ಗುತ್ತಲ :
ಗುತ್ತಲ ಹೋಬಳಿಯ ಹೆಮ್ಮೆಯ ಸ್ವಾತಂತ್ರ್ಯ ಸಂಗ್ರಾಮದ ನೆನಪಿನ ಕೊಂಡಿಯಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪರಮನಗೌ ಹರಕಂಗಿಯವರು(93) ಶನಿವಾರ ವಿಧಿವಶರಾದರು. ಹಮ್ಮೆಯ ನೆನಪಿನ ಸ್ವಾತಂತ್ರ್ಯ ಹೋರಾಟಗಾರರನ್ನು ಕಳೆದುಕೊಂಡ ಎಂದು ಗ್ರಾಮದಲ್ಲಿ ದುಃಖ ಮನೆ ಮಾಡಿತ್ತು. ಶನಿವಾರ ಸಂಜೆ ಹಿಂದೂ ಧರ್ಮದ ವಿಧಿವಿಧಾನಗಳ ಮೂಲಕ ಅಂತ್ಯಕ್ರೀಯೆ ನಡೆಯಿತು.
ತಮ್ಮ 16ನೇ ವಯಸ್ಸಿನಲ್ಲಿಯೇ ಸಂಪೂರ್ಣವಾಗಿ ಭಾಗಿಯಾಗಿ ಸುಮಾರು 35 ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾ ಚೇತನವೇ ನೆಗಳೂರಿನ ಪರಮಣ್ಣ ಹರಕಂಗಿ. 1925 ರಲ್ಲಿ ನೆಗಳೂರಿನ ಲಿಂಗನಗೌಡ ದಂಪತಿಯ ಸುಪುತ್ರರಾಗಿ ಜನಿಸಿದರು.
ಶಿವಾಜಿ ರಾಣ ಪ್ರತಾಪ್ ಸಿಂಹರ ಕಥೆಗಳಿಂದ ಪ್ರಭಾವಿತ: ಪರಮಣ್ಣ ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ ಹಿರಿಯರೊಬ್ಬರು ಛತ್ರಪತಿ ಶಿವಾಜಿ ಹಾಗೂ ರಾಣಾ ಪ್ರತಾಪಸಿಂಹರ ಕಥೆಗಳನ್ನು ಹೇಳಿದ್ದರಂತೆ ಅವುಗಳಿಂದ ಪ್ರಬಾವಿತನಾದ ಪರಮಣ್ಣ ನವರು ತಾವು ಬ್ರಿಟೀಷ್‍ರ ವಿರುದ್ದ ಹೋರಾಟ ಮಾಡಬೇಕೆಂಬ ಛಲ ಹುಟ್ಟಿತ್ತಂತೆ, ಹಿಂದಿ ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನಂತರ ಊರ ಹೊರಗೆ ಹೋಗಿ ಸ್ವಾತಂತ್ರ ಕಹಳೆ ಊದುತ್ತಿದ್ದರಂತೆ, ಮೈಲಾರ ಮಹದೇವಪ್ಪರೊಂದಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದುಮುಕಿದರು.
ಈ ಸಂದರ್ಭದಲ್ಲಿ ಸೂರ್ಯನ ಬೆಳಕಿಲ್ಲದ, ಯಾರೂ ಸಂಪರ್ಕ ಸಿಗದ ಕೋಣೆಯಲ್ಲಿ, ಕಪ್ಪತ್ತಗುಡ್ಡದಲ್ಲಿ ಅವಿತುಕೊಂಡು ,3 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ತಟ್ಟಿನ ಚೀಲಗಳನ್ನು ಧರಿಸಿಕೊಂಡು ಕಾಲ ಕಳೆದರು. ಪುಣೆಯ ಬಿರ್ಲಾ ಕುಟೀರದಲ್ಲಿ 7 ದಿನಗಳ ಕಾಲ ತಂಗಿದ್ದರು. ಮಹಾತ್ಮ ಗಾಂಧಿ, ನೆಹರು, ಸುಭಾಷಚಂದ್ರ ಭೋಸ್ ಅವರನ್ನ ನೋಡಿದ್ದರಂತೆ.
ಶಾಸಕ ನೆಹರು ಓಲೇಕಾರ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಮಾಜಿ ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನ್, ಜಿ.ಪಂ ಸದಸ್ಯ ಸಿದ್ಧರಾಜ ಕಲಕೋಟಿ, ಎ.ಪಿ.ಎಮ್.ಸಿ ಸದಸ್ಯ ಕೃಷ್ಣರೆಡ್ಡಿ ಮೈದೂರ, ಉಪತಹಶೀಲ್ದಾರ ರವಿ ಕೊರವರ, ಪಿ.ಎಸ್.ಐ ಸಿದ್ದಾರೂಡ ಬಡಿಗೇರ, ಗ್ರಾಮಲೆಕ್ಕಾಧಿಕಾರಿ ಪಕ್ಕೀರೇಶ ಬಾರ್ಕಿ ಹಾಗೂ ತಾ.ಪಂ ಸದಸ್ಯರು, ಗ್ರಾ.ಪಂ ಸದಸ್ಯರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು.