ಮೊರಾರ್ಜಿ ಶಾಲೆಯಲ್ಲಿ ಪ್ರಾಂಶುಪಾಲರ ವರ್ತನೆಯಿಂದ ಅಡುಗೆ ಸ್ಥಗಿತ 

ಹಗರಿಬೊಮ್ಮಹಳ್ಳಿ:
    ತಾಲೂಕಿನ ವಲ್ಲಭಾಪುರ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಅಡುಗೆ ತಯಾರಕರಿಗೂ ಮತ್ತು ಪ್ರಾಂಶುಪಾಲರ ನಡುವಿನ ಮುನಿಸು ಮತ್ತು ವಾಕ್ ಸಮರದಿಂದ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿಕೆ ಸ್ಥಗಿತಗೊಂಡು, ವಶತಿ ಶಾಲೆಯ ವಿದ್ಯಾರ್ಥಿಗಳ ಸಹಕಾರದಿಂದ ವಸತಿ ಶಾಲೆಯ ನರ್ಸ್, ಎಫ್‍ಡಿಎ ಮತ್ತು ವಾರ್ಡನ್‍ಗಳು ಅಡುಗೆ ತಯಾರಿಸಿದ ಘಟನೆ ಮಂಗಳವಾರ ಜರುಗಿದೆ.
     ಈಗಾಲೇ ಈ ವಸತಿ ಶಾಲೆಯಲ್ಲಿ ಕಳೆದ ವಾರವಷ್ಟೇ ಪ್ರಾಂಶುಪಾರನ್ನು ಬದಲಾಯಿಸಬೇಕು, ವಿಜ್ಞಾನಪಾಠ ಸರಿಯಾಗಿ ಮಾಡಬೇಕು ಎಂದು ಪಟ್ಟು ಹಿಡಿದು ಪ್ರತಿಭಟಿಸಿದ ಘಟನೆ ನಡೆದಿತ್ತು. ಆಗ ತಹಸೀಲ್ದಾರ್ ಮತ್ತು ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಮನವೊಲಿಸಿ ಇದೇ ರೀತಿ ಮತ್ತೇ ಜರುಗಿದೆ ನಾವು ಇಲ್ಲಗೆ ಬಂದು ವಾಸ್ತವ್ಯಮಾಡುವುದಾಗಿ ಭರವಸೆ ನೀಡಿದ್ದರು.
     ಅಲ್ಲದೆ, ಇದಕ್ಕೂ ಮೊದಲು ಜಿ.ಪಂ. ಸಿಇಒ ಅಧಿಕಾರಿಕೂಡ ಭೇಟಿ ನೀಡಿ ಅಲ್ಲಿಯ ಅಸ್ತವ್ಯಸ್ತದಬಗ್ಗೆ ಗರಂ ಆಗಿದ್ದರು. ನಂತರ ಈ ಅಡುಗೆ ಮಾಡುವವರ ಪೈಕಿ ರಂಗನಾಥ ಎಂಟರ್‍ಪೈಸಸ್‍ನ ಸಂಸ್ಥೆಯಿಂದ ಹೊರಗುತ್ತಿಗೆಯಾಗಿ ಕೆಲಸಮಾಡುತ್ತಿದ್ದ ಎ.ಎಂ.ಬಸಯ್ಯನವರನ್ನು ಕೆಲಸದಿಂದ ತೆಗೆಯುವ ಬಗ್ಗೆ ಆದೇಶ ಪತ್ರ ಬಂದಿದ್ದರ ಹಿನ್ನೆಲೆಯಲ್ಲಿ, ಎಲ್ಲಾ ಅಡುಗೆದಾರರು ಒಗ್ಗೂಡಿ ಅವರನ್ನು ಕೆಲಸದಿಂದ ತೆಗೆದುರುವ ಬಗ್ಗೆ ಪ್ರಾಂಶುಪಾಲರಾದ ಹಂಪಮ್ಮಗೌಡ್ರು ಅವರನ್ನು ಕೇಳಿದ್ದರ ಪರಿಣಾಮವೇ ಮಾತಿಗೆಮಾತು ಬೆಳೆದು ಆಗಲೇ ಅರ್ಧ ಅಡುಗೆ ತಯಾರಿಸಿದ್ದವರು ಅಡುಗೆ ಸ್ಥಗಿತಗೊಳಿಸಿದರು.
     ವಸತಿ ಶಾಲೆಯ ಮೇಲಾಧಿಕಾರಿಗಳ ದೂರವಾಣಿ ಆದೇಶದಂತೆ, ಅಡುಗೆ ಹೇಗೋ ತಯಾರಾಯಿತು. ಆದರೆ, ವಸತಿ ಶಾಲೆಯಲ್ಲಿ ಪದೇಪದೇ ಇಂತಹ ಪ್ರಸಂಗಗಳು ಜರುಗುತ್ತಿರುವ ಕಾರಣ ಬೆಸತ್ತ ವಿದ್ಯಾರ್ಥಿಗಳು ತಹಸೀಲ್ದಾರ್ ಕಚೇರಿಯತ್ತದಾವಿಸಿದರು. ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ ತಾವು ಈ ಒಂದುದಿನ ಅಲ್ಲೇ ವಾಸ್ತವ್ಯಮಾಡುವುದಾಗಿ ಭರವಸೆ ನೀಡಿದರು. ಅಲ್ಲಿಂದ ವಿದ್ಯಾರ್ಥಿಗಳು ಹಿಂದಕ್ಕೆ ಮರಳಿದ ಪ್ರಸಂಗ ಜರುಗಿತು.
      ನಂತರ ವಿಷಯ ತಿಳಿದ ತಾಲೂಕಿನ ಹಂಪಾಪಟ್ಟಣ ಜಿ.ಪಂ.ಸದಸ್ಯ ಮಲ್ಲಿಕಾರ್ಜುನ ನಾಯ್ಕ  ವಸತಿ ಶಾಲೆಗೆ ಸಂಜೆ ಭೇಟಿನೀಡಿ, ವಿದ್ಯಾರ್ಥಿಗಳ ಸಮಸಯ್ಯೆಯನ್ನು ಆಳಿಸಿದರು. ಸಂಜೆ ತಹಸೀಲ್ದಾರ್ ಆಶಪ್ಪ ಪೂಜಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಖಾರಿ ಡಾ||ದಿನೇಶ ಭೇಟಿನೀಡಿ ವಿದ್ಯಾರ್ಥಿಗಳೊಂದಿಗೆ ವಾಸ್ತವ್ಯಮಾಡಿದರು.
      ವಿದ್ಯಾರ್ಥಿಗಳೊಂದಿಗೆ ಆಟ, ಪಾಠ-ಪ್ರವಚನ ಹಾಗೂ ಊಟಮಾಡಿ ವಾಸ್ತವ್ಯಮಾಡುವ ಜೊತೆಗೆ ಶಿಕ್ಷಕರಲ್ಲಿ ಹಾಗೂ ವಿದ್ಯಾರ್ಥಿಗಳ ನಡುವೆ ಪರಸ್ಪರ ಸಾಮರಾಸ್ಯಮೂಡಿಸುವಲ್ಲಿ ಯತ್ನಿಸಿದರು.ಈ ವಸತಿ ಶಾಲೆಯಲ್ಲಿ ಪದೇಪದೇ ಈ ರೀತಿ ಘಟನೆಗಳು ಮರುಕಳಿಸುತ್ತಿವೆ ಇದಕ್ಕೆ ಕೊನೇ ಎಂದು ಎನ್ನುವ ಪ್ರಶ್ನೆ ಗ್ರಾಮದವರದಾಗಿದೆ. 
 
     “ವಲ್ಲಭಾಪುರ ಶಾಲೆಯಲ್ಲಿ ಪ್ರಾಂಶುಪಾಲರು ಮತ್ತು ಶಿಕ್ಷಕರ ಹಾಗೂ ಅಡುಗೆ ತಯಾರಕರ ನಡುವೆ ಸಾಮರಾಸ್ಯವೇ ಇಲ್ಲ. ಇದರಿಂದ ಯಾವುದೇ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪರಿಣಾಮಬೀರಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಕೂಡಲೆ ಈ ಬಗ್ಗೆ ಜಿ.ಪಂ.ಸಭೆಯಲ್ಲಿ ಚರ್ಚಿಸುತ್ತೇನೆ.”-ಮಲ್ಲಿಕಾರ್ಜುನ ನಾಯ್ಕ, ಜಿ.ಪಂ.ಸದಸ್ಯ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link