ಕೂಡ್ಲಿಗಿ:
ಬಡವ ಶ್ರೀಮಂತ ಎನ್ನದೆ ಎಲ್ಲರಿಗೂ ಉತ್ತಮ ಆರೋಗ್ಯ ಕಲ್ಪಿಸುವುದೇ ನಮ್ಮ ಉದ್ದೇಶವಾಗಿದೆ ಎಂದು ನರ ರೋಗ ಹಾಗೂ ಮನೋರೋಗ ತಜ್ಞ ಡಾ. ಟಿ.ಆರ್. ಶ್ರೀನಿವಾಸ್ ಹೇಳಿದರು. ಅವರು ಬುಧವಾರ ತಾಲ್ಲೂಕು ವಕೀಲರ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.
ಸಾಮಾಜಿಕ ಸೇವೆ ಮಾಡುವ ಉದ್ದೇಶದಿಂದ ನಾವು ಅನೇಕ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತ ಬಂದಿದ್ದೇವೆ. ಅನೇಕ ಬಡವರು ತಮ್ಮಲ್ಲಿರುವ ರೋಗಗಳ ಬಗ್ಗೆ ಹೆಚ್ಚಿನ ಚಿಕಿತ್ಸೆ ಪಡೆಯಲು ದೊಡ್ಡ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಅಂತವರಲ್ಲಿನ ರೋಗಗಳನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆಗೆ ಸಲಹೆ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಹಿರಿಯ ಶ್ರೇಣಿ ನ್ಯಾಯಾಧೀಶ ನಿತಿನ್ ಯಶವಂತ್‍ರಾವ್ ಮಾತನಾಡಿ, ನ್ಯಾಯಾಲಯದಲ್ಲಿ ನ್ಯಾಯಾದಾನ ಮಾಡುವುದರ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಜಿ. ಹೊನ್ನೂರಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ. ಟಿ.ಎ.ಎಂ. ಶಾಂತಯ್ಯ, ವಕೀಲರ ಸಂಘದ ಕಾರ್ಯದರ್ಶಿ ಡಿ.ಕೆ.ಬಿ. ರಾಜ, ಉಪಾಧ್ಯಕ್ಷ ಟಿ.ಎ. ಸಲೀಂ, ಸಹ ಕಾರ್ಯದರ್ಶಿ ಟಿ. ಮಲ್ಲಿಕಾರ್ಜುನ, ವಕೀಲರಾದ ಬಿ.ಎಸ್. ಕೊಟ್ರಗೌಡ, ಜಾಗಟಗೇರಿ ಕೊಟ್ರೇಶ್, ಜಿ. ಮಲ್ಲಿಕಾರ್ಜುನಯ್ಯ, ಸಿ. ವಿರುಪಾಕ್ಷಪ್ಪ, ಜಿಸಿಐನ ಸಂದೀಪ್ ರಾಯಸಂ, ರಾಮಣ್ಣ, ಪತಂಜಲಿ ಯೋಗ ಸಮಿತಿಯ ಬಿ. ಗೌರಮ್ಮ, ತಾಲ್ಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷ ಶಿವಮೂರ್ತಿ, ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ವಿ.ಜಿ. ವೃಷಬೇಂದ್ರ ಇದ್ದರು.
ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ತಾಲ್ಲೂಕು ವಕೀಲರ ಸಂಘ. ಜೆ.ಸಿ.ಐ ಗೋಲ್ಡಾನ್, ಪದವಿಧರ ವೈಧ್ಯರ ಸಂಘ, ಪತಂಜಲಿ ಯೋಗ ಸಮಿತಿ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಒಕ್ಕೂಟ, ಆಟೋ ಚಾಲಕರ ಮತ್ತು ಮಾಲೀಕರ ಸಂಘ, ಹಾಗೂ ಬಳ್ಳಾರಿಯ ಶ್ರೀಸಾಯಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಶಿಬಿರ ಏಪಡಿಸಲಾಗಿತ್ತು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರ ಆರೋಗ್ಯ ತಪಸಾಣೆ ಮಾಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ