ಹರಪನಹಳ್ಳಿ
ಬ್ಯಾಂಕಿನ ಅಧಿಕಾರಿಗಳು ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ತಾಲೂಕಿನ ಗುಂಡಗತ್ತಿ ಗ್ರಾಮದ ಸಿಂಡಿಕೇಟ್ ಬ್ಯಾಂಕ್‍ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾದ್ಯಕ್ಷ ಅರಸನಾಳು ಸಿದ್ದಪ್ಪ ಮಾತನಾಡಿ ರೈತರು ಸರಕಾರದ ಸೌಲಭ್ಯಗಳನ್ನು ಮಂಜೂರು ಮಾಡಿಸಿಕೊಳ್ಳಲು ಹಾಗೂ ಬೆಳೆ ವಿಮೆ ಕುರಿತು ಕೇಳಲು ಬ್ಯಾಂಕಿಗೆ ತೆರಳಿದರೆ ಬ್ಯಾಂಕಿನವರು ಮಾಡಿರುವ ಸಾಲಕ್ಕೆ ಜಮೆ ಮಾಡಿಕೊಳ್ಳುವುದರ ಜತೆಗೆ ತೊಂದರೆಯನ್ನು ನೀಡುತ್ತಿದ್ದಾರೆ. ಇದರಿಂದ ರೈತರನ್ನು ಬ್ಯಾಂಕಿನಿಂದ ಒಕ್ಕಲೆಬ್ಬಿಸುವ ಹುನ್ನಾರ ಕೂಡ ಮಾಡುತ್ತಾರೆ ಎಂದು ದೂರಿದರು.
ರೈತರ ಪ್ರಾಣ ರಕ್ಷಣೆ ಮಾಡುವ ಹೊಣೆಗಾರಿಕೆ ಅವರ ಮೇಲಿದ್ದು ಬ್ಯಾಂಕಿನ ಅಧಿಕಾರಿಗಳು ರೈತರಿಗೆ ಮತ್ತು ಕೃಷಿ ಕೂಲಿಕಾರರಿಗೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಬೆಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಈ ಸಂದರ್ಭಧಲ್ಲಿ ತಾಲೂಕು ಅಧ್ಯಕ್ಷ ಧ್ಯಾಮಜ್ಜಿ ಹನುಮಂತಪ್ಪ, ಹೋಬಳಿ ಅಧ್ಯಕ್ಷ ತಲುವಾಗಲು ಕರಿಯಪ್ಪ, ಎಸ್.ಹನುಮಂತಪ್ಪ, ಎಂ.ಶಿವರಾಜ, ಹೆಗ್ಗಪ್ಪ, ಶೇಖರನಾಯ್ಕ, ಅಂಜಿನಪ್ಪ, ಎಲ್.ಕುಮಾರನಾಯ್ಕ, ಸೋಮಪ್ಪ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
