ಕಾಶ್ಮೀರ ಮಾಜಿ ಸಿಎಂಗೆ ಟಾಂಗ್ ನೀಡಿದ ಗಂಭೀರ್…!!!!

ನವದೆಹಲಿ:

       ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅವರನ್ನು ಟ್ವಿಟ್ಟರಿಲ್ಲಿ ಬ್ಲಾಕ್ ಮಾಡಿದ ಬೆನ್ನಲ್ಲೇ ಗಂಭೀರ್, ಮೆಹಬೂಬಾ ಮುಫ್ತಿ ಅವರಿಗೆ ಪ್ರತ್ಯುತ್ತರ ನೀಡಿದದ್ದಾರೆ.

      ಈ ಕುರಿತು ಪ್ರತಿಕ್ರಿಯೆ ಮಾತನಾಡಿದ ಗಂಭೀರ್ ಮುಫ್ತಿಯವರು ನನ್ನನ್ನು ಬ್ಲಾಕ್ ಮಾಡಿರಬಹುದು. ಆದರೆ ಹೀಗೆ ಮಾಡುತ್ತಾ ಹೋದ್ರೆ ದೇಶದ 130 ಕೋಟಿ ಜನರನ್ನು ಕೂಡ ಬ್ಲಾಕ್ ಮಾಡಬೇಕಾಗುತ್ತದೆ. 2014ದಲ್ಲಿ ದೇಶದಲ್ಲಿ ಒಂದು ಅಲೆ ಸೃಷ್ಟಿಯಾಗಿತ್ತು. ಈಗ ಅದು ಸುನಾಮಿಯಾಗಿ ಪರಿವರ್ತನೆಯಾಗಿದೆ ಆ ಸುನಾಮಿಯಲ್ಲಿ ಅವರು ಈಜದೇ ಇದ್ದರೆ ಕೊಚ್ಚಿ ಹೋಗಲಿದ್ದಾರೆ ಎಂದು ಹೇಳಿದ್ದಾರೆ.

      ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ಸಂವಿಧಾನದ 370 ವಿಧಿ ಮತ್ತು 35 ಎ ಕಲಂಗಳ ಕುರಿತು ಇಬ್ಬರ ನಡುವೆ ಟ್ವಿಟ್ಟರ್ ನಲ್ಲಿ ಚರ್ಚೆ ನಡೆದಿತ್ತು. ಆ ಬಳಿಕ ಮುಫ್ತಿ ಅವರು ಗಂಭೀರ್ ಅವರನ್ನು ಟ್ವಿಟ್ಟರಿನಲ್ಲಿ ಬ್ಲಾಕ್ ಮಾಡಿದ್ದಾರೆ.

      ವಿಶೇಷ ಸ್ಥಾನಮಾನ ರದ್ಧತಿಯ ಕುರಿತು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಮುಫ್ತಿ ಅವರು . ಅಲ್ಲದೇ ಜಮ್ಮು ಕಾಶ್ಮೀರದ 370ನೇ ಕಲಂನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಟ್ವೀಟ್‍ಗೆ ಆಲಮ್ ಇಕ್ಬಾಲ್‍ರ ಕವಿತೆಯನ್ನು ಸೇರಿಸಿದ್ದರು ಎನ್ನಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap