೇವೆ .ಅದರಂತೆಯೇಹೊಸದುರ್ಗತಾಲ್ಲೂಕಿನ 33 ಗ್ರಾ.ಪಂ ಕಛೇರಿಗಳಲ್ಲಿ ಕನಿಷ್ಠ 500ರಂತೆ ಏಕಕಾಲಕ್ಕೆ ಗಿಡಗಳನ್ನು ನೆಡಲು ಸೂಚನೆ ನೀಡಿದ್ದೇವೆ. ಸಸಿಗಳನ್ನು ಬರೀ ನೆಡುವುದರ ಮೂಲಕ ಕ್ರಾಂತಿ ಮಾಡುವುದಲ್ಲ, ಸಸಿಗಳನ್ನು ಪಾಲನೆ ಪೋಷಣೆ ಮಾಡುವಂತೆಎಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು.

      ತಹಶೀಲ್ದಾರ್ ಎಚ್.ಬಿ.ವಿಜಯ್‍ಕುಮಾರ್ ಮಾತನಾಡಿಪರಿಸರ ಸಮತೋಲನ ಕಾಯ್ದುಕೊಳ್ಳಲು ಅರಣ್ಯಗಳು ಸಹಕಾರಿ . ಪರಿಸರದ ಅಗತ್ಯತೆ, ಕಾಳಜಿ, ಅರಿವು ಹೊಂದಿರುವುದರಜೊತೆಗೆ ಪರಿಸರಕ್ಕೆ ನೀಡುತ್ತಿರುವಕೊಡುಗೆ ಏನು ಎಂಬುದನ್ನು ಮನವರಿಕೆ ಮಾಡಿಕೊಂಡು ಅದರ ಉಳಿವಿಗೆ ಜಾಗೃತರಾಗಬೇಕುಎಂದರು.

     ಈ ಸಂಧರ್ಬದಲ್ಲಿತಾಲ್ಲೂಕು ಪಂಚಾಯಿತಿಅಧ್ಯಕ್ಷೆ ಶ್ರೀಮತಿ ಪ್ರೇಮಾರವೀಂದ್ರ,ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿಚೇತನಾಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ,ಪುರಸಭಾಮುಖ್ಯಾಧಿಕಾರಿ ಮಂಜಪ್ಪ,ಅರಣ್ಯಾಇಲಾಖೆಯ ಅಧಿಕಾರಿಗಳು,ಸಿಬ್ಬಂಧಿವರ್ಗದವರು ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ನೌಕರ ವರ್ಗದವರು ಹಾಗೂ ಸಿಬ್ಬಂಧಿವರ್ಗದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link