ಹಾವೇರಿ
ಈ ಮೆಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾವೇರಿ ಇವರ ವತಿಯಿಂದ ಕಡುಬಡವರಾದಂತಹ ಅರ್ಹ ಮಹಿಳಾ ಫಲಾನುಭವಿಗಳಿಗೆ ಉಚಿತವಾಗಿ 6 ವಾರದ ಗಿರಿರಾಜ ಕೋಳಿಮರಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ದಿನಾಂಕ:17.10.2018 ರಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾವೇರಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು,
ಸದರಿ ಕಾರ್ಯಕ್ರಮವನ್ನು ಸನ್ಮಾನ್ಯ ಶ್ರೀ ನೆಹರು.ಚ.ಓಲೇಕಾರ, ಶಾಸಕರು, ವಿಧಾನ ಸಭಾ ಕ್ಷೇತ್ರ, ಹಾವೇರಿ ರವರು ಉದ್ಘಾಟಿಸಿ ಹಾಗೂ ಸಾಂಕೇತಿಕವಾಗಿ ಕೋಳಿ ಮರಿಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಾ ಗಿರಿರಾಜ ಕೋಳಿ ತಳಿಯು ಗ್ರಾಮೀಣ ಭಾಗದ ಮಹಿಳಾ ಫಲಾನುಭವಿಗಳಿಗೆ ವರದಾನವಾಗಿದೆ. ಗ್ರಾಮೀಣ ಮಹಿಳಾ ಫಲಾನುಭವಿಗಳ ಭಾಗ್ಯಧಾತ ಎಂದೇ ಕರೆಯಿಸಿಕೊಳ್ಳುವ ಈ ತಳಿಯ ಕೋಳಿಗಳ ವಿತರಣಾ ಕಾರ್ಯಕ್ರಮವನ್ನು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದು ತುಂಬಾ ಸಂತಸದ ವಿಷಯ.
ಗ್ರಾಮೀಣ ಮಹಿಳೆಯರು ಸದರಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಪಿ.ಎನ್ ಹುಬ್ಬಳ್ಳಿ, ಸಹಾಯಕ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ,ಹಾವೇರಿ ರವರು ಗಿರಿರಾಜ ಕೋಳಿ ತಳಿಯನ್ನು ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಸಂಶೋದನೆಯ ಮೂಲಕ ಅಭಿವೃದ್ದಿ ಪಡಿಸಲಾಗಿದ್ದು ಸದರಿ ತಳಿಯು ಮೊಟ್ಟೆ ಉತ್ಪಾದನೆ ಹಾಗೂ ಮಾಂಸದ ಉತ್ಪಾದನೆ ಎರಡಕ್ಕೂ ಕೂಡ ಅರ್ಹ ತಳಿಯಾಗಿದ್ದು ಇರುತ್ತದೆ.
ಒಂದು ಕೋಳಿಯು ವರ್ಷಕ್ಕೆ ಸರಾಸರಿ 130 ರಿಂದ 150 ಮೊಟ್ಟೆಗಳ ಉತ್ಪಾದನೆಯ ಸಾಮಥ್ರ್ಯವನ್ನು ಹೊಂದಿದ್ದು 3 ರಿಂದ 4 ತಿಂಗಳ ವಯಸ್ಸಿನಲ್ಲಿ ಸುಮಾರು 6 ಕೆ.ಜಿಯಷ್ಟು ತೂಕವನ್ನು ಹೊಂದುತ್ತದೆ. ಇತರೇ ಕೋಳಿಗಳಿಗಿಂತ ರೋಗ ನಿರೋದಕ ಶಕ್ತಿಯು ಇದರಲ್ಲಿ ಹೆಚ್ಚಾಗಿದ್ದು ಗ್ರಾಮೀಣ ಮಹಿಳೆಯರು ಹಿತ್ತಲ ಕೋಳಿಗಳಾಗಿ ಇವುಗಳನ್ನು ಅತೀ ಕಡಿಮೆ ಖರ್ಚಿನಲ್ಲಿ ಸಾಕುವುದರಿಂದ ತುಂಬಾ ಲಾಭದಾಯಕವಾಗಿದ್ದು ಇರುತ್ತದೆ.
ಇಂದಿನ ದಿನ ನಮ್ಮ ಇಲಾಖೆ ವತಿಯಿಂದ ಹಾವೇರಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಂದ ಮತ್ತು ಜಿಲ್ಲಾ ಪಂಚಾಯತಿಯಿಂದ ಆಯ್ಕೆಯಾದ 115 ಫಲಾನುಭವಿಗಳಿಗೆ ಕಾರ್ಯಕ್ರಮದಡಿಯಲ್ಲಿ ಪ್ರತಿ ಫಲಾನುಭವಿಗೆ 6ವಾರದ 10 ಕೋಳಿ ಮರಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡ ಪ್ರಯುಕ್ತ ಆಯ್ಕೆಹೊಂದಿದ ಎಲ್ಲ ಮಹಿಳಾ ಫಲಾನುಭವಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕರಿಯಪ್ಪ ಉಂಡಿ, ಅಧ್ಯಕ್ಷರು, ತಾಲೂಕ ಪಂಚಾಯತ, ಹಾವೇರಿ ಇವರು ವಹಿಸಿಕೊಂಡಿದ್ದರು. ಹಾವೇರಿ ತಾಲೂಕ ಪಂಚಾಯತ್, ಸದಸ್ಯರಾದ ಶ್ರೀ ವಿರುಪಾಕ್ಷಪ್ಪ ಹುಲ್ಲೂರ, ತಾಲೂಕಿನ ವಿವಿಧ ಭಾಗದಿಂದ ಆಗಮಿಸಿದ ಮಹಿಳಾ ಫಲಾನುಭವಿಗಳು ಮತ್ತು ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಗಳಾದ ಡಾ.ಹೆಚ್.ಬಿ ಸಣ್ಣಕ್ಕಿ, ಡಾ.ಮಹೇಶ ಸವಣೂರ, ಡಾ. ಗಂಗಾಧರ ಸುಕ್ತೆ, ಶ್ರೀ ಎಸ್.ಎಫ್ ಕರಿಯಪ್ಪನವರ, ಶ್ರೀ ಬಿ.ಎಸ್.ಕಲಕೋಟಿ, ಶ್ರೀ ವೆಂಕಟನಾಯ್ಕ್ ಲಂಬಾಣಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ