ಫಾರ್ಮಸಿ ಸೀಟು ಕೊಡಿಸುವುದಾಗಿ ಹೇಳಿ ವಂಚನೆ…!!!

ಬೆಂಗಳೂರು

         ಆಂಧ್ರದ ಕಾಲೇಜ್ ಆಫ್ ಫಾರ್ಮಸಿಯೊಂದರಲ್ಲಿ ಡಿ ಫಾರ್ಮ ಸೀಟು ಕೊಡಿಸುವುದಾಗಿ ಎಂಟೂವರೆ ಲಕ್ಷ ವಂಚಿಸಿದ್ದ ಖರ್ತನಾಕ್ ಖದೀಮನನ್ನು ಸಂಜಯನಗರ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

       ಬಾಗಲೂರಿನ ಸೈಯದ್ ಮೊಹ್ಮದ್ ಹುಸೇನಿ (56) ಬಂಧಿತ ಆರೋಪಿಯಾಗಿದ್ದಾನೆ.ಆರೋಪಿಯು ಭೂಪಸಂದ್ರದ ವಿನಾಯಕ ಲೇಔಟ್‍ನಲ್ಲಿಮೆಡಿಕಲ್ ಸೀಟ್ ಕನ್ಸಲ್ಟೆಂಟ್ ಕಚೇರಿಯನ್ನು ನಡೆಸುತ್ತಿರುವ ಇರಾನ್ ಮೂಲದ ಸೈಯದ್ ಎಸ್ತಕಿ ಅವರಿಗೆ ಕಳೆದ 2018ರ ಫೆಬ್ರವರಿಯಲ್ಲಿ ಆಂಧ್ರಪ್ರದೇಶದ ವೈಜಾಕ್‍ನಲ್ಲಿರುವ ಶ್ರೀನಿವಾಸರಾವ್ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಡಿ ಫಾರ್ಮ ಕೋರ್ಸಿಗೆ ಸೀಟು ಕೊಡಿಸುವುದಾಗಿ ನಂಬಿಸಿದ್ದ.

         ಡಿ ಫಾರ್ಮ ಸೀಟು ಸಿಗುವ ಆಸೆಯಲ್ಲಿ ಎಸ್ತಕಿಯವರು ಹಣ ನೀಡಲು ಮುಂದಾಗಿದ್ದು, ಅವರಿಂದ ಬರೋಬ್ಬರಿ 8.5 ಲಕ್ಷ ರೂ. ಹಣ ಪಡೆದುಕೊಂಡಿದ್ದ ಆರೋಪಿಯು ಸೀಟು ಕೊಡಿಸದೆ ಹಣವನ್ನು ವಾಪಸ್ಸು ಕೊಡದೆ ವಂಚನೆ ನಡೆಸಿದ್ದ. ಹಲವು ದಿನಗಳವರೆಗೆ ಸೀಟಿಗಾಗಿ ಕಾಯ್ದು ಬೇಸತ್ತ ಎಸ್ತಕಿಯವರು ಸಂಜಯ್ ನಗರ ಪೆÇಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಇನ್ಸ್‍ಪೆಕ್ಟರು ಎನ್.ಗೋಪಾಲ ನಾಯಕ್ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

        ಮೈಸೂರು ಮೂಲದ ಆರೋಪಿ ಮೊಹ್ಮದ್ ಹುಸೇನಿ ಇದೇ ರೀತಿ ಡಿ ಫಾರ್ಮ ಕೋರ್ಸಿಗೆ ಸೀಟು ಕೊಡಿಸುವುದಾಗಿ ವಂಚನೆ ಮಾಡಿದ್ದರೆ ಸಂಜಯ್ ನಗರ ಪೆÇಲೀಸರಿಗೆ ದೂರು ಸಲ್ಲಿಸುವಂತೆ ಅವರು ವಿನಂತಿಸಿಕೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link