ಬೆಂಗಳೂರು
ಸಿಮ್ ಕಾರ್ಡ್ ನಕಲು ಮಾಡಿ ಉದ್ಯಮಿಯೊಬ್ಬರ 31 ಲಕ್ಷ ದೋಚಿ ದುಷ್ಕರ್ಮಿಗಳು ತಲೆ ಮರೆಸಿಕೊಂಡಿರುವ ಕೃತ್ಯ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪೀಣ್ಯ ಬಳಿಯ ಎಸ್ ಹೀಟ್ ಟ್ರಾನ್ಸ್‍ಫರ್ಸ್ ಮಾಲೀಕರಾದ ಕುಶಾ ಶೆಟ್ಟಿಯ ಏರ್‍ಟೆಲ್ ಸಿಮ್ ಕಾರ್ಡನ್ನು ದುಷ್ಕರ್ಮಿಗಳು ನಕಲು ಮಾಡಿ ಹಂತ ಹಂತವಾಗಿ ಬರೋಬ್ಬರಿ 31 ಲಕ್ಷ ಹಣ ಡ್ರಾ ಮಾಡಿ ತಲೆ ಮರೆಸಿಕೊಂಡಿದ್ದಾರೆ.
ಕುಶಾ ಶೆಟ್ಟಿ ವಿದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಸಿಮ್ ಕಾರ್ಡ್ ಲಾಕ್ ಆಗಿದೆ ಎನ್ನುವ ಮೆಸೇಜ್ ಬಂದಿದೆ.ನೆಟ್‍ವರ್ಕ್ ಸಮಸ್ಯೆ ಎಂದು ಭಾವಿಸಿ ಸುಮ್ಮನಿದ್ದ ಶೆಟ್ಟಿ, ವಾಪಾಸ್ ಬೆಂಗಳೂರಿಗೆ ಬಂದು ನೋಡಿದಾಗ ಕೂಡಲೇ ತನ್ನ ಸಿಮ್ ಕಾರ್ಡ್‍ಗೆ ಜೋಡಣೆಯಾಗಿರುವ ಅಕೌಂಟ್ ಸ್ಟೇಟ್‍ಮೆಂಟ್ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು,ಇವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹತ್ತು ಬಾರಿ ಲಕ್ನೋ ಹಾಗೂ ಸೂರತ್ ಪ್ರದೇಶದಿಂದ 31 ಲಕ್ಷ ಹಣ ಡ್ರಾ ಮಾಡಲಾಗಿದೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಮ್ ಕಾರ್ಡನ್ನು ಬಂದ್ ಮಾಡಬೇಕು ಎಂದು ಏರ್‍ಟೆಲ್ ಕಚೇರಿಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಲ್ಲದೆ ಯಾವುದಾದರೂ ಡೂಪ್ಲಿಕೇಟ್ ಸಿಮ್ ತನ್ನ ನಂಬರ್‍ಗೆ ಕೊಡಲಾಗಿದೆಯೇ ಎಂಬುದನ್ನ ವಿಚಾರಿಸಿದಾಗಲೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿರುವ ಕುಶಾ ಶೆಟ್ಟಿ ಆದಷ್ಟು ಬೇಗ ಏರ್‍ಟೆಲ್ ಕಂಪನಿ ಅಥವಾ ಸಿಮ್ ಕಾರ್ಡ್‍ಗೆ ನಂಬರ್ ಜೋಡಣೆ ಮಾಡಿಸಿರುವ ಬ್ಯಾಂಕ್‍ನವರಿಂದ ಏನಾದರೂ ಸಹಾಯ ಆಗುಬಹುದೆ ಎಂದು ಮನವಿ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಸೈಬರ್ ಪೊಲೀಸರು ಆರೋಪಿಗಳ ಹಿಂದೆ ಬಿದ್ದಿದ್ದಾರೆ. ಪೊಲೀಸರು ಏರ್‍ಟೆಲ್ ಕಚೇರಿಗೆ ಪತ್ರ ರವಾನಿಸಿ ಒಂದೇ ರೀತಿಯ ನಂಬರ್‍ನಲ್ಲಿ ತೆಗೆದುಕೊಂಡಿರುವ ಸಿಮ್‍ಗಳನ್ನ ಲಾಕ್ ಮಾಡುವಂತೆ ಸೂಚಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ