ಬೆಂಗಳೂರು
ಅರಣ್ಯ ಇಲಾಖೆಯವರು ಪ್ರವಾಹದ ಸಂದರ್ಭದಲ್ಲಿ ವರ್ತಿಸಿದ ರೀತಿ ಅಮಾನವೀಯವಾಗಿತ್ತು ಎಂಬುದಾಗಿ ವಿಧಾನಸಭೆಯಲ್ಲಿ ಶುಕ್ರವಾರ ಇಡೀ ಸದನದಲ್ಲಿ ಕಳಕವಳ ವ್ಯಕ್ತವಾಯಿತು. ರಾತ್ರಿ ಏಕಾಏಕಿ ಪ್ರವಾಹ ಬಂದ ಸಂದರ್ಭದಲ್ಲೂ ಅರಣ್ಯ ಇಲಾಖೆಯವರು ತಾವು ಏನೋ ಮಹಾ ಎಂಬಂತೆ ಅದನ್ನು ಗಮನಿಸಿದೇ ಮಾನವೀಯವಾಗಿ ವರ್ತಿಸಿಲ್ಲ. ಇವರಿಗೆ ಏನು ಮಾಡೋದು ಎಂಬುದು ಇಡೀ ಸದನದ ಒಟ್ಟಾರೆ ಅಭಿಪ್ರಾಯವಾಗಿತ್ತು.
ವಿಪಕ್ಷ ನಾಯಕ ಸಿದ್ದರಾಮಯ್ಯ ಅರಣ್ಯ ಇಲಾಖೆಯ ಈ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೇ, ಈ ಕುರಿತು ಸರ್ಕಾರ ಅರಣ್ಯ ಮತ್ತು ಕಂದಾಯ ಇಲಾಖೆಯವರು ಜಂಟಿ ಸಭೆ ನಡೆಸುವಂತೆ ಸೂಚಿಸಿದರು. ಸಿದ್ದರಾಮಯ್ಯನವರ ಮಾತಿಗೆ ಧ್ವನಿಗೂಡಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ, ಮಲೆನಾಡಿನ ಅರಣ್ಯ ಪ್ರದೇಶದಲ್ಲೂ ಇಲಾಖೆ ಹೀಗೇ ವರ್ತಿಸುತ್ತಿದೆ ಎಂಬುದನ್ನು ಸದನದ ಗಮನಕ್ಕೆ ತಂದರು.
ಅರಣ್ಯ ಇಲಾಖೆಯವರು ಇಂತಹ ಅಮಾನವೀಯ ಕ್ರಮವನ್ನು ಕೈಬಿಡಬೇಕು.ಇನ್ನು ಮುಂದೆ ಇಂತಹ ವಿಷಯ ಗಮನಕ್ಕೆ ಬಂದರೆ ಸರ್ಕಾರ ಸುಮ್ಮನಿರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಡೀ ಸದನದ ಭಾವನೆಯನ್ನು ಗಮನಿಸಿ ಆದೇಶಿಸಿದರು. ಶೀಘ್ರವೇ ಕಂದಾಯ ಮತ್ತು ಅರಣ್ಯ ಇಲಾಖೆಯವರನ್ನು ಸೇರಿಸಿ ಸಭೆ ನಡೆಸಲಾಗುವುದು. ಅರಣ್ಯ ಇಲಾಖೆಯವರು ನಿಯಮಗಳ ಹೆಸರಿನಲ್ಲಿ ಹೀಗೆ ಜನರಿಗೆ ಸಮಸ್ಯೆ ಕೊಡುವುದನ್ನು ಮುಂದುವರಿಸಿದರೆ ನಾವು ಸುಮ್ಮನಿರಲ್ಲ.ಹುಷಾರ್ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
