ಶ್ರೀರಾಮ ನಗರದ ನಿವಾಸಿಗೆ ಹುಚ್ಚು ನಾಯಿ ಕಡಿತ….!!!

ತಿಪಟೂರು:

        ಹೊನ್ನವಳ್ಳಿಯ ಶ್ರೀರಾಮ ನಗರದ ನಿವಾಸಿ ಹತ್ತಿಕಟ್ಟೆ ನಿವಾಸಿಯಾದ ಲೇ.ದೊಡ್ಡಯ್ಯಅವರ ಪತ್ನಿ ಕೆಂಪಮ್ಮ ಅವರಿಗೆ ಇಂದು ಬೆಳಿಗ್ಗೆ ಸುಮಾರು 8:20ಕ್ಕೆ ಹುಚ್ಚುನಾಯಿ ಕಡಿದಿದೆ.

        ಅವರು ಕುರಿ ಕಸವನ್ನು ಹೊತ್ತುಕೊಂಡು ತಿಪ್ಪೆಗೆ ಹಾಕುವಾಗ ಈ ಘಟನೆ ನಡೆದಿದ್ದು ತಕ್ಷಣ ಎಚ್ಚೆತ್ತ ನಾಗರೀಕರು ಅವರನ್ನು ಸ್ಥಳಿಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ ,ಈ ಘಟನೆಯಲ್ಲಿ ಅವರ ಕೈ ಕಾಲಿಗೆ ನಾಯಿ ಕಚ್ಚಿದೆ ಎಂದು ವರದಿಯಾಗದೆ  ಮತ್ತು ಈ ಘಟನೆಯಿಂದ ಪಂಚಾಯತಿಯ ವಿರುಧ ಜನ ತಿರುಗಿ ಬಿದ್ದಿದ್ದಾರೆ ಎಂದುಯ ವರದಿಯಲ್ಲಿ ತಿಳಿಸಲಾಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ