ಫಲಪುಷ್ಪ ಪ್ರದರ್ಶನಕ್ಕೆ ಶಾಸಕರಿಂದ ಚಾಲನೆ

ಹಾವೇರಿ
 
   ನಮ್ಮೂರ ಜಾತ್ರೆ ಅಂಗವಾಗಿ ಹುಕ್ಕೇರಿಮಠದ ಮಹಿಳಾ ಕಾಲೇಜು ಆವರಣದಲ್ಲಿ ಆಯೋಜಿಸಲಾದ ಮೂರು ದಿವಸಗಳ ಫಲಪುಷ್ಪ ಪ್ರದರ್ಶನಕ್ಕೆ ಶಾಸಕರಾದ ನೆಹರು ಓಲೇಕಾರ ಅವರು ಚಾಲನೆ ನೀಡಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಶುಕ್ರವಾರ ಹುಕ್ಕೇರಿಮಠ ಕಾಲೇಜು ಆವರಣದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ನೆಹರು ಓಲೇಕಾರ ಹಲವು ಬಗೆಯ ತರಕಾರಿ-ಹಣ್ಣುಗಳಿಂದ ತಯಾರಿಸಿದ ಉತ್ತಮ ಚಿತ್ರಗಳು ಎಲ್ಲರ ಕಣ್ಮನಸೆಳೆಯುತ್ತೀವೆ.
     ನಗರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಪ್ರದರ್ಶನವು ಆಕರ್ಷಣೀಯ ಸ್ಥಳವಾಗಿದೆ. ಪ್ರದರ್ಶನವು ಇತರ ರೈತರಿಗೆ ಪ್ರೇರಣೆಯಾಗಿದೆ. ರೈತರು ವಿವಿಧ ತಳಿಯ ಹಲಸು, ಮಾವು, ಪೇರಲ ಗಳನ್ನು ಉತ್ತಮಬೆಳೆಗಳಾಗಿ ಬೆಳೆದಿದ್ದಾರೆ. ಸೃಜನಾತ್ಮಕಕ್ರಿಯೆಯಿಂದ ವಿವಿಧ ಗಣ್ಯರ ಭಾವಚಿತ್ರಗಳನ್ನು ಹಣ್ಣುಗಳಿಂದ ಹಾಗೂ ಸಿರಿಧಾನ್ಯಗಳಿಂದ ನಿರ್ಮಿಸಿದ್ದಾರೆ. ಇವುಗಳನ್ನು ನೋಡಿದಾಗ ಜನರಲ್ಲಿ ಲವಲವಿಕೆ ಹುಟ್ಟುತ್ತದೆ ಎಂದು ಹೇಳಿದರು.
    ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿ ಬೆಳೆದ ತೋಟಗಾರಿಕಾ ಬೆಳೆಗಳನ್ನೆ ವಿಶೇಷವಾಗಿ ಪ್ರದರ್ಶನಕ್ಕೆ ಏರ್ಪಡಿಸಲಾಗಿದೆ. ಕಡಿಮೆ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆದು ಸ್ವಾವಲಂಬಿ ಬದುಕನ್ನು ಸಾಗಿಸುವುದನ್ನು ಇಲ್ಲಿ ಕಾಣಬಹುದು. ಆದರ್ಶ ಕೃಷಿರೈತರಿಗೆ ಫಲಪುಷ್ಪ ಪ್ರದರ್ಶನವು ಮಾದರಿಯಾಗಿದೆ ಎಂದು ಹೇಳಿದರು. 
    ತೋಟಗಾರಿಕಾ ಉಪನಿರ್ದೇಶಕರಾದ ಪ್ರದೀಪ ಎಲ್ ಅವರು ಮಾತನಾಡಿ, ಹಾವೇರಿ ಜಿಲ್ಲೆಯ ಪ್ರಮುಖ ಬೆಳೆಯಾದ ಕೆಂಪು ಮೆಣಸಿನಕಾಯಿ ಪುಡಿ ಉತ್ಪನ್ನ ಹಾಗೂ ಮೆಣಸಿನಕಾಯಿಂದ ತಯಾರಿಸುವ ಓಲಿಯೋ ರಜಿನ್ ಎಣ್ಣೆಯನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಎಣ್ಣೆಯನ್ನು ಸಾಂಬಾರ ಪದಾರ್ಥಗಳಿಗೆ, ಕಾಸ್ಮೇಟಿಕ್, ಹಾಗೂ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹಾಗೂ 12ರಿಂದ15 ರಪ್ತು ಬೆಳೆಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ ಎಂದು ತಿಳಿಸಿದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link