ಹೊಸಪೇಟೆ:
ನೆಹರೂ ಕಾಲೋನಿಯ ಪ್ರಸಿದ್ಧ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 50 ಲಕ್ಷ ರೂ ಅನುದಾನ ನೀಡಬೇಕು ಎಂದು ಒತ್ತಾಯಿಸಿ, ಅಯ್ಯಪ್ಪ ದೇವಸ್ಥಾನ ಟ್ರಸ್ಟ್ ವತಿಯಿಂದ ಪ್ರಧಾನ ಆರ್ಚಕ ಶಂಕರನ್ ನಂಬೂದರಿ ಜಿಲ್ಲಾಧಿಕಾರಿ ರಾಮಪ್ರಸಾತ್ ಮನೋಹರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ನೂತನ ವರ್ಷಾಚರಣೆ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ನಗರದ ಹೃದಯ ಭಾಗದಲ್ಲಿರುವ ಪುರಾತನ ಅಯ್ಯಪ್ಪ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರಿದ್ದಾರೆ. ವರ್ಷದಿಂದ ವರ್ಷಕ್ಕೆ ದೇವಸ್ಥಾಕ್ಕೆ ಆಗಮಿಸುವ ಸಂಖ್ಯೆ ಆಧಿಕವಾಗುತ್ತಿದೆ. ಶ್ರೀ ಅಯ್ಯಪ್ಪ ಸ್ವಾಮಿ ಮಂಡಲ ಹಾಗೂ ಮಕರ ಪೂಜೆ ಸಂದರ್ಭದಲ್ಲಿ ನಿತ್ಯವೂ ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ದರ್ಶನ ಪಡೆಯುತ್ತಿದ್ದಾರೆ. ಈ ದಿನಗಳಲ್ಲಿ ದೇವಸ್ಥಾನದವತಿಯಿಂದ ಮಲಾಧಾರಿಗಳಿಗೆ ನಿತ್ಯವೂ ಅನ್ನದಾನ ನಡೆಯುತ್ತದೆ.
ದೇವಸ್ಥಾನದಲ್ಲಿ ಸ್ಥಳದ ಆಭಾವ, ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದ್ದು, ಭಕ್ತರಿಗೆ ತೊಂದರೆಯಾಗುತ್ತಿದೆ. ಇದನ್ನೆಲ್ಲವೂ ಗಮನದಲ್ಲಿ ಇರಿಸಿಕೊಂಡು, ದೇವಸ್ಥಾನದ ಗೋಪುರ ಇತರೆ ನವೀಕರಣಕ್ಕಾಗಿ ಜಿಲ್ಲಾಧಿಕಾರಿಗಳ ನಿಧಿಯಿಂದ 50ಲಕ್ಷ ರೂ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಗುಜ್ಜಲ ನಿಂಗಪ್ಪ, ತಹಶೀಲ್ದಾರ ಎಚ್.ವಿಶ್ವನಾಥ, ಕಂಪ್ಲಿ ತಹಶೀಲ್ದಾರ ರೇಣುಕಾ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗುರುಪ್ರಸಾದ್, ಕಣ್ಣಿ ಶ್ರೀಕಂಠ, ಗುಂಡಿ ರಮೇಶ್, ರಾಘವೇಂದ್ರ ಹಾಗೂ ಸಂತೋಷ್ ಸ್ವಾಮಿ ಸೇರಿದಂತೆ ಅಯ್ಯಪ್ಪ ಮಾಲಾಧಾರಿಗಳು ಹಾಗೂ ನೂರಾರು ಭಕ್ತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
