ಉಚಿತ ನೇತ್ರ ತಪಾಸಣಾ ಶಿಬಿರ

ಸವಣೂರ :

      ಜೀವನದಲ್ಲಿ ಅತ್ಯಮೂಲ್ಯವಾದ ಕಣ್ಣು ಸಂರಕ್ಷಿತವಾಗಿರಬೇಕಾದರೆ ಕಾಲ ಕಾಲಕ್ಕೆ ತಪಾಸಣೆ ಹಾಗೂ ಕಾಳಜಿ ಬಹುಮುಖ್ಯ ಎಂದು ಶಂಕರ ಆಸ್ಪತ್ರೆಯ ಡಾ|| ವಿದ್ಯಾಶ್ರೀ ಹೇಳಿದರು. ನಗರದ ತಾಲೂಕ ಆಸ್ಪತ್ರೆಯಲ್ಲಿ ತಾಲೂಕ ವೈಧ್ಯಾಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ,ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ. ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ.

       ಅಮ್ಮಾ ಸಂಸ್ಥೆ(ರಿ)ಹಿರೇಮುಗದೂರ,ಡಾ, ಎಪಿಜೆ ಅಬ್ದುಲ್ ಕಲಾಂ ಪ್ರಾಕೃತಿಕ ಚಿಕಿತ್ಸೆ ಹಾಗೂ ಯೋಗ ಕೇಂದ್ರ ಹಾವೇರಿ.ಶ್ರೀ ಹಡಪದ ಅಪ್ಪಣ್ಣ ವಿವಿದೊದ್ದೇಶಗಳ ಸಂಘ ಹಾವೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ನೇತ್ರದಾನ ಜಾಗೃತಿ ಶಿಬಿರದಲ್ಲಿ ಭಾಗಿಯಾಗಿ ಕಣ್ಣಿನ ಮಹತ್ವದ ಬಗ್ಗೆ ಮಾತನಾಡಿದರು. ಮನುಷ್ಯನಿಗೆ ಎಲ್ಲ ಸಂಪತ್ತು ಇದ್ದರೂ ಅದನ್ನು ಸವಿಯಬೇಕಾದರೆ ಆರೋಗ್ಯ ಉತ್ತಮವಾಗಿರಬೇಕು.

        ಪ್ರಪಂಚ ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು. ಸೂಕ್ಷ್ಮ ಅಂಗ ಕಣ್ಣು ಬದುಕಿಗೆ ಬೆಳಕಾಗಿರಬೇಕಾದರೆ ಹಿರಿಯರಿಗೆ ಮಕ್ಕಳು ಇಂತಹ ಉಚಿತ ತಪಾಸಣೆಗೆ ಕರೆತರುವ ಮೂಲಕ ಹಿರಿಯರ ಸೇವೆಗೆ ಬದ್ದರಾಗಿರಬೇಕು ಎಂದು ಡಾ|| ವಿದ್ಯಾಶ್ರೀ ಆರೋಗ್ಯ ಸಲಹೆ ನೀಡಿದರು. ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್‍ಸಾಬ ಬುಡಂದಿ ಮಾತನಾಡಿ ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾದರೆ ನಾವು ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಹೊಂದಲು ಸಾಧ್ಯ. ಸರ್ಕಾರಗಳ ಸೌಲಭ್ಯ ಬಡವರಿಗೆ ತಲುಪಲು ವಿದ್ಯಾವಂತರು ಕ್ರೀಯಾಶೀಲರಾಗಬೇಕು ಎಂದರು.

         ಇದೇ ಅವಧಿಯಲ್ಲಿ ಶಂಕರ ಆಸ್ಪತ್ರೆಯ ವತಿಯಿಂದ ಹಿರಿಯರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಹಡಪದ ಅಪ್ಪಣ್ಣ ವಿವಿದ್ಯೋದ್ದೇಶಗಳ ಸಂಘದ ಅಧ್ಯಕ್ಷ ಶಿದ್ಲಿಂಗಪ್ಪ ಅಜ್ಜಣ್ಣನವರ.ಗಂಗಾಧರ ಎ.ಶಿವಮೊಗ್ಗದ ಶಂಕರ ಆಸ್ಪತ್ರೆಯ ಕಾರ್ಯವೃಂದದವರಾದ ವೆಂಕಟೇಶ್,ಚಂದ್ರಕಲಾ,ರಂಜಿತ್,ಶಿವಕುಮಾರ,ರಂಜಿತಾ, ಅಮ್ಮಾ ಸಂಸ್ಥೆ(ರಿ)ಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಈ ಶಿಬಿರದಲ್ಲಿ 150 ಕ್ಕೂ ಜನರು ಭಾಗಿಯಾಗಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link