ಹಿರೇಕೆರೂರು
ಕೋರೋನಾ ವೈರಸ್ ನಿಂದ ಇಡೀ ಭಾರತದ ದೇಶವೇ ಲಾಕ್ ಡೌನ್ ಆಗಿದ್ದರೂ ನಮ್ಮ ಪೌರಕಾರ್ಮಿಕರು ಜೀವದ ಹಂಗು ತೊರೆದು ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ.
ಪೌರಕಾರ್ಮಿಕರಿಗೆ ಇಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಹಾಗೂ ಬಿಜೆಪಿ ಮಹಿಳಾ ಘಟಕದ ಹಾವೇರಿ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಬಸನಗೌಡ ಪಾಟೀಲ್ ಮತ್ತು ಅವರ ಕುಟುಂಬದವರು ಸೇರಿ ಇಂದು ಪಟ್ಟಣದ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರವನ್ನು ವಿತರಿಸಿದರು.
ನಂತರ ರಟ್ಟೀಹಳ್ಳಿ ತಾಲೂಕ ಗುಂಡಗಟ್ಟಿ ಗ್ರಾಮದಲ್ಲಿ ಪಡಿತರ ವಿತರಣೆಯ ಸಮಯದಲ್ಲಿ ಆಶಾಕಾರ್ಯಕರ್ತೆಯರು, ಹಾಗೂ ಜಿಲ್ಲಾ ಪ೦ಚಾಯತಿ ಸದಸ್ಯರ ಸಮ್ಮುಖದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ ವಿತರಣೆ ಮಾಡಿದರು.