ಹಾನಗಲ್ಲ :
ಕರ್ನಾಟಕ ನೀರಾವರಿ ನಿಗಮದ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಘಟಕದಲ್ಲಿ ಹಾನಗಲ್ಲಿನ ಧರ್ಮಾ ನದಿಯಿಂದ ಅಚಗೇರಿ ಕೆರೆಗೆ ನೀರು ತುಂಬಿಸುವ ಕಾಮಗಾರಿಯ ಉದ್ಘಾಟನೆ ನ.5 ರಂದು ನಡೆಯಲಿದೆ.
ಪಟ್ಟಣದ ಹೊರಭಾಗದಲ್ಲಿರುವ ಅಚಗೇರಿ ಕೆರೆ ಸುಮಾರು 32 ಎಕರೆ ವಿಸ್ತೀರ್ಣತೆ ಹೊಂದಿದ್ದು, 127 ಘನಅಡಿ ನೀರು ಹಿಡಿದಿಡುವ ಸಂಗ್ರಹಣಾ ಸಾಮಥ್ರ್ಯ ಹೊಂದಿದೆ. ಅಚಗೇರಿ ಕೆರೆ ಮಳೆಗಾಲದಲ್ಲೂ ತುಂಬಲಾರದ ಸ್ಥಿತಿಗೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಧರ್ಮಾ ನದಿಗೆ 75 ಎಚ್‍ಪಿ ಸಾಮಥ್ರ್ಯದ ಎರಡು ನೀರೆತ್ತುವ ಯಂತ್ರಗಳನ್ನು ಅಳವಡಿಸಲಾಗಿದ್ದು, ಅದರ ಮೂಲಕ ಕೆರೆಗೆ ನೀರು ಹರಿಸಲಾಗುತ್ತಿದೆ.
ಈ ಕೆರೆಯ ನೀರಿನಿಂದ ಸುಮಾರು 190 ಎಕರೆ ಕೃಷಿ ಭೂಮಿ ನೀರಾವರಿಗೊಳಪಡಲಿದೆ. ಒಟ್ಟು 2.17 ಕೋಟಿ ರೂಗಳಲ್ಲಿ ನಿರ್ಮಾಣಗೊಂಡು ಸೋಮವಾರ ಉದ್ಘಾಟನೆಗೊಳ್ಳುತ್ತಿರುವ ಈ ಯೋಜನೆ, ನೂರಾರು ರೈತರ ಹಲವು ದಶಕಗಳ ಕನಸು ಈಗ ಸಾಕಾರಗೊಳ್ಳುತ್ತಿದ್ದು, ಕೆರೆ ತುಂಬಿಸುವ ಯೋಜನೆ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಶಾಸಕ ಸಿ.ಎಂ.ಉದಾಸಿ ಕಾಮಗಾರಿಯನ್ನು ಉದ್ಘಾಟಿಸಲಿದ್ದು, ಸಚಿವರಾದ ಆರ್.ಶಂಕರ್, ಜಮೀರಮ್ಹದ್‍ಖಾನ್, ಸಂಸದ ಶಿವಕುಮಾರ ಉದಾಸಿ, ಶಾಸಕ ಶ್ರೀನಿವಾಸ ಮಾನೆ, ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಉಪಾಧ್ಯಕ್ಷೆ ಸರಳಾ ಜಾಧವ, ರಾಮಲಿಂಗೇಶ್ವರ ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಮೂಡ್ಲಿಯವರ ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ನೀರಾವರಿ ನಿಗಮದ ಎಇಇ ಸಿ.ಎಸ್.ನಾಗನೂರ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ