ಪ್ರಯಾಣಿಕರ ತಂಗುದಾಣ ಸ್ವಚ್ಛ ಗೊಳಿಸಿದ ಫ್ರೇಂಡ್ಸ್ ಗ್ರೂಪ್‍

ಕೊರಟಗೆರೆ:-

    ಪ್ರಯಾಣಿಕರ ತಂಗುದಾಣಗಳನ್ನು ಸ್ವಚ್ಛತೆಗೊಳಿಸುವ ಮೂಲಕ 63ನೇ ಕನ್ನಡರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಿದ ಫ್ರೇಂಡ್ಸ್‍ಗ್ರೂಪ್‍ನ ವಿನೂತನಆಚರಣೆಗೆ ಪಟ್ಟಣ ಪ್ರಶಂಸೆಯ ಮಹಾಪೂರ ಹರಿದು ಬಂದಿದ್ದು ಕನ್ನಡರಾಜ್ಯೋತ್ಸವದ ವಿಶೇಷವಾಗಿತ್ತು.

      ತಾಲ್ಲೂಕಿನಲ್ಲಿ ಸುಮಾರು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿರುವ ಫ್ರೇಂಡ್ಸ್‍ಗ್ರೂಪ್ ಪಟ್ಟಣದಎಲ್ಲಾ ತಂಗುದಾಣಗಳನ್ನು ಸ್ವಚ್ಛತೆಗೊಳಿಸುವ ಮೂಲಕ ಈ ಬಾರಿ ವಿಶೇಷವಾಗಿ ಕನ್ನಡರಾಜ್ಯೋತ್ಸವವನ್ನುಆಚರಿಸಿ ಜನರ ಮೆಚ್ಚುಗೆಗೆ ಪಾತ್ರರಾದರು.

     ಪ್ರತಿ ಬಾರಿಯಾವುದಾದರೊಂದು ಸಾಮಾಜಿಕ ಸೇವೆಗಳನ್ನು ಮಾಡುವ ಮುಖೇನ ಫ್ರೇಂಡ್ಸ್ ಗ್ರೂಪ್‍ ಇಡೀ ತಾಲ್ಲೂಕಿಗೆ ಮಾದರಿಯಾಗಿದೆ .ಗ್ರೂಪ್ ನಲ್ಲಿರುವಎಲ್ಲಾ ಪಧಾದಿಕಾರಿಗಳು ಕೂಡ ಸ್ವಯಂ ಪ್ರೇರಿತವಾಗಿಬಂದುಒಗ್ಗಟ್ಟಿನಿಂದ ಕೆಲಸ ಮಾಡುತ್ತಿರುವುದಕ್ಕೆ ಸಾರ್ವಜನಿಕರುಶ್ಲಾಘನೆ ವ್ಯಕ್ತಪಡಿಸಿದರು.

       ಈ ರೀತಿಯ ಸಾಮಾಜಿಕ ಸೇವೆಗಳನ್ನು ಗುರುತಿಸಿ ಪ್ರತಿ ವರ್ಷದಂತೆ ಈ ಬಾರಿಯೂಕೂಡಕನ್ನಡರಾಜ್ಯೋತ್ಸವ ದಿನದೊಂದು ಫ್ರೇಂಡ್ಸ್‍ಗ್ರೂಪ್‍ನಸದಸ್ಯರಿಗೆಕನ್ನಡರಾಜ್ಯೋತ್ಸವ ಪ್ರಶಸ್ತಿ ನೀಡುತ್ತಾ ಬಂದಿರುವತಾಲ್ಲೂಕು ಆಡಳಿತ ಈ ಬಾರಿ ಫ್ರೇಂಡ್ಸ್‍ಗ್ರೂಪ್‍ನ ಮುರುಳಿ ರವರಿಗೆ ಪ್ರಶಸ್ತಿ ನೀಡಿದೆ.ತಾಲ್ಲೂಕು ಆಡಳಿತಕ್ಕೆ ಫ್ರೇಂಡ್ಸ್‍ಗ್ರೂಪ್‍ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ಹೃತ್ಪರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.

       ಫ್ರೇಂಡ್ಸ್‍ಗ್ರೂಪ್‍ನ ಮಹತ್ತರಕಾರ್ಯಕ್ರಮಕ್ಕೆ ಸ್ವಯಂ ಪ್ರೇರಿತರಾಗಿ ಶಾಲಾ ಮಕ್ಕಳು ಭಾಗಹಿಸುವ ಮೂಲಕ ಮಹಾತ್ಮಗಾಂಧೀಜಿಯವರುಕಂಡ ಸ್ವಚ್ಛಭಾರತದಕನಸನ್ನು ನನಸು ಮಾಡುವುದಾಗಿತಿಳಿಸಿದರು.ನಂತರಧ್ವಜರೋಹಣ ಮಾಡಿದ ಸಾರ್ವಜನಿಕಆಸ್ಪತ್ರೆಯಡಾ.ನಾಗಭೂಷನ್, ಅಕ್ಷರದಾಸೋಹಸಹಾಯಕನಿರ್ದೇಶಕರಘು.ಟಿ.ಆರ್, ಡಾ.ಮಯೂರ ಗೋವಿಂದರಾಜು ,ಫ್ರೇಂಡ್ಸ್ ಗ್ರೂಪ್‍ನ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಡಿಸಿದರು.

      ಇದೇ ಸಂಧರ್ಭದಲ್ಲಿ ಫ್ರೇಂಡ್ಸ್‍ಗ್ರೂಪ್‍ಅಧ್ಯಕ್ಷರವಿಕುಮಾರ್, ಜಗ್ಗೇಶ್‍ಅಭಿಮಾನಿ ಬಳಗದ ಅಧ್ಯಕ್ಷ ಮಲ್ಲಣ್ಣ, ಪ್ರಕಾಶ್, ಪತ್ರಕರ್ತರಾದ ಪಿ.ಎನ್ ಪದ್ಮನಾಭ್, ಶಿವಾನಂದ್, ನವೀನ್‍ಕುಮಾರ್, ಹರೀಶ್‍ಬಾಬು, ಲಕ್ಷ್ಮೀಶಕೆ.ಎಲ್, ಶಿಕ್ಷಕರಾದ ವೈ.ಸಿ ವೀರಭದ್ರಸ್ವಾಮಿ, ರಾಮಕೃಷ್ಣ ಹಾಗೂ ಮಹೇಶ್, ಚನ್ನಕೇಶವ, ಜಯಸಿಂಹ, ನಟರಾಜು, ರಿಯಾಜ್, ಚಿಕ್ಕಣ್ಣ, ಸೇರಿದಂತೆಇತರರುಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link