ನಿಧಿ ಆಸೆಗಾಗಿ ಪುರಾತನ ದೇವಸ್ಥಾನ ಧ್ವಂಸ

0
37

ತುರುವೇಕೆರೆ

      ನಿಧಿ ಆಸೆಗಾಗಿ ಕಿಡಿಗೇಡಿಗಳು ಪುರಾತನ ದೇವಸ್ಥಾನವನ್ನು ಧ್ವಂಸಗೊಳಿಸಿ ಬಸವೇಶ್ವರಮೂರ್ತಿಯನ್ನು ವಿಗ್ನಗೊಳಿಸಿರುವ ಘಟನೆ ತಾಲ್ಲೂಕಿನ ಮಾಯಸಂದ್ರ ಹೋಬಳಿ ಡಣನಾಯಕನಪುರದಲ್ಲಿ ನಡೆದಿದೆ.

       ತಾಲ್ಲೂಕಿನ ಡಣನಾಯಕನಪುರ ಗ್ರಾಮದಲ್ಲಿ ಸುಮಾರು ವರ್ಷಗಳ ಪುರಾತನ ಬಸವಣ್ಣ ದೇವಸ್ಥಾನ ಇದ್ದು ಗ್ರಾಮದಿಂದ ಸುಮಾರು 300 ಮೀಟರ್ ದೂರದಲ್ಲಿದೆ. ಬಸವಣ್ಣನ ಮೂರ್ತಿಯನ್ನು ಉರುಳಿಸಿ ಅದರ ಅಡಿಯಿದ್ದ ಚಪ್ಪಡಿ ತೆಗೆದು ಹಾಕಿ ಸುಮಾರು 5 ಅಡಿಯಷ್ಟು ಗುಂಡಿ ತೆಗೆಯಲಾಗಿದ್ದು ಮೂರ್ತಿಯಡಿಯಲ್ಲಿ ನಿಧಿಯನ್ನು ತೆಗೆದುಕೊಂಡಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದ ಸುತ್ತ ಹೊಲ ತೋಟಗಳಿಂದ ದೇವಸ್ಥಾನ ಮರೆಯಾಗಿತ್ತು ಎನ್ನಲಾಗಿದೆ. ನಿತ್ಯ ಪೂಜೆ ಮಾಡದಿದ್ದರು ಗ್ರಾಮಸ್ಥರುಗಳು ಸೇರಿ ಕೆಲವು ವಿಶೇಷ ದಿನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಅನ್ನ ದಾಸೋಹ ಮಾಡಲಾಗುತ್ತಿತ್ತು ಎಂದು ಗ್ರಾಮಸ್ಥ ಅಭಿಷೇಕ್ ತಿಳಿಸಿದ್ದಾರೆ.

        ತಡವಾಗಿ ಬೆಳಕಿಗೆ: ಈ ಘಟನೆ ಮಹಾಲಯ ಅಮಾವಾಸ್ಯೆಯ ದಿನ ನಡೆದಿರಬಹುದು ಎನ್ನಲಾಗಿದೆ. ದೇವಸ್ಥಾನದ ಕಡೆಗೆ ಗ್ರಾಮಸ್ಥರು ಯಾರು ಆಗಮಿಸದ ಕಾರಣ ಶುಕ್ರವಾರ ಕಂಡು ಬಂದಿದೆ. ಕೂಡಲೇ ಗ್ರಾಮಸ್ಥರುಗಳು ಆತಂಕ ವ್ಯಕ್ತಪಡಿಸಿ ನಿಧಿ ಆಸೆಗಾಗಿ ಯಾರೋ ಕಿಡಿ ಗೇಡಿಗಳು ಮಾಡಿರುವ ಶಂಕೆ ವ್ಯಕ್ತಪಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here