ಮಧುಗಿರಿ :
ತುಮಕೂರು ಕ್ಷೇತ್ರ ಸುಭಿಕ್ಷವಾಗಿರಬೇಕಾದರೆ ಬಿ.ಜೆ.ಪಿ ಪಕ್ಷದ ಪರ ಮತ ಚಲಾಯಿಸಬೇಕು ಪಕ್ಷದ ಅಭ್ಯರ್ಥಿ ಜಿ.ಎಸ್. ಬಸವರಾಜು ಜಯಶೀಲಾರಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಾಲೂಕು ಬಿಜೆಪಿ ಮಂಡಲಾಧ್ಯಕ್ಷ ಎಸ್.ಇ ರಮೇಶ್ ರೆಡ್ಡಿ ತಿಳಿಸಿದರು.
ಪಟ್ಟಣದ ಗೌರಿಬಿದನೂರು ಗೇಟ್ ಬಳಿಯಿರುವ ಬಿಜೆಪಿ ಕಛೇರಿಯಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಯುವಪಡೆ ಮೋದಿ ಬೆಂಬಲಿಸಿ ಪಕ್ಷಕ್ಷೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಮಾತಾನಾಡಿದ ಅವರು ತಾಲ್ಲೂಕಿನಲ್ಲಿ ಈ ಭಾರಿ ರೈತರಿಗೆ ವ್ಯವಸಾಯಕ್ಕೆ ಮಾತ್ರವಲ್ಲದೆ ಸಾರ್ವಜನಿಕರಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೂ ಕೂಡ ಕುಡಿಯಲೂ ನೀರಲ್ಲದಂತ ಪರಿಸ್ಥಿತಿ ಎದುರಾಗಿದೆ.
ದೇಶದಾದ್ಯಾಂತ ಪ್ರಧಾನಿ ನರೇಂದ್ರ ಮೋದಿ ರವರ ಪರ ಯುವ ಜನತೆ ಹಾಗೂ ಪ್ರಜ್ಞಾವಂತ ಮತದಾರರು ಮತ್ತೊಮ್ಮೆ ಅವರನ್ನೇ ಪ್ರಧಾನಿಯಾಗಿ ನೋಡಲು ದೇಶದ ಜನರು ಇಚ್ಚಿಸಿದ್ದಾರೆ. ತುಮಕೂರು ಜಿಲ್ಲೆಗೆ ಇಪ್ಪತ್ತನಾಲ್ಕೂ ಟಿಎಂಸಿ ನೀರು ಹೇಮಾವತಿ ಹರಿಸಬೇಕಾಗಿದ್ದ ವಿಚಾರದಲ್ಲಿ ಮಾಜಿ ಪ್ರಧಾನಿಗಳು ತಾರತಮ್ಯ ಮಾಡಬಾರದಿತ್ತು ಹೇಮಾವತಿ ನೀರಿಗಾಗಿ ಹೋರಾಟ ನಡೆಸಿದ ಜಿ.ಎಸ್. ಬಸವರಾಜು ರವರಿಗೆ ಮತ ನೀಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಮೋರ್ಚಾ ಹನುಮಂತರಾಜು, ಜಿಲ್ಲಾ ಕಾರ್ಯದರ್ಶಿ ಸುರೇಶ್‍ಚಂದ್ರ, ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಮೋಹನ್, ತುಮಕೂರು ನಗರ ಯುವ ಮೋರ್ಚಾ ಕಾರ್ಯದರ್ಶಿ ಪ್ರೀತಂ ಜೈನ್ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
