ನಗರ ಪೊಲೀಸ್ ಇಲಾಖೆಯಿಂದ ಫುಟ್ಪಾತ್ ಅಂಗಡಿಗಳು ತೆರವು ಕಾರ್ಯಾಚರಣೆ

ಹರಿಹರ :

    ನಗರದ ಮುಖ್ಯ ರಸ್ತೆಯಲ್ಲಿ ಮಹಾತ್ಮಾ ಗಾಂಧಿ ವೃತ್ತದಿಂದ ಚನ್ನಮ್ಮ ವೃತ್ತದವರೆಗಿನ ಬೀದಿಬದಿ ವ್ಯಾಪಾರಿಗಳನ್ನು ಇಂದು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ತೆರವು ಕಾರ್ಯಾಚರಣೆ ನಡೆಸಿದರು.

    ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಪಿಎಸ್‍ಐ ಪ್ರಭು.ಡಿ.ಕೆಳಗಿನಮನಿ ಯವರು ಸುದ್ದಿಗಾರರ ಜೊತೆ ಮಾತನಾಡಿ ಮುಖ್ಯ ರಸ್ತೆಯ ಫುಟ್ಪಾತ್ ವ್ಯಾಪಾರಿಗಳು ರಸ್ತೆಯವರೆಗೂ ತಮ್ಮ ಅಂಗಡಿ ಮುಂಗಟ್ಟು ಗಳನ್ನು ಇಟ್ಟುಕೊಂಡಿರುವುದರಿಂದ ಪಾದಚಾರಿಗಳು ಹಾಗೂ ವಾಹನ ಚಾಲಕರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆ ಹಾಗೂ ಮೇಲಧಿಕಾರಿಗಳ ಸೂಚನೆಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ.

      ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿರುವ ಹಣ್ಣಿನ,ಎಳನೀರು,ಚಪ್ಪಲಿ ಹಾಗೂ ಇತರೆ ಅಂಗಡಿ ವ್ಯಾಪಾರಿಗಳಿಂದ ಸಂಜೆಯ ಸಮಯದಲ್ಲಿ ವಿಪರೀತ ಜನಸಂದಣಿಯ ಸಂದರ್ಭದಲ್ಲಿ ತುಂಬಾ ಕಿರಿಕಿರಿಯಾಗುತ್ತಿದೆ.

      ಕಳೆದ ಕೆಲ ದಿನಗಳಿಂದ ಪೊಲೀಸ್ ಧ್ವನಿವರ್ಧಕ ದ ಮೂಲಕ ವ್ಯಾಪಾರಿಗಳಿಗೆ ಹಿಂದಕ್ಕೆ ಸರಿಯಲು ಸೂಚನೆ ನೀಡುತ್ತಿದ್ದರೂ ಸಹ ವ್ಯಾಪಾರಿಗಳು ಮೊಂಡುತನದಿಂದ ವರ್ತಿಸುತ್ತಿರುವುದರಿಂದ ಈ ಕಾರ್ಯಾಚರಣೆ ಯನ್ನು ನಡೆಸಲಾಗುತ್ತಿದೆ.ಮುಂದಿನ ದಿನಗಳಲ್ಲಿ ನಿರಂತರವಾಗಿ ಈ ಕಾರ್ಯಾಚರಣೆಯು ಮುಂದುವರಿಸುವುದಾಗಿ ತಿಳಿಸಿದರು.ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಗಳಾದ ದೇವರಾಜ್, ದ್ವಾರಕೀಶ್, ರವಿ, ಮಂಜಪ್ಪ, ಸತೀಶ್, ರಮೇಶ್, ಮಂಜುನಾಥ್, ಬಂಡೆಪ್ಪ ಇನ್ನು ಮುಂತಾದವರು ಭಾಗಿಯಾಗಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link