ನಗರಸಭೆಯಿಂದ ಪುಟ್ ಪಾತ್ ಕಾಮಗಾರಿ

ಹಗರಿಬೊಮ್ಮನಹಳ್ಳಿ:

       ಪಟ್ಟಣದ ಬಸವೇಶ್ವರ ಬಜಾರದಲ್ಲಿ ರಸ್ತೆಯ ಮೇಲೆ ಅಡ್ಡದಿಡ್ಡಿ, ಎಲ್ಲೆಂದರಲ್ಲಿ ನಿಲ್ಲುತ್ತಿದ್ದ ವಾಹನಗಳಿಂದ ಸಾರ್ವಜನಿಕರಿಗೆ ಆಗುತ್ತಿದ್ದ ಕಿರಿಕಿರಿಯನ್ನು ತಪ್ಪಿಸಲು ಪುರಸಭೆ ಈಗ ಕ್ರಮ ಕೈಗೊಂಡಿದೆ.ಇತ್ತೀಚಿಗೆ ಸ್ವಚ್ಛತಾ ಆಂದೋಲನ ಜಾಗೃತಿ ಹಿನ್ನೆಲೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ತಾಲೂಕು ಆಡಳಿತದ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಬಸವೇಶ್ವರ ಬಜಾರವನ್ನು ಸುತ್ತು ಹಾಕಿದ ಹಿರಿಯ ಮತ್ತು ಕಿರಿಯ ಶ್ರೇಣಿ ನ್ಯಾಯಾಧೀಶರು ಇಲ್ಲಿಯ ರಸ್ತೆ ಸಂಚಾರ ನಿಯಮ ಮತ್ತು ವಾಹನಗಳ ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ, ಪುರಸಭೆಯು ಪೊಲೀಸರ ಸಹಕಾರದಿಂದ ಟ್ರಾಫಿಕ್ ಸರಳಗೊಳಿಸಲು ವಾಹನಗಳನ್ನು ರಸ್ತೆಯ ಮೇಲೆ ನಿಲ್ಲಿಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳುತ್ತಾ, ಅವುಗಳ ನಿಲುಗಡೆಯನ್ನು ತಡೆಯುವಲ್ಲಿ ಪೊಲೀಸ್ ಸಿಬ್ಬಂದಿ ಹರಸಹಾಸ ಪಡುತ್ತಿದೆ.

       ದರಂತೆ ರಸ್ತೆಯ ಒಂದು ತುದಿಯಲ್ಲಿ ನಿಲ್ಲುತ್ತಿದ್ದ ಪ್ರಯಾಣಿಕರ ಆಟೋಗಳನ್ನು ಪಕ್ಕದ ಫುಟ್‍ಪಾತ್‍ಗೆ ವರ್ಗಾಯಿಸುವ ಕ್ರಮ ತೆಗೆದುಕೊಂಡು ಈಗ ಸಾರ್ವಜನಿಕರಿಗೂ ಮತ್ತು ಓಡಾಡುತ್ತಿದ್ದ ವಾಹನಗಳಿಗೂ ಅನುಕೂಲವಾಗುವಾಗುವಂತೆ ಕಾರ್ಯ ನಿರತರಾಗಿದ್ದಾರೆ.
ಪಟ್ಟಣ ಬೆಳೆಯುತ್ತಿದ್ದಂತೆ.

        ವಾಹನಗಳ ಭರಾಟೆ ಕೂಡ ಬೆಳೆಯುತ್ತಾ ಹೋಗುತ್ತಿದ್ದು, ಪಟ್ಟಣದ ಬಸವೇಶ್ವರ ಬಜಾರದಲ್ಲಿ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ಇದು ಇಂದು ನಿನ್ನೆಯ ಸಮಸ್ಯೆ ಅಲ್ಲ. ಸುಮಾರು ವರ್ಷಗಳಿಂದ ಇರುವಂತ ಸಮಸ್ಯೆಯಾಗಿದೆ. ಫುಟ್‍ಪಾತ್ ವ್ಯಾಪಾರಿಗಳು ಸಹ ಹೆಚ್ಚಾಗುತ್ತಿದ್ದು, ಅವರು ಸಹ ರಸ್ತೆಗಿಳಿದು ವ್ಯಾಪಾರ ಮಡುತ್ತಿದ್ದರು.

         ಅವರ ಫುಟ್‍ಪಾಟ್ ವ್ಯಾಪಾರಿಗಳ ನಿಯಂತ್ರಣಕ್ಕಾಗಿ ರಸ್ತೆಯ ಎರಡು ಬದಿಗೂ ಕಬ್ಬಿಣದ ಗ್ರಿಲ್‍ಗಳನ್ನು ಅಳವಡಿಸಲಾಗಿದೆ. ಅದರಂತೆ, ವಾಹನಗಳ ನಿಲುಗಡೆಯನ್ನು ನಿಯಂತ್ರಿಸಲು ಅದೇ ಫುಟ್‍ಪಾಟ್ ಅಂದರೆ ಗ್ರಿಲ್ ಒಳಗಡೆಗೆ ಪೊಲೀಸರ ಸಹಕಾರದಿಂದ ಕಳಿಸಲಾಗುತ್ತಿದ್ದು ಮುಂದೆ ಟಾಟ ಏಸ್, ಟಾಂಟಾಂ ಸೇರಿದಂತೆ ಇತರೆ ಸರಕು ಸಾಗಣಿಕೆಯ ವಾಹನಗಳನ್ನು ಸಹ ಬೇರೆಡೆ ನಿಲ್ಲಿಸುವ ಆಲೋಚನೆಯಲ್ಲಿ ಪುಸರಭೆ ನಿರತವಾಗಿದೆ ಎಂದು ಪುರಸಭೆಯ ಅಧಿಕಾರಿಗಳು ತಿಳಿಸುತ್ತಾರೆ.

         ರಸ್ತೆಗೆ ಅಡ್ಡಲಾಗಿ ನಿಲ್ಲುತಿದ್ದ ವಾಹನಗಳ, ಪೈಪೋಟಿಗಿಳಿದು ವ್ಯಾಪಾರ ಮಾಡುವ ಫುಟ್‍ಪಾತ್ ವ್ಯಾಪಾರಿಗಳಿಂದ ಈಗ ಒಂದಿಷ್ಟು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link