ಹಿರೇಕೆರೂರು
ಕರ್ನಾಟಕ ಸರ್ಕಾರವು ಬಡ ಜನರಿಗೆ ಲಾಕ್ ಡೌನ್ ನಿಂದಾಗಿ ಯಾವುದೇ ತೊಂದರೆಯಾಗಬಾಗಬಾರದೆಂಬ ಉದ್ದೇಶದಿಂದ ಬಡವರಿಗಾಗಿ ಉಚಿತ ಹಾಲನ್ನು ವಿತರಿಸುವುದಾಗಿ ಹೇಳಿದ್ದು ಅದರಂತೆ ಹಿರೇಕೆರೂರು ಪಟ್ಟಣದಲ್ಲಿ ಬಡವರಿಗೆ ಉಚಿತ ಹಾಲು ವಿತರಣೆ ಮಾಡಲಾಯಿತು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ ಸನ್ಮಾನ್ಯ ಶ್ರೀ ಬಿ.ಎಸ್.ಯುಡಿಯೂರಪ್ಪ ನೆತೃತ್ವದ ನಮ್ಮ ಸರ್ಕಾರವು ಲಾಕ್ ಡೌನ್ ನಿಂದಾಗಿ ಬಡವರಿಗೆ ಯಾವುದೇ ತೊಂದರೆಯಾಗಬಾರದೆಂದು ಹಾಗೂ ಜನತೆಯ ಆರೊಗ್ಯದ ದೃಷ್ಟಿಯಿಂದ ಉಚಿತ ಹಾಲನ್ನು ವಿತರಿಸುವ ಯೋಜನೆ ಜಾರಿಗೊಳಿಸಿದೆ.
ಧಾರವಾಡ ಜಿಲ್ಲಾ ಹಾಲು ಒಕ್ಕೂಟದಲ್ಲಿ ಪ್ರತಿದಿನ 19 ಸಾವಿರ ಲೀಟರ್‍ನಷ್ಟು ಹೆಚ್ಚುವರಿ ಹಾಲು ಸಂಗ್ರಹ ವಾಗುತ್ತಿದೆ ಈ ಹಾಲನ್ನು ಆಯಾ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ನಿರಾಶ್ರಿತರು,ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಕುಟುಂಬವೊಂದಕ್ಕೆ ಪ್ರತಿದಿನ ಒಂದು ಲೀಟರ್ ನಂತೆ ಉಚಿತವಾಗಿ ಏಪ್ರಿಲ್ 14 ರವರೆಗೆ ವಿತರಿಸಿ, ಪೌಷ್ಟಿಕ ಆಹಾರ ನೀಡುವ ಮೂಲಕ ಆಹಾರ ಭದ್ರತೆ ಒದಗಿಸಲಾಗುವುದು.ಈ ನಿಟ್ಟಿನಲ್ಲಿ ನಮ್ಮ ಹಿರೇಕೆರೂರು ಕ್ಷೇತ್ರದ ಬಡ ಜನರಿಗೆ ಸುಮಾರು ನಾಲ್ಕುನೂರು ಲೀಟರ್ ಹಾಲನ್ನು ವಿತರಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಯು.ಬಿ.ಬಣಕಾರ ಹಾಗೂ ಪಟ್ಟಣ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ