ತಿಪಟೂರು :
ಸರ್ಕಾರವು ನಫೆಡ್ ರಾಗಿ ಖರೀದಿ ಮಾರಾಟ ಕೇಂದ್ರವನ್ನು ಸ್ಥಾಪಿಸಿ ಕ್ವೀಂಟಾಲ್‍ಗೆ 2950 ರೂಗಳನ್ನು ನಿಗದಿ ಮಾಡಿದ ಹಿನ್ನಲೆಯಲ್ಲಿ ದಲ್ಲಾಳಿಗಳು ಹಳ್ಳಿ-ಹಳ್ಳಿಗಳಿಗೆ ಹೋಗಿ ರೈತರಿಗೆ ಕ್ವಿಂಟಾಲ್‍ಗೆ 2500 ರೂಪಾಯಿಗಳಿಂದ 2800 ರೂಗಳನ್ನು ಕೊಡುತ್ತೇವೆ ಎಂದು ರಾಗಿ ಖರೀದಿಯನ್ನು ಮಾಡಿ ತೂಕ ಹಾಗೂ ರಾಗಿಯನ್ನು ಚೀಲಗಳಿಗೆ ತುಂಬುವ ನೆಪದಲ್ಲಿ ರೈತರಿಗೆ ಸಾವಿರಾರು ರೂಪಾಯಿಗಳ ಮೋಸವನ್ನು ಮಾಡಿರುವ ಕಸಬಾ ಹೋಬಳಿಯ ಕರೀಕೆರೆ ಗ್ರಾಮದಲ್ಲಿ ನೆಡೆದಿದೆ.
ಮೈಸೂರು ಜಿಲ್ಲೆಯ ಗೌಸಿಯ ನಗರದ ಹೈದರಾಲಿ ಬ್ಲಾಕ್‍ನ ಎ.ಕೆ.ಎಸ್ ಪುರದ, 10 ನೇ ಕ್ರಾಸ್‍ನ ವಿಳಾಸದಂತೆ ಸೈಯದ್ ದಸ್ತಗೀರ್ ಬಿನ್ ಸೈಯದ್ ಗೌಸ್ ಫೀರ್ ಎಂಬ ಹೆಸರಿನ ಆರೇಳು ಜನ ವ್ಯಕ್ತಿಗಳು ಹತ್ತು ಚಕ್ರವುಳ್ಳ ಲಾರಿ ಕೆ.ಎ09. ಎ3957 ಎಂಬ ವಾಹನದಲ್ಲಿ ಹಳ್ಳಿಗಳಿಗೆ ಪ್ರವೇಶ ಮಾಡಿ ರಾಗಿಯನ್ನು ರೈತರಿಂದ ಖರೀದಿ ಮಾಡುವಾಗ ಅಳತೆ ಹಾಗೂ ತೂಕಗಳಲ್ಲಿ ಬಾರಿ ಕಡಿಮೆ ಇರುವಂತೆ ತೂಕ ಮಾಡಿ, ಮನೆಯ ಮಾಲೀಕನ ಗಮನವನ್ನು ಬೇರೆಯೊಂದು ಕಡೆಗೆ ಹರಿಸಿ ಮನೆಯೋಳಗೆಯಿರುವ ಚೀಲವನ್ನು ನೇರವಾಗಿ ಲಾರಿ ತುಂಬಿ ಮೋಸವನ್ನು ಮಾಡಿ ರಾಗಿಯನ್ನು ಖರೀದಿ ಮಾಡಿದ್ದಾರೆ.
ಕಸಬಾ ಹೋಬಳಿಯ ಚಿಕ್ಕಬಿದರೆ, ಭೈರಾಪುರ, ಕರೀಕೆರೆ, ಅರಸೀಕೆರೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ರಾಗಿ ಖರೀದಿಯನ್ನು ಮಾಡುವಾಗ ಕರೀಕೆರೆ ಗ್ರಾಮದ ಗೌರಮ್ಮ ಕೋಂ ಬಸವರಾಜುರವರ ಮನೆಯಲ್ಲಿದ್ದ ಹಿಂದಿನ ವರ್ಷ ಹಾಗೂ ಪ್ರಸ್ತುತ ವರ್ಷವೂ ಸೇರಿ ಒಟ್ಟು 22 ಕ್ವಿಂಟಾಲ್ ರಾಗಿಯಾಗಿದ್ದು ತೂಕ ಹಾಗೂ ರೈತನ ಗಮನವನ್ನು ಬೇರೆಕಡೆ ಸೆಳೆದು 12 ಕ್ವೀಂಟಾಲ್ ರಾಗಿ ತೋರಿಸಿ ಸುಮಾರು ಇಪ್ಪತ್ತೈದು ಸಾವಿರ ರೂಗಳನ್ನು ಮೋಸ ಮಾಡಿರುವುದು ತಿಳಿದ ಕ್ಷಣ ಅದೇ ಗ್ರಾಮದಲ್ಲಿ ಮತ್ತೋಬ್ಬರಿಗೆ ಎಂಟು ಸಾವಿರ ರೂಗಳು ಮೋಸ ಮಾಡಿದ್ದು ಬೆಳಕಿಗೆ ಬಂದಿದ್ದು, ದಲ್ಲಾಳಿಯನ್ನು ತಡೆ ಹಿಡಿದು ಗ್ರಾಮಸ್ಥರು ವಿಚಾರಿಸಿದಾಗ ತಾನು ಮೋಸ ಮಾಡಿರುವುದು ತಪ್ಪು ಎಂದು ಒಪ್ಪಿಕೊಂಡು ನಷ್ಟವಾದ ರೈತರಿಗೆ ಮೂವತ್ತು ಸಾವಿರ ನಷ್ಟದ ಹಣವನ್ನು ಹಿಂತುರುಗಿಸಿ ಘಟನೆ ನೆಡೆದು ಸಂಬಂಧಪಟ್ಟ ಹೋನ್ನವಳ್ಳಿ ಪೋಲೀಸ್ ಠಾಣೆಗೆ ವಿಷಯವನ್ನು ತಿಳಿಸಿರುತ್ತಾರೆ.