ಬೆಂಗಳೂರು
ಸಿನಿಮಾದಲ್ಲಿ ನಟನೆಗೆ ಅವಕಾಶ ಕೊಡಿಸುವುದಾಗಿ ನಂಬಿಸಿ ಯುವತಿಯೊಬ್ಬಳ ಮೇಲೆ ನಿರಂತರ ಆತ್ಯಾಚಾರ ಮಾಡಿದ ಸ್ಯಾಂಡಲ್‍ವುಡ್ ನಿರ್ಮಾಪಕನೊಬ್ಬನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಕನ್ನಡದ ಹ್ಯಾಕ್ ಎಂಬ ಚಿತ್ರದ ನಿರ್ಮಾಪಕ ಕುಮಾರ್ ಗೌರವ್ ಬಂಧಿತ ಆರೋಪಿಯಾಗಿದ್ದಾನೆ. ಸುಬ್ರಮಣ್ಯಪುರ ನಿವಾಸಿ ಕುಮಾರ್ ಗೌರವ್, ದಾವಣಗೆರೆ ಮೂಲದ ಯುವತಿಗೆ ಚಿತ್ರದಲ್ಲಿ ಅವಕಾಶ ಕೊಡಿಸುವುದಾಗಿ ಲಾಡ್ಜ್‍ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ.
ಯುವತಿ ಹೇಳಿರುವ ಪ್ರಕಾರ ಸುಮಾರು 2 ವರ್ಷಗಳ ಕಾಲ ತನ್ನನ್ನು ಈ ಕೃತ್ಯಕ್ಕೆ ಬಳಸಿಕೊಂಡು ವಂಚಿಸಿದ್ದಾನೆಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿಯನ್ನ ಬಂಧಿಸಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.